ಕರಾವಳಿ

ಬೆಂಗ್ರೆ ಪ್ರದೇಶ ಶೀಘ್ರದಲ್ಲೇ ಬಂಗಾರದ ಪ್ರದೇಶ ಮಾಡುವಲ್ಲಿ ಶಕ್ತಿಮೀರಿ ಯತ್ನ : ಶಾಸಕ ವೇದವ್ಯಾಸ ಕಾಮತ್

Pinterest LinkedIn Tumblr

ಮಂಗಳೂರು : ಬೆಂಗ್ರೆ ನಿರೇಶ್ವಾಲ್ಯ ಮೊಗವೀರ ಗ್ರಾಮ ಇದರ ವತಿಯಿಂದ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಪ್ರಶಸ್ತಿ ಸಮಾರಂಭ ನಡೆಯಿತು. ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ಚುನಾವಣೆಯ ಸಂದರ್ಭದಲ್ಲಿ ಮೊಗವೀರ ಸಮಾಜದ ಬೆಂಬಲ ಕೂಡ ನನ್ನ ಗೆಲುವಿನಲ್ಲಿ ಪಾತ್ರ ವಹಿಸಿದೆ. ಇದಕ್ಕೆ ತಾವು ಮತ್ತು ಪಕ್ಷ ಚಿರ‌ಋಣಿಯಾಗಿರುತ್ತದೆ ಎಂದು ಹೇಳಿದರು.

ನನಗೆ ಸಿಕ್ಕಿರುವ ಸನ್ಮಾನ ಅದು ಕಾರ್‍ಯಕರ್‍ತರಿಗೆ ಸಿಗುವ ಸನ್ಮಾವ, ಅವರು ಬೆವರು ಸುರಿಸಿ ದುಡಿದ ಕಾರಣ ಬಿಜೆಪಿ ಕರಾವಳಿಯಲ್ಲಿ ಅಭೂತಪೂರ್‍ವವಾಗಿ ಗೆದ್ದಿದೆ. ಆದ್ದರಿಂದ ಅಭಿನಂದನೆ ನಿಮಗೆಲ್ಲರಿಗೂ ಸೇರಬೇಕು ಎಂದು ಹೇಳಿದರು.

ಮಂಗಳೂರಿನ ಮೊಗವೀರ ಸಮಾಜದ ಕೊಡುಗೆ ದೇಶ ವಿದೇಶಗಳಲ್ಲಿ ಊರಿಗೆ ಹೆಸರು ತಂದಿದೆ. ಮಂಗಳೂರಿನ ಹೆಸರು ರಾಷ್ಟ್ರ ವಿದೇಶಗಳಲ್ಲಿ ಪ್ರಖ್ಯಾತವಾಗಲು ಮೊಗವೀರ ಸಮಾಜದ ಶ್ರಮವೇ ಕಾರಣ. ಮೀನುಗಾರಿಕೆಯ ಹೊರತಾಗಿಯೂ ವಿವಿಧ ಕ್ಷೇತ್ರಗಳಲ್ಲಿ ಮೊಗವೀರ ಸಮಾಜ ತನ್ನ ಕೊಡುಗೆ ನೀಡಿದೆ. ಈ ಕ್ಷೇತ್ರದ ಶಾಸಕನಾಗಿ ಮೊಗವೀರ ಸಮಾಜದ ಅಭಿವೃದ್ಧಿಗೆ, ಬೆಂಗರೆ ಪ್ರದೇಶವನ್ನು ಬಂಗಾರದ ಪ್ರದೇಶವನ್ನಾಗಿ ಬದಲಾಯಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಕಾರ್‍ಯಕ್ರಮದಲ್ಲಿ ಚಿದಾನಂದ ಸಾಲ್ಯಾನ್, ವಿನಯ ಭಟ್, ಮೋಹನ್ ಬೆಂಗ್ರೆ, ಮೀರಾ ಕರ್‍ಕೆರಾ, ಗಂಗಾಧರ ಹೊಸಬೆಟ್ಟು, ಶೇಖರ ಸುವರ್ಣ, ಸಮಿತಿಯ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದರು.

Comments are closed.