ಕರಾವಳಿ

‘ಪಾಗಲ್ ಪ್ರೇಮಿ’ಯ ವನವಾಸ; ಪ್ರೇಯಸಿಗಾಗಿ ಕಾದು ಗುಹೆಯಲ್ಲಿ ಬದುಕುತ್ತಿದ್ದವನಿಗೆ ಪುನರ್ಜನ್ಮ!

Pinterest LinkedIn Tumblr

ಕುಂದಾಪುರ: ಜಗತ್ತಿನಲ್ಲಿ ಪ್ರೀತಿಗಾಗಿ ಏನೇನೋ ಆಗಿದೆ..ಯುದ್ಧಗಳು ನಡೆದಿದೆ…ಮಾರಾಮಾರಿಗಳಾಗಿದೆ..ತಲೆಗಳು ಉರುಳಿದೆ…ಅದೆಷ್ಟೋ ಮಂದಿ ಬದುಕು ಕಳೆದುಕೊಂಡಿದ್ದಾರೆ..ಅದೆಷ್ಟೋ ಮಂದಿಪಾಗಲ್ ಆಗಿದ್ದಾರೆ. ಇತಿಹಾಸ ಹುಡುಕುತ್ತಾ ಹೊರಟರೇ ಅಮರ ಪ್ರೇಮಿಗಳ ಕತೆ ನೆನಪಾಗುತ್ತೆ.

ಎಷ್ಟೇ ಪ್ರೇಮಕತೆಗಳು ಬಂದರೂ ಕೂಡ ಜಮಾನದಲ್ಲಿ ದಿನಕ್ಕೊಂದು ಹೊಸ ಹೊಸ ಲವ್ ಸ್ಟೋರಿ ಹುಟ್ಟಿಕೊಳ್ಳೋದು ಸಹಜ. ಅದರಲೂ ಎಲ್ಲವೂ ಒಂದಕ್ಕಿಂತ ಒಂದು ಡಿಪರೆಂಟ್. ಇಂತಾದ್ದೇ ಒಂದು ಪ್ರೇಮಕತೆಗೆ ಭಗ್ನಪ್ರೇವಿ ಹೊಸ ಸೇರ್ಪಡೆಯಾಗಿದೆ. ಈ ಪ್ರೇಮಿ ತನ್ನ ಪ್ರಿಯತಮೆ ಬರುತ್ತಾಳೆಂಬ ಭರವಸೆಲ್ಲಿ ಕಾಡು ಸೇರಿ ಕೂತು ಬಿಟ್ಟಿದ್ದಾನೆ..ಮರದ ಬುಡವೇ ಮನೆ ಭೂಮಿತಾಯಿಯೇ ಹಾಸಿಗೆ, ಹೊಟ್ಟೆ ಹಸಿವಿಗೆ ದೇವಸ್ಥಾನ, ಯಾರಾದರೂ ಪಾಪ ಅಂತ ಕೊಟ್ಟ ಹಣವೇ ಖರ್ಚಿಗಾಗುತ್ತಿತ್ತು.

