ರಾಷ್ಟ್ರೀಯ

ಮಗುವಿನ ನಾಮಕರಣಕ್ಕೆ ನಡೆದ ಮತದಾನ!

Pinterest LinkedIn Tumblr


ಅಲ್ಲೊಂದು ಚುನಾವಣಾ ಬ್ಯಾನರ್‌ ಇತ್ತು. ಮತ ಪೆಟ್ಟಿಗೆ ಇತ್ತು. ಹಲವಾರು ಮಂದಿ ಖುಷಿಯಿಂದ ಬಂದು ಮತದಾನ ಮಾಡಿದರು. ಆದರೆ ಇಲ್ಲಿ ನಡೆದಿದ್ದು ಚುನಾವಣೆಯಲ್ಲ. ಬದಲಾಗಿ ಮಗುವಿನ ನಾಮಕರಣ ಕಾರ್ಯಕ್ರಮ. ಮಹಾರಾಷ್ಟ್ರದ ದಂಪತಿಯೊಂದು ತಮ್ಮ ಮಗುವಿಗೆ ಹೆಸರು ಆರಿಸಲು ಆಯ್ದುಕೊಂಡ ಮಾರ್ಗ ಇದು.

ಇಲ್ಲಿಯ ಗೋದಿಯಾ ಜಿಲ್ಲೆಯ ಮಿಥುನ್‌ ಮತ್ತು ಮಾನ್ಸಿ ಬಾಂಗ್‌ ಎಂಬ ದಂಪತಿಗೆ ಕಳೆದ ಏ.5ರಂದು ಗಂಡು ಮಗು ಜನಿಸಿತು. ಮಗುವಿಗೆ ಹೆಸರಿಡುವಲ್ಲಿ ಗೊಂದಲಕ್ಕೀಡಾದ ದಂಪತಿ ಜೂ.15ರಂದು ಒಂದು ಕಾರ್ಯಕ್ರಮ ಏರ್ಪಡಿಸಿದ್ದರು.

ಇದಕ್ಕೆ “ಬಲಕ್‌ ನಾಮ್‌ ಚಯÞನ್‌ ಆಯೋಗ್‌’ ಎಂದು ಚುನಾವಣ ಆಯೋಗಕ್ಕೆ ಹೋಲುವ ಹೆಸರು ಮತ್ತು ಲೋಗೊ ಇರುವ ಬ್ಯಾನರ್‌ಗಳನ್ನು ಕಟ್ಟಿದ್ದರು. ಪ್ರತಿಯೊಬ್ಬ ಅತಿಥಿಗೆ ಯುವನ್‌, ಯಕ್‌Ò, ಯುವಿಕ್‌ ಎಂಬ ಮೂರು ಹೆಸರುಗಳಲ್ಲಿ ಒಂದನ್ನು ಆಯ್ಕೆ ಮಾಡಿ, ಮತ ಪತ್ರದಲ್ಲಿ ಬರೆದು, ಮತ ಪೆಟ್ಟಿಗೆಗೆ ಹಾಕಲು ಸೂಚಿಸಲಾಗಿತ್ತು. ಅದರಂತೆ 192 ಮತದಾರರು ಮತದಾನ ಮಾಡಿದರು. ಕೊನೆಗೆ 92 ಮತ ಪಡೆದ “ಯುವನ್‌’ ಎಂಬ ಹೆಸರನ್ನು ಮಗುವಿಗೆ ಇಡಲಾಯಿತು.

Comments are closed.