ರಾಷ್ಟ್ರೀಯ

ಸಾವು-ಬದುಕಿನ ಹೋರಾಟದ ನಡುವೆ ಕ್ಯಾನ್ಸರ್ ಪೀಡಿತ ಇರ್ಫಾನ್‌ರ ಹೃದಯಸ್ಪರ್ಶಿ ಲೇಖನ

Pinterest LinkedIn Tumblr


‘ಕೆಲವು ಸಮಯದ ಹಿಂದೆಯಷ್ಟೇ ನನಗೆ ನ್ಯೂರೋ ಎಂಡೋಕ್ರೈನ್ ಕ್ಯಾನ್ಸರ್‌ ಇರುವುದು ತಿಳಿದು ಬಂತು, ನನಗೆ ಬಂದಿರುವುದು ಬಲು ಅಪರೂಪದ ಕಾಯಿಲೆ ಅಂತ ನನಗೆ ಗೊತ್ತು, ಇದರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ, ಚಿಕಿತ್ಸೆ ಕುರಿತು ಏನೂ ಹೇಳಲು ಸಾಧ್ಯವಿಲ್ಲ, ನಾನು ಟ್ರಯಲ್‌ ಅಂಡ್ ಎರರ್‌ ಗೇಮ್‌ನಲ್ಲಿದ್ದೇನೆ.

ನಾನು ಆಡುತ್ತಿರುವ ‘ಗೇಮ್‌’ ತುಂಬಾ ಭಿನ್ನವಾಗಿದೆ. ನಾನು ವೇಗದ ಟ್ರೈನ್‌ನಲ್ಲಿ ಚಲಿಸುತ್ತಿದ್ದೆ, ನನ್ನಲ್ಲಿ ತುಂಬಾ ಕನಸು, ಗುರಿ, ಪ್ಲಾನ್‌ ತುಂಬಿದ್ದೆವು, ಆದರೆ ಇದ್ದಕ್ಕಿದ್ದ ಹಾಗೆ ಯಾರೋ ಬೆನ್ನು ತಟ್ಟಿ ಎಬ್ಬಿಸುತ್ತಾರೆ, ನೋಡಿದರೆ ಟಿಸಿ ‘ನಿಮ್ಮ ಜಾಗ ತಲುಪಿತು, ಇಳಿಯಿರಿ’ ಅಂತಾರೆ. ನಾನು ‘ಇಲ್ಲ…ಇಲ್ಲ ನನ್ನ ಜಾಗ ತಲುಪಿಲ್ಲ’ ಎಂತೀನಿ, ಇಲ್ಲ, ಇದಲ್ಲ…ಹೀಗೆ ಕೆಲವೊಮ್ಮೆ ಅನಿಸುತ್ತೆ.

ಇರ್ಫಾನ್‌ ಖಾನ್

ಸಾಗರದಲ್ಲಿ ಚಲಿಸುತ್ತಾ ಇರುತ್ತೇವೆ, ಇದ್ದಕ್ಕಿದ್ದಂತೆ ಭಾರೀ ಅಲೆಗಳು ಬಂದು ಅಪ್ಪಳಿಸುತ್ತವೆ, ಏನು ಮಾಡಬೇಕೆಂಬುವುದೇ ತೋಚುವುದಿಲ್ಲ, ಆದರೂ ಅದನ್ನು ನಿಯಂತ್ರಿಸಲು ಪ್ರಯತ್ನಿಸುತ್ತೇವೆ.

