ಹೊಸದಿಲ್ಲಿ: ಸಾಮಾನ್ಯವಾಗಿ ಭಾರತೀಯ ಮದುವೆಗಳಲ್ಲಿ ವಧು ವರ ಹೂವಿನ ಮಾಲೆ ಹಾಕಿಸಿಕೊಳ್ಳುವ ವೇಳೆ ಸಂಬಂಧಿಕರು ಎತ್ತಿ ಹಿಡಿಯುತ್ತಾರೋ ಅದು ಸಂಪ್ರದಾಯವೋ, ವಿನೋನಕ್ಕೋ ಎನ್ನುವ ವಿಚಾರ ಪಕ್ಕಕ್ಕಿರಲಿ.ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ವಧು ಮಾಲೆ ಹಾಕುವಾಗ ಎತ್ತಿ ಹಿಡಿದ ವ್ಯಕ್ತಿಗೆ ಕಪಾಲಮೋಕ್ಷ ಮಾಡಿದ ಪ್ರಸಂಗ ನಡೆದಿದೆ.
https://youtu.be/D5_LbCb39Y4
ವರನನ್ನು ಆತನ ಸಂಬಂಧಿಯೊಬ್ಬ ಎತ್ತಿ ಹಿಡಿದು ವಧುವಿಗೆ ಮಾಲೆ ಹಾಕುವಂತೆ ವಧುವಿಗೆ ಹೇಳುತ್ತಾರೆ. ಆಗ ವಧುವನ್ನು ಹಿಂಬದಿಯಲ್ಲಿದ್ದ ಬಾವ ಎತ್ತಿಕೊಳ್ಳುತ್ತಾನೆ. ಮಾಲೆ ವಿನಿಮಯ ಆದ ತಕ್ಷಣ ವಧು ಬಾವನ ಕೆನ್ನೆಗೆ ಭಾರಿಸುತ್ತಾಳೆ. ಮದುವೆಯ ಸಂಭ್ರಮದಲ್ಲಿದ್ದ ಎಲ್ಲರೂ ಒಂದು ಕ್ಷಣ ದಿಗಿಲಾಗುತ್ತಾರೆ. ಕೂಡಲೆ ಆ ವ್ಯಕ್ತಿ ಅಲ್ಲಿದ್ದ ಪತ್ನಿಯ(ವಧುವಿನ ಅಕ್ಕ) ಕೆನ್ನೆಗೆ ಒಂದೇಟು ಭಾರಿಸಿ ಮಂಟಪದಿಂದ ಸಿಟ್ಟಿನಿಂದ ಹೊರ ನಡೆಯುತ್ತಾನೆ.
ಘಟನೆ ಯಾವ ಪ್ರದೇಶದಲ್ಲಿ ನಡೆದಿದೆ ಎನ್ನುವುದು ತಿಳಿದು ಬಂದಿಲ್ಲ.
Comments are closed.