ಕರ್ನಾಟಕ

ನನ್ನ ಆರೋಗ್ಯದ ಗುಟ್ಟು ಶ್ರಮ ಜೀವನ, ಮಿತ ಆಹಾರ: ದೇವೇಗೌಡ

Pinterest LinkedIn Tumblr


ಬೆಂಗಳೂರು: ’23ನೇ ವಯಸ್ಸಿನಲ್ಲಿ ನಾನು ಕಾಂಟ್ರಾಕ್ಟ್ ಶುರು ಮಾಡಿದೆ. ಆಗ ಒಂದು ಸೈಕಲ್ ಇವತ್ತು. ಬೆಳಗ್ಗೆ 5ರಿಂದ ಕೆಲಸ ಶುರು ಮಾಡುತ್ತಿದ್ದೆ. 70-80 ಕಿ.ಮೀ ಸೈಕಲ್ ತುಳಿಯುತ್ತಿದ್ದೆ. ಇದಕ್ಕಿಂತ ವ್ಯಾಯಾಮ ಬೇಕೆ, ಮೊದಲಿನಿಂದಲೂ ನಾನು ಶ್ರಮ ಜೀವಿ. ಮಿತ ಆಹಾರಿ. ಇದೇ ನನ್ನ ಆರೋಗ್ಯದ ಗುಟ್ಟು,’ ಎಂದು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಹೇಳಿದ್ದಾರೆ.

ಪ್ರಧಾನಿ ಮೋದಿ ಯೋಗಕ್ಕೆ ಒಂದು ಸ್ವರೂಪ ನೀಡಿದ್ದಾರೆ. ಹಿಂದೆ ಋಷಿ, ಮುನಿಗಳು ಯೋಗದಿಂದ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ಹೀಗಾಗಿಯೇ ಅವರು 100,200 ಬದುಕುತ್ತಿದ್ದರು. ಈಗಲೂ ಇಂಥ ಸಾಧಕರು ಹಿಮಾಲಯದಲ್ಲಿ ಬದುಕುತ್ತಿದ್ದಾರೆ ಎಂದರು.

ಅದ್ಯಾರೋ ಚೇಂಬರ್ ಆಫ್ ಕಾಮರ್ಸ್‌ನವರು ಬಂದು ಪ್ಯಾಲೇಸ್ ಗ್ರೌಂಡ್‌ನಲ್ಲಿ ಯೋಗಾ ಡೇ ಮಾಡುತ್ತೇವೆ ಅಂದರು. ನೀವು ಬರಬೇಕು ಅಂತ ಆಹ್ವಾನ ನೀಡಿದರು. ನಾನು ಯಾವಾಗ ನಾನೇ ಯೋಗ ಮಾಡುತ್ತೇನೆ ಅಂತ ಹೇಳಿದೆನೋ ಅವರು ವಾಪಸ್ ಬರಲೇ ಇಲ್ಲ. ಮೋದಿಗಾಗಲಿ, ಇತರಿಗಾಗಲಿ ನಾನು ಫಿಟ್ನೆಸ್‌ ಚಾಲೆಂಜ್‌ ಹಾಕುತ್ತಿಲ್ಲ ಎಂದು ದೇವೇಗೌಡ ಹೇಳಿದರು.

ಗಾಂಧಿ, ಪರಮಹಂಸ, ವಿವೇಕಾನಂದ ಹೀಗೆ ಮಹಾ ಪುರುಷರೆಲ್ಲ ಕೂಡ ಯೋಗ ಸಾಧಕರು. ಕ್ಯಾನ್ಸರ್, ಹೃದಯ ಸಂಬಂಧಿ ತೊಂದರೆಗಳು ಸೇರಿದಂತೆ ಸಾಕಷ್ಟು ಆರೋಗ್ಯ ಸಮಸ್ಯೆ ಯೋಗದಿಂದ ಗುಣಮುಖವಾಗುವುದು ಎಂದು ಎಚ್‌ಡಿಡಿ ಹೇಳಿದರು.

ನೂತನ ನೂತನ ಶಾಲೆ ಆರಂಭಿಸುವಾಗ ಕಡ್ಡಾಯವಾಗಿ ಆಟದ ಮೈದಾನ ಇರಲೇಬೇಕು. ವಿದ್ಯಾರ್ಥಿಗಳ ವಿಕಾಸಕ್ಕೆ ವ್ಯಾಯಾಮ, ಯೋಗ ಅಗತ್ಯ. ಇದನ್ನು ಎಲ್ಲ ಶಾಲೆಗಳಲ್ಲಿ ಅನುಷ್ಠಾನಕ್ಕೆ ತರುವ ದಿಸೆಯಲ್ಲಿ ರಾಜ್ಯ ಸರಕಾರಕ್ಕೆ ಮನವಿ ಮಾಡುತ್ತೇನೆ. ಆದರೆ ಬೆಂಗಳೂರಿನಲ್ಲಿ ವ್ಯಾಯಾಮ ಮಾಡಕ್ಕೆ ಕೆಲವು ಶಾಲೆಗಳಲ್ಲಿ ಆಟದ ಮೈದಾನಗಳೇ ಇಲ್ಲ ಎಂದು ಅವರು ವಿಷಾದಿಸಿದರು.

Comments are closed.