ಕರಾವಳಿ

ಹಣ್ಣಾಗಿರುವ ಹಸಿ ತೊಂಡೆಕಾಯಿಂದ ಚರ್ಮದ ಸಮಸ್ಯೆ ನಿವಾರಣೆ.

Pinterest LinkedIn Tumblr

ಹೌದು! ತೊಂಡೆಕಾಯಿ ಪಲ್ಯ ಮಾಡಲು ಮಾತ್ರವಲ್ಲ, ಚರ್ಮದ ಹತ್ತು ಹಲವಾರು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಈ ತೊಂಡೆಕಾಯಿ ಸಹಾಯ ಮಾಡುತ್ತದೆ. ಹಣ್ಣಾಗಿರುವ ಹಸಿ ತೊಂಡೆಕಾಯಿಯನ್ನು ದಿನಕ್ಕೆ 2 ಸೇವಿಸಿದರೆ ಒಣಗಿರುವ ಚರ್ಮ ಮೃದುವಾಗುತ್ತದೆ ಮತ್ತು ಮಧುಮೇಹ ಗುಣವಾಗುವಲ್ಲಿ ಸಹಾಯ ಮಾಡುತ್ತದೆ.

ದೇಹದಲ್ಲಿ ಹುಳು ಕಚ್ಚಿ ಗಾಯ ಅಥವಾ ತುರಿಕೆಯಾಗಿದ್ದರೆ, ತೊಂಡೆಕಾಯಿಯ ಎಲೆಗಳನ್ನು ಜಜ್ಜಿ ಹಚ್ಚಿದರೆ ಇವು ಕಡಿಮೆಯಾಗು ತ್ತವೆ. ಅತಿಯಾಗಿ ಭೇದಿಯಾಗುತ್ತಿದೆಯೇ? 2 ಚಮಚ ತೊಂಡೆಕಾಯಿ ಎಲೆಯ ರಸವನ್ನು ಅರ್ಧ ಬಟ್ಟಲು ಮೊಸರಿನ ಜತೆ ದಿನಕ್ಕೆ 2 ಬಾರಿ ಸೇವಿಸಿದರೆ ಭೇದಿ ನಿಲ್ಲುತ್ತದೆ.

ಎಳೆ ತೊಂಡೆ ಹಣ್ಣನ್ನು ಬಾಯಿಗೆ ಹಾಕಿ ಚೆನ್ನಾಗಿ ಜಗಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.5 ಚಮಚ ತೊಂಡೆಕಾಯಿ ಎಲೆಯ ರಸಕ್ಕೆ 1 ಲೋಟ ನೀರು ಸೇರಿಸಿ ಅದು ಅರ್ಧದಷ್ಟಕ್ಕೆ ಬರುವಷ್ಟು ಕುದಿಸಿ, ನಂತರ ಸೇವಿಸಿದರೆ ದೇಹದ ಉಷ್ಣತೆ ಮತ್ತು ಕಣ್ಣುರಿ ಕಡಿಮೆಯಾಗುತ್ತದೆ.

ಒಂದು ಲೋಟ ತೊಂಡೆಕಾಯಿ ಎಲೆಯ ರಸವನ್ನು ಒಂದು ಲೋಟ ಎಳ್ಳೆಣ್ಣೆ ಜತೆ ಕುದಿಸಿ ಆ ಎಣ್ಣೆಯನ್ನು ಚರ್ಮದ ಮೇಲೆ ಹಚ್ಚಿದರೆ ಸೋರಿಯಾಸಿಸ್‌ನಂತಹ ಚರ್ಮದ ಸಮಸ್ಯೆ ಕಡಿಮೆಯಾಗುತ್ತದೆ.

Comments are closed.