ನನ್ನ ಬದುಕಿಗೆ ಅಪ್ಪಳಿಸಿರುವ ಅಲೆಯಿಂದ ಶಾಕ್‌ಗೆ ಒಳಗಾಗಿದ್ದೇನೆ, ಆಸ್ಪತ್ರೆ ಭೇಟಿ ಭಯಾನಕ ಅನಿಸಲಾರಂಭಿಸಿದೆ, ಒಮ್ಮೆ ಆಸ್ಪತ್ರೆಗೆ ಭೇಟಿ ನೀಡುವಾಗ ನನ್ನ ಮಗನ ಬಳಿ ಹೇಳಿದೆ ‘ ನನ್ನಲ್ಲಿ ನಾನು ಬಯಸುವುದೇನೆಂದರೆ ಈಗಿನ ಈ ಎಲ್ಲಾ ಪರಿಸ್ಥಿತಿಗಳಿಂದ ಹೊರಬರಬೇಕು, ನಾನು ನನ್ನಷ್ಟಕ್ಕೇ ಬದುಕಬೇಕು. ಭಯ ಹಾಗೂ ಚಿಂತೆ ನನ್ನನ್ನು ಮತ್ತಷ್ಟು ಜರ್ಜರಿತವಾಗಿಸಬಾರದು.

ಇದೇ ನನ್ನ ಬಯಕೆ. ಆಗಲೇ ನೋವು ಹಿಂಡುತ್ತಿದೆ, ಆ ನೋವು ಶುರುವಾಗಿದೆಯಷ್ಟೇ, ಈಗ ಅದರ ಗುಣ ಹಾಗೂ ಆಳ ಅರ್ಥವಾಗುತ್ತಿದೆ. ಯಾವುದೇ ಸಾಂತ್ವನ ಹಾಗೂ ಸ್ಪೂರ್ತಿ ಯಾವುದೂ ಕೆಲಸ ಮಾಡುತ್ತಿಲ್ಲ. ನನ್ನ ಪ್ರಪಂಚ ನೋವಿನಿಂದ ತುಂಬಿದೆ. ನೋವೇ ದೇವರಿಗಿಂತ ದೊಡ್ಡದಾಗಿ ಕಾಣುತ್ತಿದೆ.

ಇರ್ಫಾನ್‌ ಖಾನ್

ಆಸ್ಪತ್ರೆ ತಲುಪುವಾಗ ನನ್ನ ಮೈಯಲ್ಲಿದ್ದ ಶಕ್ತಿ ಸೋರಿ ಹೋಗಿ ಬಳಲಿದ್ದೆ, ನನ್ನ ಆಸ್ಪತ್ರೆ ದೇವರ ಸ್ಟೇಡಿಯಂ ವಿರುದ್ಧ ದಿಕ್ಕಿನಲ್ಲಿದೆ ಎಂದು ಅರ್ಥವಾಯಿತು. ಮೆಕ್ಕಾ ಹೀಗಬೇಕೆನ್ನುವುದು ನನ್ನ ಬಾಲ್ಯದ ಕನಸು. ಆ ನೋವಿನಲ್ಲೂ ವಿವೈನ್‌ ರಿಚರ್ಡ್ ಈ ಪ್ರಪಂಚಕ್ಕೂ ನನಗೆ ಯಾವುದೇ ಸಂಬಂಧವಿಲ್ಲ, ಏನೂ ಸಂಭವಿಸಿಯೇ ಇಲ್ಲ ಎಂಬಂತೆ ನಗುತ್ತಿರುವ ಫೋಟೋ ನೋಡಿದೆ.

ಆಸ್ಪತ್ರೆಯಲ್ಲಿ ನನ್ನ ಕೋಣೆಯ ಬಲ ಭಾಗದಲ್ಲಿ ಕೋಮಾ ರೂಮ್ ಇದೆ. ಆಸ್ಪತ್ರೆ ರೂಮ್‌ನ ಬಾಲ್ಕನಿಯಲ್ಲಿ ನಿಂತಿರುವಾಗ ಏನೋ ವಿಚಿತ್ರ ಆಲೋಚನೆ ಮೂಡಿತು. ಸಾವು-ಬದುಕಿನ ಆಟದಲ್ಲಿ ಒಂದು ರಸ್ತೆಯಿದೆ. ಒಂದು ಕಡೆ ಆಸ್ಪತ್ರೆ, ಮತ್ತೊಂದು ಕಡೆ ಸ್ಟೇಡಿಯಂ. ಆದರೆ ಒಂದು ಇನ್ನೊಂದರ ಭಾಗವಲ್ಲ, ಮುಂದೇನು ಆಗುತ್ತೆ ಅಂತ ಗೊತ್ತಿಲ್ಲ, ಈಗ ನಾನು ಮಾಡಬೇಕಾಗಿರುವುದು ಒಂದೇ ನನ್ನ ಆಟವನ್ನು ಚೆನ್ನಾಗಿ ಆಡುವುದು.

