ಕರಾವಳಿ

ಪಾದದ ಊತ ಕಡಿಮೆ ಮಾಡಲು ಇಲ್ಲಿದೆ ಕೆಲವು ಮನೆಮದ್ದುಗಳು .

Pinterest LinkedIn Tumblr

ಇಡೀ ದೇಹದ ಭಾರವನ್ನು ಹೊತ್ತುಕೊಳ್ಳುವ ಪಾದಗಳು ಯಾವಾಗಲೂ ಆರೋಗ್ಯವಾಗಿರಬೇಕು. ಪಾದಗಳಿಗೆ ಏನಾದರೂ ಸಮಸ್ಯೆಯಾದರೆ ಅದು ಸಂಪೂರ್ಣ ದೇಹದ ಮೇಲೆ ಪರಿಣಾಮ ಬೀರುವುದು. ಕೆಲವೊಮ್ಮೆ ಪಾದವು ತನ್ನಷ್ಟಕ್ಕೆ ತಾನೇ ಊದಿಕೊಳ್ಳುವುದು. ದೇಹದ ಕೋಶಗಳಲ್ಲಿ ನೀರು ಹೆಚ್ಚಾಗಿ ಶೇಖರಣೆಯಾಗುವುದೇ ಇದಕ್ಕೆ ಕಾರಣ.

ಈ ಸಮಸ್ಯೆಯು ಆಗಾಗ ಕಂಡುಬಂದರೆ ಏನಾದರೂ ಆರೋಗ್ಯ ಸಮಸ್ಯೆಯಿದೆ ಎಂದರ್ಥ. ಇದಕ್ಕೆ ನೀವು ತಕ್ಷಣ ವೈದ್ಯರನ್ನು ಭೇಟಿಯಾಗಿ ಅವರಿಂದ ಚಿಕಿತ್ಸೆ ಪಡೆದುಕೊಳ್ಳಬೇಕು. ಸಾಮಾನ್ಯವಾಗಿ ರಕ್ತದ ಒತ್ತಡ ಹೆಚ್ಚಿರುವವರು ಮತ್ತು ಗರ್ಭಿಣಿಯರಲ್ಲಿ ಹೆಚ್ಚಾಗಿ ಪಾದದ ಊತ ಕಾಣಿಸಿಕೊಳ್ಳುತ್ತದೆ. ಇದು ಜೀವಕ್ಕೆ ಏನೂ ತೊಂದರೆ ಮಾಡದಿದ್ದರೂ ಇದರ ನೋವು ಮಾತ್ರ ಸಹಿಸಲಸಾಧ್ಯ.

ಸಾಮಾನ್ಯವಾಗಿ ಕಾಡುವ ಪಾದದ ಊತ ಕಡಿಮೆ ಮಾಡಲು ಇಲ್ಲಿದೆ ಕೆಲವು ಮನೆಮದ್ದುಗಳು:

ಲಿಂಬೆ ಮತ್ತು ಜೇನು:
ಸ್ವಲ್ಪ ಬೆಚ್ಚಗಿರುವ ಒಂದು ಲೋಟ ನೀರಿಗೆ ಒಂದು ಚಮಚ ಲಿಂಬೆರಸ ಮತ್ತು ಒಂದು ಚಮಚ ಜೇನನ್ನು ಹಾಕಿ ಮಿಶ್ರಣ ಮಾಡಿ ಇದನ್ನು ದಿನಪೂರ್ತಿ ಕುಡಿಯುತ್ತಾ ಇರಿ. ಇದರಲ್ಲಿರುವ ಉರಿಯೂತ ಶಮನಕಾರಿ ಗುಣವು ಪಾದದ ಊತವನ್ನು ಕಡಿಮೆ ಮಾಡುವುದು ಮತ್ತು ನೋವನ್ನು ಶಮನ ಮಾಡುವುದು.

ಕೊತ್ತಂಬರಿ ಬೀಜಗಳು:
ಪಾದದಲ್ಲಿ ಕಾಣಿಸಿಕೊಂಡ ಊತ ಹಾಗೂ ನೋವಿನ ಶಮನಕ್ಕಾಗಿ ಹಿಂದಿನ ಕಾಲದಿಂದಲೂ ಕೊತ್ತಂಬರಿ ಬೀಜಗಳನ್ನು ಬಳಸುತ್ತಿದ್ದರು. ಒಂದು ಪಾತ್ರೆಯಲ್ಲಿ ಕೊತ್ತಂಬರಿ ಬೀಜಗಳನ್ನು ಹಾಕಿ ಬೇಯಿಸಿ ಮತ್ತು ಅದರ ನೀರನ್ನು ದಿನಪೂರ್ತಿ ಕುಡಿದರೆ ಊತ ಹಾಗೂ ನೋವು ಶಮನವಾಗುವುದು.

ಕಲ್ಲು ಉಪ್ಪು:
ಊತ ಮತ್ತು ನೀರು ತುಂಬಿಕೊಂಡಿರುವುದನ್ನು ಕಡಿಮೆ ಮಾಡಲು ನೀರಿನಲ್ಲಿ ಕಲ್ಲುಉಪ್ಪು ಹಾಕಿ ಅದರಲ್ಲಿ ಪಾದವನ್ನು ಇಡಬೇಕು. ಒಂದು ಟಬ್‌ಗೆ ಬಿಸಿ ನೀರು ಹಾಕಿ ಅದಕ್ಕೆ ಎರಡು ಚಮಚ ಕಲ್ಲುಉಪ್ಪು ಹಾಕಿ. ಇದರಲ್ಲಿ ಸುಮಾರು 15-20 ನಿಮಿಷಗಳ ಕಾಲ ಪಾದವನ್ನು ಇಡಿ. ಇದು ಊತವನ್ನು ಕಡಿಮೆ ಮಾಡುವುದು ಮತ್ತು ನೋವು ಶಮನವಾಗುತ್ತದೆ.

ಪುದೀನಾ ಎಣ್ಣೆ:
ಭಾದಿತ ಜಾಗಕ್ಕೆ ಲ್ಯಾವೆಂಡರ್ ಅಥವಾ ಪುದೀನಾ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಇದು ಆ ಪ್ರದೇಶದಲ್ಲಿ ರಕ್ತ ಪರಿಚಲನೆಯನ್ನು ಉತ್ತಮಪಡಿಸಿ ಉರಿಯೂತವನ್ನು ಕಡಿಮೆ ಮಾಡುವುದು.

ಆಪಲ್ ಸೀಡರ್ ವಿನೇಗರ್:
ಪೊಟಾಶಿಯಂನಿಂದ ಸಮೃದ್ಧವಾಗಿರುವ ಆಪಲ್ ಸೀಡರ್ ವಿನೇಗರ್ ಪಾದದ ಊತವನ್ನು ಕಡಿಮೆ ಮಾಡುವ ನೈಸರ್ಗಿಕ ಔಷಧಿಯಾಗಿದೆ. ಇದನ್ನು ನೀರು ಅಥವಾ ಜೇನಿನೊಂದಿಗೆ ಮಿಶ್ರಣ ಮಾಡಿಕೊಂಡು ಸ್ವಚ್ಛ ಬಟ್ಟೆಯನ್ನು ಈ ಮಿಶ್ರದಲ್ಲಿ ಅದ್ದಿ ಅದನ್ನು ಭಾದಿತ ಜಾಗಕ್ಕೆ ಕಟ್ಟಬೇಕು.

Comments are closed.