ರಾಷ್ಟ್ರೀಯ

ಜನ್ಮದಿನದಂದೇ ತಂದೆಯಿಂದ ಮಗಳ ಹತ್ಯೆ ! ಹುಡುಗನ ಜೊತೆ ಮೊಬೈಲ್’ನಲ್ಲಿ ಮಾತನಾಡಿದ್ದೆ ಕಾರಣ

Pinterest LinkedIn Tumblr

ಆಂಧ್ರ ಪ್ರದೇಶ​: ಹದಿನೆಂಟರ ಹರೆಯಕ್ಕೆ ಕಾಲಿಟ್ಟು ಇನ್ನೂ ಒಂದು ದಿನವು ಕಳೆದಿರಲ್ಲಿಲ್ಲ. ಅಷ್ಟರಲ್ಲೇ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತಂದೆಯಿಂದಲೇ ದಾರುಣವಾಗಿ ಕೊಲೆಯಾಗಿರುವ ಘಟನೆ ಕೃಷ್ಣ ಜಿಲ್ಲೆಯ ಗ್ರಾಮವೊಂದರಲ್ಲಿ ಭಾನುವಾರ ನಡೆದಿದೆ.

ಚಂದ್ರಿಕಾ(18) ಕೊಲೆಯಾದ ದುರ್ದೈವಿ. ಈಕೆ ಔಷಧ ವಿಜ್ಞಾನದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆಯುತ್ತಿದ್ದಳು. ಶನಿವಾರ ತಾನೇ ಚಂದ್ರಿಕಾ ಹದಿನೆಂಟರ ಹರೆಯಕ್ಕೆ ಕಾಲಿಟ್ಟು, ಜನ್ಮದಿನವನ್ನು ಮನೆಯವರೊಂದಿಗೆ ಸೇರಿ ಕೇಕ್ ಕತ್ತರಿಸುವ ಮೂಲಕ ಭರ್ಜರಿಯಾಗಿ ಆಚರಣೆ ಮಾಡಿಕೊಂಡಿದ್ದಳು.

ಸಂಭ್ರಮಾಚರಣೆಯ ನಂತರ ಚಂದ್ರಿಕಾ ಮೊಬೈಲ್​ನಲ್ಲಿ ಮಾತನಾಡುವುದನ್ನು ತಂದೆ ಕೊಟ್ಟಯ್ಯ ಗಮನಿಸಿದ್ದಾರೆ. ಯಾವಾಗ ಆಕೆ ಗಂಟೆಗಟ್ಟಲೇ ಮಾತನಾಡುವುದನ್ನು ಗಮನಿಸಿದರೋ ಆಕೆಗೆ ಹುಡುಗನೊಂದಿಗೆ ಸಂಬಂಧ ಇರಬಹುದೆಂದು ಅನುಮಾನಗೊಂಡಿದ್ದಾರೆ. ಇದರಿಂದ ಕೋಪಗೊಂಡ ತಂದೆ ಕೊಡಲಿಯ ಮರದ ಕೈಪಿಡಿಯಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ಸ್ಥಳದಲ್ಲೇ ಕುಸಿದುಬಿದ್ದ ಮಗಳು ಸಾವಿಗಿಡಾಗಿದ್ದಾಳೆ.

ಚಂದ್ರಿಕಾಗೆ ತಾನು ಪ್ರೀತಿಸಿದ ಹುಡುಗನನ್ನು ಮದುವೆಯಾಗಲು ಪೋಷಕರ ಸಮ್ಮತಿ ಬೇಕಾಗಿತ್ತು. ಆದರೆ, ಅವಳ ತಂದೆ ಅದಕ್ಕೆ ಸಮ್ಮತಿಸಿರಲಿಲ್ಲ ಎಂದು ಪೊಲೀಸ್​ ತನಿಖೆಯಲ್ಲಿ ತಿಳಿದುಬಂದಿದೆ. ಆದರೆ, ಗ್ರಾಮಸ್ಥರು ಹಾಗೂ ನೆರೆಯವರು ಹೇಳುವ ಪ್ರಕಾರ ಮಗಳ ಪ್ರೀತಿಯಿಂದ ಎಲ್ಲಿ ನಮ್ಮ ಮರ್ಯಾದೆಗೆ ಭಂಗ ಬರುತ್ತದೋ ಎಂದು ಚಿಂತೆಗೀಡಾಗಿ ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ.

Comments are closed.