ಕುಂದಾಪುರ ತಾಲೂಕು, ಹಳ್ಳಿಹೊಳೆ ಗ್ರಾಮ ಕಮಲಶಿಲೆ ಕಾಡೇ ಪ್ರೇಮಿಯ ವಾಸ ಸ್ಥಳವಾಗಿತ್ತು. ಆತ ಪ್ರೇಯಸಿ ಬರುತ್ತಾಳೆ ಎಂಬ ನಿರೀಕ್ಷೆಯಲ್ಲಿ ಧಾರಾಕಾರ ಮಳೆಯಲ್ಲಿಯೂ ಕಾಡಿನಲ್ಲಿ ಕಾಯುತ್ತಿದ್ದ. ಹೊಟ್ಟೆಗೆ ಸರಿಯಾದ ಆಹಾರ ಇಲ್ಲದೆ ನಾಗರಿಕ ಸಮಾಜದಲ್ಲಿ ಅನಾಗರಿಕ ಬದುಕು ಸಾಗಿಸುತ್ತಿದ್ದ. ಕೇರಳ ಎರ್ನಾಕುಲಂ ಜಿಲ್ಲೆಯ ತನ್ವಿಕ್ರಮ್ (46) ಮಾನಸಿಕ ಖಿನ್ನತೆಗೆ ಒಳಪಟ್ಟವನಂತೆ ಕಂಡು ಬರುತ್ತಾನೆ. ಇಂಗ್ಲೀಷ್ ಮಳಯಾಳಂ ಭಾಷೆಯಲ್ಲಿ ಪ್ರಭುದ್ದತೆ ಇದೆ. ೨೦ ವರ್ಷಗಳ ಹಿಂದೆ ಯುವತಿಯೊಬ್ಬಳ ಪ್ರೀತಿಸಿದ್ದೆ, ಆಕೆ ನನ್ನ ಪ್ರೇಮ ನಿರಾಕರಿಸಿದಳು. ಆದರೂ ಭರವಸೆಯಿಂದ ಆಕೆ ಬರುತ್ತಾಳೆ ಎಂಬ ನಿರೀಕ್ಷೆಯಲ್ಲಿದ್ದೆ ಎನ್ನುತ್ತಾನೆ ಈ ಡಿಗ್ರಿ ಹೋಲ್ಡರ್!

ಕುಂದಾಪುರ ತಾಲೂಕಿನ ಹಳ್ಳಿಹೊಳೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮ ನಾಯಕ್ ಹಾಗೂ ಅವರ ಸ್ನೇಹಿತರು ಅಪರಿಚಿತ ವ್ಯಕ್ತಿ ಬಗ್ಗೆ ಮಾಹಿತಿ ನೀಡಿದ್ದರು. ಶಂಕರನಾರಾಯಣ ಪೋಲಿಸ್ ಠಾಣೆ ಪಿ‌ಎಸ್‌ಐ ಪ್ರಕಾಶ್ ಹಾಗೂ ಎ‌ಎಸ್‌ಐ ಚಂದ್ರಶೆಖರ್ ಸಹಕಾರ ನೀಡಿದರು..ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಅವರು ಕೇರಳ ಮಂಜೇಶ್ವರ ಸ್ನೇಹಾಲಯ ನೊಂದವರ ಪುನರ್ವಸತಿ ಆಶ್ರಮ ವ್ಯವಸ್ಥಾಪಕ ಜೋಸೇಪ್‌ಗೆ ಕರೆ ಮಾಡಿ ವ್ಯಕ್ತಿಗೆ ಚಿಕಿತ್ಸೆ ಸಹಕರಿಸುವಂತೆ ಮನವಿ ಮಾಡಿದರು. ಅಷ್ಟೇ ಅಲ್ಲದೇ ವಿಶು ಶೆಟ್ಟಿ ತಮ್ಮ ವಾಹನದಲ್ಲಿಯೇ ಆಶ್ರಮಕ್ಕೆ ದಾಖಲಿಸಿದ್ದಾರೆ.

