ಮುಂಬೈ

ಕದ್ದ ಹಣದಲ್ಲಿ ಭಿಕ್ಷುಕರಿಗೆ ಊಟ: ಭಾರತೀಯ ರಾಬಿನ್‌ಹುಡ್‌ ಬಂಧನ

Pinterest LinkedIn Tumblr


ಮುಂಬಯಿ : ಇಲ್ಲಿನ ಕೊರಿಯರ್‌ ಕಂಪೆನಿಯೊಂದರಲ್ಲಿ 80 ಲಕ್ಷ ರೂ. ನಗದು ಮತ್ತು ಇನ್ನಿತರ ಅತ್ಯಮೂಲ್ಯ ವಸ್ತುಗಳನ್ನು ಕದ್ದು ಪರಾರಿಯಾಗಿ ಹದಿನೈದು ದಿನಗಳ ಕಾಲ ಪೊಲೀಸರಿಗೆ ಸಿಗದೆ ಇದ್ದು, ಉತ್ತರ ಪ್ರದೇಶದ ವೃಂದಾವನದಲ್ಲಿ ಬಡವರಿಗೆ ಮೃಷ್ಟಾನ್ನ ಭೋಜನವನ್ನು ನೀಡಿದ ರಮೇಶ್‌ ಭಾಯಿ ಎಂಬಾತ ‘ಭಾರತೀಯ ರಾಬಿನ್‌ಹುಡ್‌’ ನನ್ನು ಪೊಲೀಸರು ಬಂಧಿಸಿದ್ದಾರೆ.

35 ವರ್ಷ ಪ್ರಾಯದ, ಗುಜರಾತ್‌ನ ಪಠಾಣ್‌ ಜಿಲ್ಲೆಯ ನಿವಾಸಿಯಾಗಿರುವ ರಮೇಶ್‌ ಭಾಯಿಯನ್ನು ಬಂಧಿಸಿದ ಪೊಲೀಸರು ಆತನಲ್ಲಿದ್ದ 10.68 ಲಕ್ಷ ರೂ.ನಗದು, 118 ಗ್ರಾಂ ಚಿನ್ನಾಭರಣ ಮತ್ತು ಐದು ಸೆಲ್‌ ಫೋನ್‌ಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ ಎಂದು ಹಿಂದುಸ್ಥಾನ್‌ ಟೈಮ್ಸ್‌ ವರದಿ ಮಾಡಿದೆ.

ರಮೇಶ್‌ ಭಾಯಿ ಕೊರಿಯರ್‌ ಕಂಪೆನಿಯಲ್ಲಿ ಅಪಾರ ಪ್ರಮಾಣದ ನಗ, ನಗದು ಕದ್ದ ಬಳಿಕ ಪೊಲೀಸರಿಗೆ ಸಿಗದೆ ಕಳೆದ ಹದಿನೈದು ದಿನಗಳಿಂದ ತಲೆಮರೆಸಿಕೊಂಡಿದ್ದ; ಅಂತಿಮವಾಗಿ ಆತ ತಾನು ಕದ್ದ ಹಣದಲ್ಲಿ ವೃಂದಾವನದಲ್ಲಿ ಬಡವರಿಗೆ ಮೃಷ್ಟಾನ್ನ ಭೋಜನವನ್ನು ನೀಡಿದಾಗಲೇ ಪೊಲೀಸರು ಆತನನ್ನು ಬಂಧಿಸಿದರು.

ಹಣ ಕದ್ದ ಬಳಿಕ ರಮೇಶ್‌ ಭಾಯಿ ಹಲವಾರು ನಗರಗಳಿಗೆ ಪ್ರಯಾಣಿಸಿ ಉತ್ತರ ಪ್ರದೇಶದ ವೃಂದಾವನ ಪ್ರದೇಶದಲ್ಲಿ ವೈಭವದಿಂದ ಜೀವಿಸುತ್ತಿದ್ದ. ಭಿಕ್ಷುಕರಿಗೆ ಆತ 2,000 ರೂ. ಭಿಕ್ಷೆ ನೀಡುತ್ತಿದ್ದ. ಅಂತೆಯೇ ಆತ ಭಿಕ್ಷುಕರಲ್ಲಿ ಜನಪ್ರಿಯನಾಗಿದ್ದ ಎಂದು ವೃಂದಾವನ ಪೊಲೀಸ್‌ ಪ್ರಭಾರಾಧಿಕಾರಿ ಸುಬೋಧ್‌ ಕುಮಾರ್‌ ಸಿಂಗ್‌ ಹೇಳಿದರು.

Comments are closed.