ರಾಷ್ಟ್ರೀಯ

ಸಿಆರ್‌ಪಿಎಫ್‌ ಮಹಿಳಾ ಕಮಾಂಡೋಗಳು ಕಲ್ಲು ತೂರಾಟಗಾರರ ಸದ್ದಡಗಿಸಲು ಸಜ್ಜು!

Pinterest LinkedIn Tumblr


ಶ್ರೀನಗರ: ಕಣಿವೆ ರಾಜ್ಯದಲ್ಲಿ ಪ್ರತ್ಯೇಕತಾವಾದಿಗಳು ಮತ್ತು ಕಲ್ಲುತೂರಾಟಗಾರರ ಸದ್ದಡಗಿಸಲು ಸಿಆರ್‌ಪಿಎಫ್‌ನ ಮಹಿಳಾ ಕಮಾಂಡೋಗಳು ಸಜ್ಜಾಗಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಆಗಾಗ ಉಂಟಾಗುತ್ತಿರುವ ಪ್ರತಿಭಟನೆ ಮತ್ತು ಕಲ್ಲು ತೂರಾಟದಂತಹ ಸಮಾಜವಿರೋಧಿ ಕೃತ್ಯಗಳನ್ನು ನಿರ್ಬಂಧಿಸಲು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮಹಿಳಾ ಕಮಾಂಡೋಗಳಿಗೆ ವಿಶೇಷ ತರಬೇತಿ ನೀಡಿ ಸಜ್ಜುಗೊಳಿಸಿದೆ.

ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಕಲ್ಲು ತೂರಾಟಗಾರರು ವಿವಿಧ ತಂತ್ರಗಳನ್ನು ಉಪಯೋಗಿಸುತ್ತಾರೆ. ಅಲ್ಲದೆ ಅವರನ್ನು ಯಾವ ರೀತಿ ನಿಯಂತ್ರಿಸಬಹುದು, ಯಾವೆಲ್ಲ ಶಸ್ತ್ರಾಸ್ತ್ರ ಬಳಸಬಹುದು ಮತ್ತು ಅವುಗಳ ತ್ವರಿತ ರಿಪೇರಿ, ನಿರ್ವಹಣೆ ಹೇಗೆ ಎಂಬೆಲ್ಲ ರೀತಿಯ ಹಲವು ವಿಶೇಷ ತರಬೇತಿಯನ್ನು ಮಹಿಳಾ ಕಮಾಂಡೋಗಳಿಗೆ ಸಿಆರ್‌ಪಿಎಫ್‌ ನೀಡಿದೆ.

ಕಾಶ್ಮೀರಕ್ಕೆ ಭೇಟಿ ನೀಡುವ ಪ್ರವಾಸಿಗರನ್ನು ಕೂಡ ಕಲ್ಲುತೂರಾಟಗಾರರು ಗುರಿಯಾಗಿಸಿಕೊಂಡು ಹಲವು ಸಂದರ್ಭದಲ್ಲಿ ಕೃತ್ಯ ನಡೆಸುತ್ತಿದ್ದು, ಜನರಿಗೆ ಸಮಸ್ಯೆಯಾಗಿದೆ.

Comments are closed.