ಮಡಿಕೇರಿ: ಸಿಮೆಂಟ್ ಉತ್ಪನ್ನಗಳನ್ನು ಮಾರಾಟ ಮಾಡುವ ಮಳಿಗೆಯಲ್ಲಿ ಕಾರಿನಲ್ಲಿ ಬಂದ ಹೈಟೆಕ್ ಜೋಡಿಯ ಕೈಚಳಕ ತೋರಿ ಕೆಲವೇ ಕ್ಷಣಗಳಲ್ಲಿ ವಿಗ್ರಹ ಕದ್ದು ಪರಾರಿಯಾಗಿರುವ ಘಟನೆ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ನಡೆದಿದೆ.
ಶೆವರ್ಲೆಟ್ ಕಾರಲ್ಲಿ ಬಂದಿಳಿದ ಯುವಕ-ಯುವತಿ ನಡೆಸಿದ ಕೃತ್ಯ ಮಳಿಗೆಯ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಕುಶಾಲನಗರದಲ್ಲಿರುವ ರಾಜೇಶ್ ಎಂಬವರ ಮಳಿಗೆ ಆಗಮಿಸಿದ ಯುವ ಜೋಡಿ ಯಾರ ಇಲ್ಲದನ್ನ ನೋಡಿ ನವಿಲು, ಸಿಂಹ ವಿಗ್ರಹಗಳನ್ನ ಕಳ್ಳತನ ಮಾಡಿದ್ದಾರೆ. ಈ ಘಟನೆ ಜೂನ್ 28 ರಂದು ನಡೆದಿದ್ದು, ಸೋಮವಾರ ಸಂಜೆ ಸಿಸಿಟಿವಿ ದೃಶ್ಯ ಪರಿಶೀಲಿಸುವ ವೇಳೆ ಬೆಳಕಿಗೆ ಬಂದಿದೆ.
ನಡೆದಿದ್ದು ಏನು?
ಜೂನ್ 28 ರ ರಾತ್ರಿ 10 ಗಂಟೆ 42 ನಿಮಿಷಕ್ಕೆ ಕಾರಿನಲ್ಲಿ ಬಂದಿಳಿದ ಜೋಡಿ, ಮೊದಲು ಸಿಮೆಂಟ್ ಉತ್ಪನ್ನಗಳನ್ನು ಶೋ ರೂಂನಲ್ಲಿ ಯಾರು ಇಲ್ಲದನ್ನ ಖಚಿತಪಡಿಸಿಕೊಂಡಿದ್ದಾರೆ. ಆ ಬಳಿಕ ಶೋ ರೂಂನ ಎದುರುಗಡೆ ಇಟ್ಟಿದ್ದ ವಿಗ್ರಹಗಳತ್ತ ಕಣ್ಣಾಡಿಸಿದ್ದಾರೆ. ಯುವತಿಗೆ ಫೈಬರ್ ಮೆಟಿರಿಯಲ್ ನವಿಲು ತುಂಬಾ ಇಷ್ಟವಾಗಿದೆ. ಆಕೆ ಅದನ್ನು ನೋಡುತ್ತಾ ಹಿಡಿದುಕೊಂಡು ಅಲ್ಲೇ ನಿಂತು ಬಿಟ್ಟಿದ್ದು, ಅಲ್ಲಿಗೆ ಬಂದ ಯುವಕ ವಿಗ್ರಹಗಳನ್ನು ತೆಗೆದುಕೊಂಡು ಹೋಗಿ ಕಾರಿಗೆ ಇಟ್ಟಿದ್ದಾರೆ. ಆ ಬಳಿಕ ಮತ್ತೆ ಕಾರಿನ ಎದುರುಗಡೆಯೇ ಇದ್ದ ಸಿಂಹದ ವಿಗ್ರಹದ ಮೇಲೂ ಕಣ್ಣಾಯಿಸಿದ ಹುಡುಗ, ಅದನ್ನೂ ಕೂಡ ತೆಗೆದುಕೊಂಡು ಮೂರೇ ನಿಮಿಷದಲ್ಲಿ ತಮ್ಮ ಹೈಫೈ ಕಾರಿನಲ್ಲಿ ಪರಾರಿಯಾಗಿದ್ದಾರೆ. ಅಂದಹಾಗೇ ಹೈಟೆಕ್ ಕಳ್ಳರ ಜೋಡಿ ತೆಗೆದುಕೊಂಡು ಹೋಗಿರುವ ವಿಗ್ರಹಗಳು 20 ಸಾವಿರ ರೂ. ಮೌಲ್ಯವನ್ನು ಹೊಂದಿದೆ.
Comments are closed.