ರಾಷ್ಟ್ರೀಯ

ಬಾಬಾ ರಾಮದೇವ್’ರ ತಿರುಚಿದ ಚಿತ್ರ ವಾಟ್ಸಾಪ್ ನಲ್ಲಿ ಪೋಸ್ಚ್: ವ್ಯಕ್ತಿ ಬಂಧನ

Pinterest LinkedIn Tumblr

ನೋಯ್ಡಾ: ಅಂತರರಾಷ್ಚ್ರೀಯ ಯೋಗ ದಿನಾಚರಣೆಯಂದು ಯೋಗಗುರು ಬಾಬಾ ರಾಮದೇವ್ ಅವರ ತಿರುಚಿದ ಚಿತ್ರವನ್ನು ವಾಟ್ಸಾಪ್ ನಲ್ಲಿ ಪೋಸ್ಚ್ ಮಾಡಿದ ಹಿನ್ನೆಲೆಯಲ್ಲಿ 40 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿತ್ತು.

ದಾದ್ರಿ ಗ್ರಾಮದ ರಾಹಿಸುದ್ದೀನ್ ಬಂಧಿತ ವ್ಯಕ್ತಿ. ಸೈಬರ್ ಇಲಾಖೆ ಪ್ರಕರಣ ದಾಖಲಿಸಿಕೊಂಡ ನಂತರ ಆತನನ್ನು ಅವನ ಮನೆಯಿಂದ ಬಂಧಿಸಲಾಗಿದೆ.

ಗುಂಪಿನ ಮಧ್ಯೆ ರಾಮ್ ದೇವ್ ಅವರ ಕಾಲುಗಳನ್ನು ಮೇಲೆ ಎತ್ತಿ ಹಿಡಿದು ನಿಂತಿರುವ ಚಿತ್ರವನ್ನು ತಿರುಚಲಾಗಿತ್ತು.

ಆರೋಪಿಯನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಪತಂಜಲಿ ಆಯುರ್ವೇದ ಲಿಮಿಟೆಡ್ ಸಹ ಸಂಸ್ಥಾಪಕ ಆಚಾರ್ಯ ಬಾಲಕೃಷ್ಣ ಟ್ವಿಟ್ಟರ್ ನಲ್ಲಿ ನೋಯ್ಜಾ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

Comments are closed.