ಕರ್ನಾಟಕ

ರಾಜ್ಯ ಸರಕಾರವನ್ನು ಬೀಳಿಸಲು ತೆರೆಮರೆಯ ಕಸರತ್ತು?

Pinterest LinkedIn Tumblr


ಬೆಂಗಳೂರು: ಜುಲೈ 5ರಂದು ಬಜೆಟ್ ಮಂಡನೆ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಾಗುವ ಮುನ್ನ ಸರಕಾರ ಉರುಳಿಸಲು ಬಲವಾದ ಯತ್ನಗಳು ನಎಯುತ್ತಿವೆ ಎಂದು ರಾಜಧಾನಿಯ ಪ್ರಬಲ ರಾಜಕೀಯ ವಲಯಗಳಲ್ಲಿ ಕೇಳಿ ಬರುತ್ತಿದೆ.

ಕಾತೆ ಹಂಚಿಕೆ, ಬಜೆಟ್ ಮಂಡನೆ, ರೈತರ ಸಾಲ ಮನ್ನಾ ಸೇರಿದಂತೆ ಅನೇಕ ವಿಚಾರಗಳಲ್ಲಿ ಕಾಂಗ್ರೆಸ್‌ ಸಾಕಷ್ಟು ಅಸಮಾಧಾನಗೊಂಡಿದ್ದು, ಶಮನವಾಗುವಂತೆ ಕಾಣುತ್ತಿಲ್ಲ. ಸರಕಾರ ಬೀಳಿಸಲು ಕಾಂಗ್ರೆಸ್‌ ನಾಯಕರು ಬಿಜೆಪಿಯವರೊಂದಿಗೆ ಕೈಜೋಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌-ಜೆಡಿಎಸ್ ಸಮನ್ವಯ ಸಮಿತಿ ಮುಖ್ಯಸ್ಥರಾಗಿರುವ ಮಾಜಿ ಮುಖ್ಯಮಂತ್ರಿ ಸಧ್ಯ ಧರ್ಮಸ್ಥಳದಲ್ಲಿ ಪ್ರಾಕೃತಿಕ ಚಿಕಿತ್ಸೆಗೆ ಮುಂದಾಗಿದ್ದಾರೆ. ವಿಶ್ರಾಂತಿ ಪಡೆಯುತ್ತಿರುವ ತಾವು, ಈ ಸಂದರ್ಭ ಯಾವುದೇ ದೂರವಾಣಿ ಕರೆ ಸ್ವೀಕರಿಸುವುದಿಲ್ಲ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.

ಹೊಸ ಬಜೆಟ್‌ ಮಂಡನೆ ಹಾಗು ರೈತರ ಸಾಲ ಮನ್ನಾ ಕುರಿತಂತೆ ಸಿದ್ಧರಾಮಯ್ಯ ತಮ್ಮ ಅಸಮಾಧಾನ ತೋಡಿಕೊಳ್ಳುತ್ತಿರುವ ವಿಡಿಯೋ ಎಲ್ಲೆಡೆ ಹಬ್ಬಿದೆ. ಇದೇ ವೇಳೆ, ತಮ್ಮ ಪಕ್ಷದ ಮುಖ್ಯಸ್ಥ ಅಮಿತ್‌ ಶಾರನ್ನು ಭೇಟಿ ಮಾಡಲು ಬಿಜೆಪಿ ನಾಯಕ ಯಡಿಯೂರಪ್ಪ ಅಹಮದಾಬಾದ್‌ಗೆ ತೆರಳಿದ್ದಾರೆ.

ತಮ್ಮ ಚಲನವಲನಗಳ ಕುರಿತಂತೆ ಗೌಪ್ಯತೆ ಕಾಪಾಡಿಕೊಂಡಿರುವ ಯಡಿಯೂರಪ್ಪ ತಮ್ಮೊಂದಿಗೆ ಬಸವರಾಜ ಬೊಮ್ಮಾಯಿರನ್ನೂ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಕೇಳಿಬಂದಿದೆ. ಜೂನ್‌ 29ರಂದು ರಾಜ್ಯ ಬಿಜೆಪಿಯ ಉನ್ನತ ಸಭೆ ಸೇರಲಿದ್ದು, ಅದರಲ್ಲಿ ಭಾಗವಹಿಸಲು ಶಾರನ್ನು ಆಹ್ವಾನಿಸಲು ಯಡಿಯೂರಪ್ಪ ಅಹಮದಾಬಾದ್‌ಗೆ ತೆರಳಿದ್ದಾರೆ ಎನ್ನಲಾಗಿದೆ.

ಇದೇ ವೇಳೆ, “ನನಗೆ ಸಿಕ್ಕ ಅಧಿಕಾರ ಯಾರ ಭಿಕ್ಷೆಯೂ ಅಲ್ಲ. ನಾನು ಎಷ್ಟು ದಿನ ಕಚೇರಿಯಲ್ಲಿ ಮುಂದುವರೆಯುತ್ತೇನೆ ಎಂಬ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ” ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಇದೇ ಸಂದರ್ಭ ತಿಳಿಸಿದ್ದಾರೆ.

ವಿಧಾನ ಸಭಾ ಅಧಿವೇಶನ ಜುಲೈ 2ರಿಂದ ಆರಂಭವಾಗಲಿದೆ. ಇದೇ ವೇಳೆ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಸಿದ್ಧತೆ ನಡೆಯುತ್ತಿದೆ ಎಂಬ ಗುಮಾನಿ ಬಲವಾಗಿದೆ.

Comments are closed.