ಅಂತರಾಷ್ಟ್ರೀಯ

ಗುಹೆಯೊಳಗೆ ಸಿಲುಕಿದ್ದ ಬಾಲಕರ ಫುಟ್ಬಾಲ್‌ ತಂಡ ಇನ್ನೂ 3-4 ತಿಂಗಳು ಹೊರಬರುವುದು ಕಷ್ಟ!

Pinterest LinkedIn Tumblr


ಬ್ಯಾಂಕಾಕ್‌: ಥಾಯ್ಲೆಂಡ್‌ನ ಮಾಯೆಸಾಯ್‌ ಎಂಬಲ್ಲಿ ಒಂಬತ್ತು ದಿನಗಳ ಹಿಂದೆ ಗುಹೆಯೊಂದರಲ್ಲಿ ಸಿಲುಕಿಕೊಂಡಿದ್ದ 12 ಬಾಲಕರ ಫುಟ್ಬಾಲ್‌ ತಂಡ ಮತ್ತು ಅವರ ಕೋಚ್‌ ಗುಹೆಯೊಳಗೆ ಜೀವಂತವಾಗಿ ಪತ್ತೆಯಾಗಿದ್ದಾರೆ.

ಆದರೆ, ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ತಂಡವನ್ನು ಗುಹೆಯಿಂದ ಹೊರತರಲು ಕನಿಷ್ಠ 3-4 ತಿಂಗಳು ಬೇಕಾಗಬಹುದಾದುದರಿಂದ, ಅಷ್ಟರವರೆಗೆ ಅವರಿಗೆ ಗುಹೆಯೊಳಗೇ ಇರಲು ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಕಿ.ಮೀ.ಗಳಷ್ಟುಉದ್ದದ ಗುಹೆಯಲ್ಲಿ ನೀರು ಆವರಿಸಿದ್ದು, ಬಾಲಕರಿಗೆ ಈಜು ಬಾರದ ಕಾರಣ ಅವರನ್ನು ಹೊರ ತರುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ತಂಡಕ್ಕೆ ತಿಂಗಳುಗಳಿಗೆ ಬೇಕಾದಷ್ಟುಆಹಾರ, ಔಷಧಿ, ಅಗತ್ಯ ಸಾಮಗ್ರಿಗಳನ್ನು ಪೂರೈಸಲಾಗುತ್ತದೆ.

ಬಾಲಕರಿಗೆ ಈಜು ತರಬೇತಿ ನೀಡಲು ಥಾಯ್‌ ಸೇನೆ ಮುಂದಾಗಿದೆ. ರಕ್ಷಣಾ ಸಿಬ್ಬಂದಿ ಬಾಲಕರೊಂದಿಗೆ ಮಾತನಾಡಿರುವ ವೀಡಿಯೊ ಪ್ರಕಟವಾಗಿದ್ದು, ಅವರ ಸುರಕ್ಷಿತ ಹಿಂದಿರುಗುವಿಕೆಗೆ ಪ್ರಾರ್ಥಿಸಿದ್ದ ಥಾಯ್ಲೆಂಡ್‌ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.

Comments are closed.