ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಅರ್ಡೆರ್ನ್ ಅವರು ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ಅಧಿಕಾರದಲ್ಲಿರುವಾಗಲೇ ಮಗುವಿಗೆ ಜನ್ಮ ನೀಡಿರುವುದು ವಿಶೇಷವಾಗಿದೆ.
ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂದಾ ಅರ್ಡೆರ್ನ್ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅಧಿಕಾರದಲ್ಲಿರುವಾಗಲೇ ಮಗುವಿಗೆ ಜನ್ಮ ನೀಡಿದ ವಿಶ್ವದ ಎರಡನೇ ಪ್ರಧಾನಿಯಾಗಿದ್ದಾರೆ. ತನ್ನ ಮಗು ಹಾಗೂ ಪತ್ನಿಯೊಂದಿಗಿರುವ ಚಿತ್ರವನ್ನು ಸಾಮಾಜಿಕ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು 37ರ ಹರೆಯದ ಜಸಿಂದಾ ನ್ಯೂಜಿಲೆಂಡ್ ನ ಅತೀ ಕಿರಿಯ ಪ್ರಧಾನಿಯಾಗಿದ್ದು, ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಈಗ ತಮ್ಮ ಮೊದಲ ಮಗುವಿಗೆ ಜನ್ಮ ನೀಡುವ ಮೂಲಕ ಅಧಿಕಾರವಧಿಯಲ್ಲಿ ತಾಯಿಯಾದ ನ್ಯೂಜಿಲ್ಯಾಂಡ್ ನ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರಸ್ತುತ ಜಸಿಂದಾ ಅರ್ಡೆರ್ನ್ ಅವರು ಆರು ವಾರಗಳ ಹೆರಿಗೆ ರಜೆಯಲ್ಲಿದ್ದು, ಇವರ ಕೆಲಸವನ್ನು ಉಪ ಪ್ರಧಾನಿ ವಿನ್ಸ್ಟನ್ ಪೀಠರ್ ನಿರ್ವಹಿಸುತ್ತಿದ್ದಾರೆ.
ನ್ಯೂಜಿಲ್ಯಾಂಡ್ ನ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆ ಅಕ್ಲಂಡ್ ನಲ್ಲಿ ಹೆರಿಗೆಯಾಗಿದ್ದು, ಪತಿ ಟಿ.ವಿ ನಿರೂಪಕ ಕ್ಲಾರ್ಕ್ ಗೇಪೋರ್ಡ್ ಜತೆಗಿದ್ದರು. ಈ ಹಿಂದೆ ಪಾಕ್ ಪ್ರಧಾನಿಯಾಗಿದ್ದ ಬೆನಜೀರ್ ಭುಟ್ಟೋ 1990ರಲ್ಲಿ ತಮ್ಮ ಅಧಿಕಾವಧಿಯಲ್ಲಿ ತಾಯಿಯಾಗಿದ್ದರು.
Comments are closed.