ಕುಂದಾಪುರ: ಬೈಂದೂರು ತಾಲೂಕಿನಲ್ಲಿ ಇಂದು ಮಧ್ಯಾಹ್ನ ಸುಮಾರಿಗೆ ಒಂದಷ್ಟು ಕುತೂಹಲ ಏರ್ಪಟ್ಟಿತ್ತು. ಗೋಣಿ ಚೀಲವೊಂದರಲ್ಲಿ ಮೂರು ಸಾವಿರಕ್ಕೂ ಅಧಿಕ ಪಡಿತರ ಚೀಟಿಗಳು ಕಾಣಸಿಕ್ಕಿದ್ದು ಇದಕ್ಕೆ ಕಾರಣವಾಗಿತ್ತು.
ಬೈಂದೂರು ತಾಲೂಕು ಶಿರೂರು ಗ್ರೀನ್ ವ್ಯಾಲಿ ಶಾಲೆ ಎದುರು ಹೆದ್ದಾರಿ ಸಮೀಪದ ಹಳ್ಳದಲ್ಲಿ ಈ ಗೋಣಿ ಚೀಲ ಪತ್ತೆಯಾಗಿತ್ತು, ಸ್ಥಳೀಯರ್ಯಾರೋ ಚೀಲ ಪರಿಶೀಲನೆ ಮಾಡುವಾಗ ಸಾವಿರಾರು ಪಡಿತರ ಚೀಟಿ ಪತ್ತೆಯಾಗಿತ್ತು. ಕೂಡಲೇ ಅವರು ಮಾಧ್ಯಮಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ನೋಡುವಾದ ಇದೆಲ್ಲವೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ಬಾಳ ಕ್ಷೇತ್ರದ ಪಡಿತರ ಚೀಟಿಗಳಾಗಿತ್ತು. ಅವರು ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೇಸಿದ್ದಾರೆ. 2003-2004 ಇಸವಿಯ ಪಡಿತರ ಚೀಟಿಗಳು ಇದಾಗಿದ್ದು ಬಹುತೇಕ ಎಲ್ಲವೂ ರದ್ಧಾದ ಪಡಿತರ ಚೀಟಿ ಎನ್ನಲಾಗುತ್ತಿದೆ.
ರದ್ದಾದ ಪಡಿತರ ಕಾರ್ಡ್ ವಿಲೇವಾರಿ ಮಾಡಿದ ರೀತಿ ತಪ್ಪಾಗಿದ್ದು, ಕಾನೂನು ಪ್ರಕಾರ ಈ ಮಾದರಿ ವಿಲೇವಾರಿ ಸರಿಯಲ್ಲ. ವ್ಯವಸ್ಥಿತವಾಗಿ ರದ್ದಾದ ಕಾರ್ಡ್ ವಿಲೇವಾರಿ ಮಾಡಬೇಕಿತ್ತು. ಕ್ಯಾನ್ಸಲ್ ಆದ ಕಾರ್ಡುಗಳನ್ನು ಗುಜರಿಗೆ ನೀಡಿದ ಹಾಗಿದೆ. ಗುಜರಿಯವರು ಸಾಗಿಸುವ ವೇಳೆ ವಾಹನದಿಂದ ಗೋಣಿ ಚೀಲ ಬಿದ್ದಿರುವ ಸಾಧ್ಯತೆಯೂ ಇದೆ ಎಮ್ದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೋರ್ವರು ತಿಳಿಸಿದ್ದಾರೆ.
Comments are closed.