ಹೀಗೆ ಅನಿಸಿದ್ದೆ ಇದು ನನ್ನನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ, ಇಲ್ಲಿಂದ ಎಂಟು ತಿಂಗಳು ಅಥವಾ ನಾಲ್ಕು ತಿಂಗಳು, ಇಲ್ಲದಿದ್ದರೆ ಎರಡು ವರ್ಷ ಎಂಬ ಆಲೋಚನೆ ಮರೆಯಾಗಿದೆ. ಹೊಸ ನಂಬಿಕೆಗೆ ಸಂಪೂರ್ಣ ಶರಣಾಗಿದ್ದೇನೆ.

ಮೊದಲ ಬಾರಿಗೆ ಸ್ವತಂತ್ರದ ಅನುಭವ ಆಗಿದೆ. ಜೀವನದ ಮ್ಯಾಜಿಕ್ ಅನ್ನು ಅನುಭವಿಸುತ್ತಿದ್ದೇನೆ. ನನ್ನ ಆತ್ಮವಿಶ್ವಾಸ ಹೆಚ್ಚಾಗಿದೆ. ನನ್ನ ಪ್ರತಿಯೊಂದು ಕಣದಲ್ಲೂ ಆತ್ಮವಿಶ್ವಾಸ ತುಂಬಿ ಕೊಂಡಿದೆ.

ಇರ್ಫಾನ್‌ ಖಾನ್‌

ನನ್ನ ಜೀವನದುದ್ದಕ್ಕೂ ಜನರು ನನ್ನ ಹಿತ ಬಯಸಿದ್ದಾರೆ, ನನಗಾಗಿ ಪ್ರಾರ್ಥಿಸಿದ್ದಾರೆ. ವಿಶ್ವದ ಬೇರೆ-ಬೇರೆ ಕಡೆಯ ಜನ, ಬೇರೆ-ಬೇರೆ ಸಮಯಕ್ಕಾಗಿ ನನಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ, ನನಗೆ ಗೊತ್ತಿಲ್ಲದವರೂ ನನಗಾಗಿ ಪ್ರಾರ್ಥಿಸಿದ್ದಾರೆ. ಇವೆಲ್ಲಾ ಸೇರಿ ನನ್ನಲ್ಲಿ ದೊಡ್ಡ ಶಕ್ತಿ ಮೂಡಿದೆ.

ಪ್ರತಿಯೊಂದು ಗಿಡ, ಕೊಂಬೆ, ಎಲೆ, ಹೂ, ಪಕ್ಷಿ ಎಲ್ಲವೂ ನನ್ನಲ್ಲಿ ಅಚ್ಚರಿ, ಸಂತೋಷ, ಕುತೂಹಲ ಮೂಡಿಸುತ್ತಿದೆ.

ಈಗ ನನಗೆ ಅರ್ಥವಾಗಿದೆ ಯಾವುದೇ ಅಲೆಗಳನ್ನು ನಿಯಂತ್ರಿಸಬೇಕಾಗಿಲ್ಲ, ಪ್ರಕೃತಿಯೊಂದಿಗೆ ಹೊಂದಿಕೊಂಡರಷ್ಟೇ ಸಾಕು’.

Comments are closed.