ಅಂತರಾಷ್ಟ್ರೀಯ

ಫೀಫಾ ವಿಶ್ವಕಪ್ ಆಟಗಾರರಿಂದ ಗರ್ಭಿಣಿಯರಾದರೆ ಜೀವನಪರ್ಯಂತ ಉಚಿತ ಬರ್ಗರ್ : ಕ್ಷಮೆ ಕೇಳಿದ ಬರ್ಗರ್ ಕಿಂಗ್

Pinterest LinkedIn Tumblr

ಮಾಸ್ಕೋ: ಫೀಫಾ ವಿಶ್ವಕಪ್ ಆಟಗಾರರಿಂದ ಗರ್ಭಿಣಿಯರಾದರೆ ಜೀವನಪರ್ಯಂತ ಉಚಿತ ಬರ್ಗರ್ ನೀಡುವ ಕುರಿತು ಜಾಹಿರಾತು ನೀಡಿದ್ದ ಬರ್ಗರ್ ಕಿಂಗ್ ಸಂಸ್ಥೆ ಇದೀಗ ಕ್ಷಮೆ ಯಾಚಿಸಿದೆ.

ಅಂತಾರಾಷ್ಟ್ರೀಯ ಬರ್ಗರ್ ತಯಾರಿಕಾ ಸಂಸ್ಥೆ ಬರ್ಗರ್ ಕಿಂಗ್ ತನ್ನ ಜಾಹಿರಾತಿನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕ್ಷಮೆ ಯಾಚಿಸಿದೆ.

ಈ ಹಿಂದೆ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದ ಬರ್ಗರ್ ಕಿಂಗ್ ಸಂಸ್ಥೆ ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ದೊಂಡಿರುವ ಫುಟ್ಬಾಲ್ ಆಟಗಾರರಿಂದ ಗರ್ಭಿಣಿಯರಾಗುವ ಯುವತಿಯರಿಗೆ ತಾನು ಜೀವನ ಪರ್ಯಂತ ಬರ್ಗರ್ ಅನ್ನು ಉಚಿತವಾಗಿ ನೀಡುತ್ತೇನೆ ಮತ್ತು 47 ಸಾವಿರ ಡಾಲರ್ ನಗದು ನೀಡುತ್ತೇನೆ ಎಂದು ಘೋಷಣೆ ಮಾಡಿತ್ತು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾದ ಬೆನ್ನಲ್ಲೇ ಬರ್ಗರ್ ಕಿಂಗ್ ಸಂಸ್ಥೆಯ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಇದೀಗ ತನ್ನ ಕೀಳು ಅಭಿರುಚಿ ವಿರುದ್ಧ ಭುಗಿಲೆದ್ದಿರುವ ಆಕ್ರೋಶವನ್ನು ಮನಗಂಡಿರುವ ಬರ್ಗರ್ ಕಿಂಗ್ ಸಂಸ್ಥೆ ಬಹಿರಂಗ ಕ್ಷಮೆ ಯಾಚಿಸಿದೆ. ಅಲ್ಲದೆ ಇಂತಹ ಘಟನೆ ಮತ್ತೆ ಮರುಕಳಿಸಿದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದೆ. ಅಲ್ಲದೆ ಈ ಘಟನೆ ತನ್ನ ಉತ್ಪನ್ನಗಳ ಮಾರಾಟದ ಮೇಲೆ ಪರಿಣಾಮ ಬೀರದು ಎಂದೂ ವಿಶ್ವಾಸ ವ್ಯಕ್ತಪಡಿಸಿದೆ.

ಇತ್ತೀಚೆಗಷ್ಟೇ ರಷ್ಯಾ ರಾಜಕಾರಣಿಯೊಬ್ಬರು ಫೀಫಾ ವಿಶ್ವಕಪ್ ಟೂರ್ನಿ ವೇಳೆ ವಿದೇಶಿಗರೊಂದಿಗೆ ಸಂಪರ್ಕ ಬೆಳಸದಂತೆ ರಷ್ಯನ್ ಯುವತಿಯರಿಗೆ ಕಿವಿಮಾತು ಹೇಳಿದ್ದರು. ಅಲ್ಲದೆ ನಾವು ನಮ್ಮ ಮಕ್ಕಳಿಗೆ ಮಾತ್ರ (ರಷ್ಯನ್ನರು) ಜನ್ಮ ನೀಡೋಣ ಎಂದು ಹೇಳಿದ್ದರು.

Comments are closed.