ರಾಷ್ಟ್ರೀಯ

ಅತ್ಯಾಚಾರ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಬಂದು ಸಂತ್ರಸ್ತೆ ತಂಗಿ ಮೇಲೂ ಲೈಂಗಿಕ ದೌರ್ಜನ್ಯ

Pinterest LinkedIn Tumblr


ಭೋಪಾಲ್: ಸಮಾಜ ಎಷ್ಟು ಕೆಟ್ಟು ಹೋಗಿದೆ ಎಂದರೆ ತಾವು ಮಾಡಿದ ಘೋರಾತಿಘೋರ ಅಪರಾಧಗಳಿಗೆ ಪಶ್ಚಾತಾಪ ಮಾಡದೇ ಮರಳಿ ಅದನ್ನೇ ಮಾಡುವ, ಸಂತ್ರಸ್ತರಿಗೆ ಮತ್ತಷ್ಟು ಹಿಂಸೆ ನೀಡುವ ಕ್ರಿಮಿನಲ್‌ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅತ್ಯಾಚಾರ ಪ್ರಕರಣಗಳಲ್ಲಂತೂ ಬಲಿಪಶುವಾಗುವವಳು ಹೆಣ್ಣಾಗಿರುತ್ತಾಳೆ. ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಕೊಲೆ ಮಾಡಲಾಗುತ್ತದೆ. ಪ್ರಕರಣ ಹಿಂಪಡೆಯುವಂತೆ ಪ್ರಾಣ ಬೆದರಿಕೆ ಹಾಕಲಾಗುತ್ತದೆ. ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿರುವ ಪ್ರಕರಣದಲ್ಲೂ ನಡೆದಿರುವು ಇದೇ. ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸಿ ಹೊರ ಬಂದ ಅಪರಾಧಿಯೊಬ್ಬ ಸಂತ್ರಸ್ತೆಯ 12 ವರ್ಷದ ತಂಗಿಯ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಯುವತಿಯ ಮೇಲೆ ಅತ್ಯಾಚಾರ ಎಸಗಿ ಜೈಲು ಶಿಕ್ಷೆಗೊಳಗಾಗಿದ್ದ ಅಮಿರ್ ಶನಿವಾರವಷ್ಟೇ ಜೈಲಿನಿಂದ ಹೊರಬಂದಿದ್ದ. ಮರುದಿನ ಅಂದರೆ ಭಾನುವಾರ ಆತನ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿದ್ದು ಮತ್ತೆ ಜೈಲು ಸೇರಿದ್ದಾನೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಶನಿವಾರ ಸಂಜೆ ನೀರು ತರಲು ಬಂದಿದ್ದ ಬಾಲಕಿ (ಅಮಿರ್‌ನಿಂದ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆ ಸಹೋದರಿ) ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಮಿರ್, ಆ್ಯಸಿಡ್ ಹಾಕುವುದಾಗಿ ಆಕೆಯನ್ನು ಬೆದರಿಸಿದ್ದಾನೆ.

ಮನೆಗೆ ಬಂದ ಬಾಲಕಿ ಪೋಷಕರ ಬಳಿ ಎಲ್ಲವನ್ನು ಹೇಳಿಕೊಂಡಿದ್ದು , ತಕ್ಷಣ ಅವರು ಬಿಲ್ಖಿರಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Comments are closed.