ಕರಾವಳಿ

ಜೂನ್ 22ರಂದು “ಅಮ್ಮೆರ್ ಪೊಲೀಸ್” ತುಳು ಚಿತ್ರ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ

Pinterest LinkedIn Tumblr

ಮಂಗಳೂರು, ಜೂನ್ 20: ಲಕುಮಿ ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾದ ರಾಜೇಶ್.ಬಿ.ಶೆಟ್ಟಿ ನಿರ್ಮಾಣದ, ಕೆ.ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ “ಅಮ್ಮೆರ್ ಪೊಲೀಸ್” ತುಳು ಚಿತ್ರ ಜೂನ್ 22 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ಲಕುಮಿ ಕ್ರಿಯೇಷನ್ಸ್ ನ ಲ| ಕಿಶೋರ್‍ ಡಿ.ಶೆಟ್ಟಿ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಮ್ಮೆರ್ ಪೊಲೀಸ್” ಸಿನಿಮಾವು ಮಂಗಳೂರಿನ ಜ್ಯೋತಿ, ಪಿವಿಆರ್, ಸಿನಿಪೊಲೀಸ್, ಬಿಗ್ ಸಿನಿಮಾಸ್, ಸುರತ್ಕಲ್‌ನ ನಟರಾಜ್, ಮೂಡಬಿದಿರೆಯ ಅಮರಶ್ರೀ, ಕಾರ್ಕಳದ ರಾಧಿಕ ಹಾಗೂ,ಪ್ಲಾನೆಟ್, ಪುತ್ತೂರಿನ ಅರುಣಾ, ಬೆಳ್ತಂಗಡಿಯ ಭಾರತ್, ಸುಳ್ಯದ ಸಂತೋಷ್ ಒಟ್ಟು 14 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಹೇಳಿದರು.

ಚಿತ್ರದ ನಿರ್ದೇಶಕ ಸೂರಜ್ ಶೆಟ್ಟಿ ಮಾತನಾಡಿ, ಸಿನಿಮಾಕ್ಕೆ ಇರಾ, ಮುಡಿಪು, ಪ್ರದೇಶದಲ್ಲಿ ಒಂದೇ ಹಂತದಲ್ಲಿ 24 ದಿನಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸುಮಾರು 150 ಮಂದಿ ಈ ಚಿತ್ರದಲ್ಲಿ ನಟಿಸಿರುವುದು ಈ ಚಿತ್ರದ ವಿಶೇಷತೆಯಾಗಿದೆ.ಸಂಪೂರ್ಣ ಹಾಸ್ಯ ಮನರಂಜನೆಯನ್ನು ಒಳಗೊಂಡ ಈ ಸಿನಿಮಾದಲ್ಲಿ ಸಮಾಜಕ್ಕೆ ಸಂದೇಶವೂ ಇದೆ ಎಂದರು.

ಜೂನ್ 22 ರಂದು ಶುಕ್ರವಾರ ಬೆಳಿಗ್ಗೆ 9:15 ಕ್ಕೆ ಜ್ಯೋತಿ ಚಿತ್ರ ಮಂದಿರದಲ್ಲಿ ಅಮ್ಮೆರ್ ಪೊಲೀಸ್ ಸಿನಿಮಾದ ಬಿಡುಗಡೆ ಸಮಾರಂಭ ಜರಗಲಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಸಹಿತಾ ಹಲವಾರು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು ಎಂದು ಸೂರಜ್ ಶೆಟ್ಟಿ ತಿಳಿಸಿದರು.

ನಿರ್ಮಾಪಕ ರಾಜೇಶ್.ಬಿ.ಶೆಟ್ಟಿ, ನಾಯಕ ನಟ ರೂಪೇಶ್ ಶೆಟ್ಟಿ, ಹಾಸ್ಯ ನಟ ವಿಸ್ಮಯ ವಿನಾಯಕ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸೂರಜ್ ಶೆಟ್ಟಿ ನಿರ್ದೇಶನದ ಮೂರನೇ ಚಿತ್ರ :

ಸಿನಿಮಾಕ್ಕೆ ಕತೆ, ಚಿತ್ರಕತೆ, ಸಾಹಿತ್ಯ, ಸಂಭಾಷಣೆ, ಸಾಹಸ, ನೃತ್ಯ, ಸಂಯೋಜನೆಯ ಜೊತೆಗೆ ಸಿನಿಮಾವನ್ನು ನಿರ್ದೇಶನ ಮಾಡಿದವರು ಕೆ.ಸೂರಜ್ ಶೆಟ್ಟಿ. ಎಕ್ಕಸಕ, ಪಿಲಿಬೈಲ್ ಯಮುನಕ್ಕ ದಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಕೆ.ಸೂರಜ್ ಶೆಟ್ಟಿ, ಲಕುಮಿ ಬ್ಯಾನರ್ ನಲ್ಲಿ ನಿರ್ದೇಶಿಸಿದ ಮೂರನೇ ಸಿನಿಮಾ ಇದಾಗಿದೆ.

ಸಿನಿಮಾಕ್ಕೆ ಸಚಿನ್.ಎಸ್.ಶೆಟ್ಟಿ ಅವರ ಛಾಯಾಗ್ರಹಣವಿದೆ. ಸಂದೀಪ್ ಆರ್ ಬಳ್ಳಾಲ್ ಸಂಗೀತ ನೀಡಿದ್ದಾರೆ. ಮನು ಶೇರಿಗಾರ್ ಅವರು ಸಂಕಲನ ಮಾಡಿದ್ದಾರೆ.ಪ್ರಸಾದ್ ಶೆಟ್ಟಿ ರೀರೆಕಾರ್ಡಿಂಗ್ ಮಾಡಿದ್ದಾರೆ.

ತಾರಾಗಣದಲ್ಲಿ ರೂಪೇಶ್ ಶೆಟ್ಟಿ, ಪೂಜಾ ಶೆಟ್ಟಿ, ನವೀನ್.ಡಿ.ಪಡೀಲ್. ಅರವಿಂದ ಬೋಳಾರ್, ವಿಸ್ಮಯ ವಿನಾಯಕ್, ಮೈಮ್ ರಾಮ್‍‌ದಾಸ್, ಪ್ರಜ್ವಲ್ ಪ್ರಕಾಶ್, ನಿತೇಶ್ ಶೆಟ್ಟಿ ಎಕ್ಕಾರ್, ಸತೀಶ್ ಬಂದಲೆ, ದೀಪಕ್ ರೈ ಪಣಾಜೆ, ಪ್ರಸನ್ನ ಶೆಟ್ಟಿ ಬೈಲೂರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಸೂರಜ್ ಶೆಟ್ಟಿ, ರವಿರಾಮ ಕುಂಜ, ಅನಿಲ್, ಆಶೋಕ್ ಬೇಕೂರ್, ರಾಜೇಶ್ ಬಂದ್ಯೋಡ್, ಸರಿತಾ ಶೆಟ್ಟಿ, ಸೀಮಾ ಮೊದಲಾದವರು ಇದ್ದಾರೆ.

Comments are closed.