ರಾಜ್‌ಕೋಟ್: ತನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವೀಡಿಯೋವನ್ನಿಟ್ಟುಕೊಂಡು ಉದ್ಯಮಪತಿಗೆ ಬೆದರಿಕೆ ಒಡ್ಡುತ್ತಿದ್ದ ಮಹಿಳೆಯನ್ನು ಮೊರ್ಬಿಯ ಅಪರಾಧ ದಳ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಹಿಳೆ ಮತ್ತವಳ ಸಹವರ್ತಿ ಸೇರಿಕೊಂಡು ಉದ್ಯಮಪತಿಯಿಂದ 1 ಕೋಟಿ ದೋಚುವ ಯೋಜನೆ ರೂಪಿಸಿದ್ದರು, ಎಂದು ತಿಳಿದು ಬಂದಿದೆ.
ದೊರೆತಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ಮನ್ಸುಖ್ ಅಡೋಜಾ (52) ಒಂದು ವರ್ಷದ ಹಿಂದೆ ಕಾಜಲ್ ಪರ್ಮಾರ್ (24) ಪರಿಚಯ ಮಾಡಿಕೊಂಡಿದ್ದ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಹೋದರನ ಜತೆ ಕಾಜಲ್ ವಾಸವಾಗಿದ್ದಳು. ಪರಿಚಯ ಸ್ನೇಹಕ್ಕೆ ತಿರುಗಿದ ಬಳಿಕ ಅಡೋಜಾ ಆಕೆ ವಾಸವಾಗಿದ್ದ ಮನೆಗೆ ಬಂದು ಹೋಗತೊಡಗಿದ. ಕಳೆದ ಮೂರು ತಿಂಗಳ ಹಿಂದೆ ಇಬ್ಬರ ನಡುವೆ ದೈಹಿಕ ಸಂಬಂಧ ಬೆಳೆದಿದೆ.
ಮೂರು ತಿಂಗಳ ಹಿಂದೆ ಒಂದು ದಿನ ನನಗೆ ಆರೋಗ್ಯ ಸರಿಯಾಗಿಲ್ಲ, ಮನೆಯವರೆಗೆ ಬಿಡು ಎಂದು ಕಾಜಲ್, ಅಡೋಜಾ ಬಳಿ ಮನವಿ ಮಾಡಿಕೊಂಡಿದ್ದಳು. ಅಂದಿನಿಂದ ಅವರಲ್ಲಿ ದೈಹಿಕ ಸಂಬಂಧ ಬೆಳೆಯಿತು. ಆದರೆ ಧನದಾಹದಿಂದ ಅಡೋಜಾ ಸ್ನೇಹ ಬೆಳೆಸಿದ್ದ ಕಾಜಲ್ ತಮ್ಮ ನಡುವೆ ನಡೆದ ಖಾಸಗಿ ಕ್ಷಣಗಳನ್ನು ವೀಡಿಯೋ ಮಾಡಿಟ್ಟುಕೊಂಡಿದ್ದಳು. ವೀಡಿಯೋವನ್ನು ಬಹಿರಂಗ ಪಡಿಸಿ ನಿನ್ನ ಮರ್ಯಾದೆ ಹಾಳು ಮಾಡುತ್ತೇನೆ. ನಾನು ಹಾಗೆ ಮಾಡಬಾರದೆಂದಿದ್ದರೆ ನೀನು1 ಕೋಟಿ ರೂಪಾಯಿ ನೀಡಬೇಕೆಂದು ಆಕೆ ಬೆದರಿಕೆ ಒಡ್ಡ ಹತ್ತಿದ್ದಾಳೆ. ಅಷ್ಟೇ ಅಲ್ಲದೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಸಹ ಆಕೆ ಬೆದರಿಸುತ್ತಿದ್ದಳು, ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಯಮಪತಿ ನೀಡಿರುವ ದೂರನ್ನಾಧರಿಸಿ ಮಹಿಳೆ ಮತ್ತು ಆಕೆಯ ಸಹವರ್ತಿಯನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಕ್ರೈಂ ಬ್ರಾಂಚ್ ಸಬ್ ಇನ್ಸಪೆಕ್ಟರ್ ಆರ್ ಟಿ ವಿರಾಲ್ ಹೇಳಿದ್ದಾರೆ.
Comments are closed.