ಕಳೆದ ಏಳೆಂಟು ತಿಂಗಳಿಂದ ಅಪರಿಚಿತ ಕಮಲಶಿಲೆ, ಹಳ್ಳಿಹೊಳೆ ಪರಿಸರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮೊದ ಮೊದಲು ಯಾರೂ ಅಷ್ಟಾಗಿ ಗಮನಿಸಿರಲಿಲ್ಲ. ಕಮಲಶಿಲೆ ದೇವಸ್ಥಾನಕ್ಕೆ ಒಮ್ಮೊಮ್ಮೆ ಊಟಕ್ಕೆ ಬರುತ್ತಿದ್ದ ಬಿಟ್ಟರೆ ಈತ ಯಾರು ಎಲ್ಲಿಯವ ಎಲ್ಲಿರುತ್ತಾನೆ ಎನ್ನುವ ಯಾರೂ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ನಕ್ಸಲೈಟ್ ಪ್ರಭಾವವಿರುವ ಪ್ರದೇಶವಾಗಿದ್ದರಿಂದ ನೈಕ್ಸಲೈಟ್ ಇರಬಹುದಾ ಎಂಬ ಅನುಮಾನ ಕೂಡಾ ಹುಟ್ಟು ಹಾಕಿತ್ತು. ಅಪರಿಚಿತ ಕುತೂಹಲದ ವ್ಯಕ್ತಿ ಬೆನ್ನಿಗೆ ಬಿದ್ದು ಶೋಧನೆ ನಡೆಸಿದರ ಪರಿಣಾಮ ಈತನೊಬ್ಬ ಚಿತ್ತ ಚಂಚಲ ವ್ಯಕ್ತಿ ಎನ್ನೋದು ಗೊತ್ತಾಯಿತು. ಈತನ ನಿರ್ಗಳ ಇಂಗ್ಲಿಷ್ ಸ್ಪೀಚ್ ಈತನನ್ನು ವಿದ್ಯಾವಂತ ಎನ್ನುವುದನ್ನು ಸೂಚಿಸುತ್ತಿತ್ತು. ಬೇಸಿಗೆಯಲ್ಲಿ ಜನ ಸುಮ್ಮನಿದ್ದರು. ಮಳೆಗಾದಲ್ಲಿ ಕಮಲಶಿಲೆ ಸುಪಾರ್ಶ್ವ ಗುಹೆ ಬಳಿ ದಿನಕಳೆಯುತ್ತಿದ್ದು, ರಾತ್ರಿ ಅಲ್ಲೆ ಮಲಗುತ್ತಿದ್ದ. ಮಳೆಯಲ್ಲೂ ಅಲ್ಲೇ ಇರುವುದನ್ನು ಕಂಡು ಪರಿಸರದ ಜನ ಉಡುಪಿ ಅಂಬಲಪಾಡಿ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಹಾಗೂ ಸ್ಥಳೀಯ ನಾಗರಿಕ ಸಮಹಕಾರದಲ್ಲಿ ಯುವಕ ಕಾಡಿಂದ ನಾಡಿಗೆ ಶಿಪ್ಟ್ ಆಗಿದ್ದಾನೆ.

ಉಡುಪಿ ಜಿಲ್ಲೆಯಲ್ಲಿ ನಿರ್ಗತಿಕರಿಗೆ ಅನಾಥರಿಗೆ ನೆಲೆ ಕಲ್ಪಿಸಲು ಬೇಕಾದ ಸರಿಯಾದ ವ್ರದ್ದಾಶ್ರಮ, ಪುರ್ನವಸತಿ ಕೇಂದ್ರಗಳ ವ್ಯವಸ್ಥೆ ಇಲ್ಲ , ಮಾನಸಿಕವಾಗಿ ನೊಂದು ನಾಗರಿಕ ಸಮಾಜದಲ್ಲಿ ಅನಾಗರಿಕವಾಗಿ ಬದುಕುವ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಿಸುವಂತ ವ್ಯವಸ್ಥೆಯೂ ಸರಕಾರದಿಂದ ಜಿಲ್ಲೆಯಲ್ಲಿ ಇಲ್ಲವಾಗಿದೆ. ನೊಂದ ಜೀವಗಳಿಗೆ ಆಶ್ರಯ ಕಲ್ಪಿಸಲು ಹೊರ ರಾಜ್ಯದಲ್ಲಿ ಇರುವ ಖಾಸಗಿ ಆಶ್ರಯ ಸಂಸ್ಥೆಗಳನ್ನು ಅವಲಂಬಿಸಬೇಕಾಗಿದೆ. ಇನ್ನಾದರೂ ಜಿಲ್ಲಾಡಳಿತ ಇಂತಹ ಮೂಲಭೂತ ವ್ಯವಸ್ಥೆಗಳ ಕುರಿತು ಹೆಚ್ಚು ಗಮನ ಹರಿಸಬೇಕಾಗಿದೆ.
– ವಿಶು ಶೆಟ್ಟಿ ಅಂಬಲಪಾಡಿ, ಸಮಾಜ ಸೇವಕ.

Comments are closed.