ರಾಷ್ಟ್ರೀಯ

ಚೆನ್ನೈ ಹುಡುಗರಿಂದ ವಿಶ್ವದ ಅತಿ ಕಡಿಮೆ ತೂಕದ ಉಪಗ್ರಹ!

Pinterest LinkedIn Tumblr


ಚೆನ್ನೈ: ಜಗತ್ತಿನ ಅತಿ ಕಡಿಮೆ ತೂಕದ ಪ್ರಾಯೊಗಿಕ ಉಪಗ್ರಹ – ಜೈಹಿಂದ್‌ 1ಎಸ್‌ ನ್ನು ಚೆನ್ನೈನ ಹಿಂದುಸ್ತಾನ್‌ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳು ತಯಾರಿಸಿದ್ದಾರೆ.

ಸಂಸ್ಥೆಯ ಬಾಹ್ಯಾಕಾಶ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದು, ಆಗಸ್ಟ್‌ನಲ್ಲಿ ಅಮೆರಿಕದ ಕೊಲೊರೊಡೊ ಬಾಹ್ಯಾಕಾಶ ಕೇಂದ್ರದಿಂದ ಪ್ರಯೋಗಾರ್ಥ ಉಡ್ಡಯನಗೊಳ್ಳಲಿದೆ.

ಕೇವಲ 33.39 ಗ್ರಾಂ ತೂಕವಿರುವ ಪ್ರಾಯೋಗಿಕ ಉಪಗ್ರಹವು ಪಿಎಲ್‌ಎ ನೈಲನ್‌ ವಸ್ತುವಿನಿಂದ ತಯಾರಿಸಲ್ಪಟ್ಟಿದೆ. ಇದರಿಂದ ಹವಾಮಾನ, ಪ್ರಕೃತಿ ವಿಕೋಪ, ಮೇಘಸ್ಫೋಟ ಇತ್ಯಾದಿ ವಿಚಾರಗಳ ಬಗ್ಗೆ ಮುನ್ಸೂಚನೆ ತಿಳಿಯಲು ಸಹಕಾರಿಯಾಗಲಿದೆ. ಪ್ರಮುಖವಾಗಿ ಬಾಹ್ಯಾಕಾಶ, ಅಂತರಿಕ್ಷದಲ್ಲಿ ನೈಲನ್‌ ಬಳಕೆ ಸಾಧ್ಯವೇ ಎಂಬ ಕುರಿತ ಅಧ್ಯಯನಕ್ಕೂ ಈ ಉಪಗ್ರಹ ಸಹಕಾರಿಯಾಗಲಿದೆ.

15-20 ಗಂಟೆ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವ ಜೈಹಿಂದ್‌ 1ಎಸ್‌ ಅಧಿಕ ಉಷ್ಣತೆಯಲ್ಲೂ ಕೆಲಸ ಮಾಡಲು ಶಕ್ತವಾಗಿದೆ. ಕೆ.ಜೆ. ಹರಿಕೃಷ್ಣನ್‌ ಅವರ ನಾಯಕತ್ವದಲ್ಲಿ ಉಪಗ್ರಹ ತಯಾರಿ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಪಿ. ಅಮರ್‌ನಾಥ್‌, ಟಿ. ಗಿರಿಪ್ರಸಾದ್‌ ಹಾಗೂ ಜಿ ಸುಧಿ ಅವರಿದ್ದ ತಂಡ ಜಗತ್ತಿನ ಅತಿ ಕಡಿಮೆ ತೂಕದ ಉಪಗ್ರಹ ತಯಾರಿಸಿದೆ. ಉಪಗ್ರಹದಲ್ಲಿ ಎಸ್‌ಡಿ ಕಾರ್ಡ್‌ ಅಳವಡಿಸಲು ಅವಕಾಶಗಳಿದ್ದು, ಡೇಟಾ ಸ್ಟೋರೇಜ್‌ಗೆ ಸಹಕಾರಿಯಾಗಲಿದೆ.

Comments are closed.