ರಾಷ್ಟ್ರೀಯ

ಪ್ಯಾನ್‌ ಸಂಖ್ಯೆಗೆ-ಆಧಾರ್‌ ಲಿಂಕ್‌ಗೆ ನೀಡಿದ್ದ ಗಡುವು ಅಂತ್ಯ

Pinterest LinkedIn Tumblr


ನವದೆಹಲಿ: ಇನ್ನೂ ನೀವು ಪ್ಯಾನ್‌ ಸಂಖ್ಯೆಯನ್ನು ಆಧಾರ್‌ ಜೊತೆಗೆ ಲಿಂಕ್‌ ಮಾಡಿಲ್ಲವೇ? ಹಾಗಿದ್ದರೆ ಸಮಸ್ಯೆ ಎದುರಿಸುವುದು ಖಚಿತ. ಏಕೆಂದರೆ, ಪ್ಯಾನ್‌-ಆಧಾರ್‌ ಲಿಂಕ್‌ ಮಾಡಲು ಕೇಂದ್ರ ಸರ್ಕಾರ ನೀಡಿದ್ದ ಜೂ.30ರ ಗಡುವು ಶನಿವಾರವೇ ಪೂರ್ಣಗೊಂಡಿದೆ. ಗಡುವನ್ನು ವಿಸ್ತರಿಸುವ ಕುರಿತೂ ಸರ್ಕಾರ ಯಾವುದೇ ಘೋಷಣೆ ಮಾಡಿಲ್ಲ. ಈ ಹಿಂದೆ ಕೇಂದ್ರ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಗಡುವನ್ನು 4 ಬಾರಿ ವಿಸ್ತರಿಸಿತ್ತು. ಜತೆಗೆ, 16.65 ಕೋಟಿ ಪ್ಯಾನ್‌ ಕಾರ್ಡ್‌ಗಳು ಹಾಗೂ 87.79 ಕೋಟಿ ಬ್ಯಾಂಕ್‌ ಖಾತೆಗಳು ಆಧಾರ್‌ಗೆ ಲಿಂಕ್‌ ಆಗಿವೆ ಎಂದು ಸರ್ಕಾರ ಹೇಳಿತ್ತು.

ಮುಂದೇನು?
ಆಧಾರ್‌ ಮತ್ತು ಪ್ಯಾನ್‌ ಲಿಂಕ್‌ ಮಾಡದೇ ಇದ್ದರೆ, ನಿಮ್ಮ ಪ್ಯಾನ್‌ ಸಂಖ್ಯೆ ಅಮಾನ್ಯಗೊಳ್ಳಬಹುದು. ಹೀಗಾಗಿ ನೀವು ಆದಾಯ ತೆರಿಗೆ ವೆಬ್‌ಸೈಟ್‌ಗೆ ಲಾಗ್‌ಇನ್‌ ಆಗಲು ಸಾಧ್ಯ ವಾಗದೇ ಇರಬಹುದು

ಆಧಾರ್‌-ಪ್ಯಾನ್‌ ಲಿಂಕ್‌ ಮಾಡದೇ ಇರುವವರು ಇನ್ನು ಮುಂದೆ ಆದಾಯ ತೆರಿಗೆ ರಿಟರ್ನ್Õ ಸಲ್ಲಿಕೆ ಮಾಡಲು ಆಗುವುದಿಲ್ಲ

ಒಂದು ವೇಳೆ ರಿಟರ್ನ್ ಸಲ್ಲಿಕೆ ಸಾಧ್ಯವಾದರೂ, ಅದರ ನಂತರದ ಪ್ರಕ್ರಿಯೆ ಸ್ಥಗಿತಗೊಳ್ಳಬಹುದು

Comments are closed.