ಕರ್ನಾಟಕ

ಮನೆಗೆ ನುಗ್ಗಿ ಗೃಹಿಣಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರ!

Pinterest LinkedIn Tumblr


ಮಾಗಡಿ: ತಾಲೂಕಿನ ಗ್ರಾಮವೊಂದರಲ್ಲಿ ಮೂವರು ಕಾಮುಕರು ಶನಿವಾರ ತಡರಾತ್ರಿ ಮನೆಗೆ ನುಗ್ಗಿ ಗೃಹಿಣಿಯೊಬ್ಬಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಗ್ಯಾಂಗ್‌ ರೇಪ್‌ ಎಸಗಿ ಅಟ್ಟಹಾಸ ಮೆರೆದಿದ್ದಾರೆ.

ವರದಿಯಾದಂತೆ ಸಂತ್ರಸ್ತ ಮಹಿಳೆಯ ಪತಿಯ ಸ್ನೇಹಿತರೆ ಕೃತ್ಯ ಎಸಗಿದ್ದು , ರಾತ್ರಿ ನಂಬರ್‌ ಕೇಳುವ ನೆಪದಲ್ಲಿ ಬಂದ ಮೂಲರು ಬಾಗಿಲು ತೆಗೆದೊಡನೆ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ಕೃತ್ಯ ಎಸಗಿ ಪರಾರಿಯಾಗಿದ್ದಾರೆ.

ಗಂಭೀರವಾಗಿ ಗಾಯೊಂಡು ತೀವ್ರ ಅಸ್ವಸ್ಥಗೊಂಡಿರುವ ಮಹಿಳೆಯನ್ನು ಮಾಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿಗಳಾದ ಪುರುಷೋತ್ತಮ, ಮಂಜು ಮತ್ತು ಕರಡಿ ತಲೆ ಮರೆಸಿಕೊಂಡಿದ್ದು , ಮೂವರಿಗಾಗಿ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.

Comments are closed.