ಕರಾವಳಿ

“ಗೋಕುಲವಾಣಿ” ವಿಶೇಷಾಂಕ ಅಖಿಲ ಭಾರತ ಮಟ್ಟದ ಕನ್ನಡ ಕಥಾ ಸ್ಪರ್ಧೆ : ವಿಜೇತರಿಗೆ ನಗದು ಬಹುಮಾನ

Pinterest LinkedIn Tumblr

ಮುಂಬಾಯಿ : ಬಿ. ಎಸ್. ಕೆ.ಬಿ. ಎಸೋಸಿಯೇಶನ್ ಮುಂಬಯಿ ತನ್ನ ಮುಖವಾಣಿಯಾಗಿ ಪ್ರಕಟಿಸುತ್ತಿರುವ ‘ಗೋಕುಲವಾಣಿ’ ಮಾಸಪತ್ರಿಕೆ ನವಂಬರ್ 2018ರ ಸಂಚಿಕೆಯನ್ನು ದೀಪಾವಳಿ ವಿಶೇಷ ಸಂಚಿಕೆಯಾಗಿ ಹೊರತರುತ್ತಿದ್ದು ಆ ಪ್ರಯುಕ್ತ ಅಖಿಲ ಭಾರತ ಮಟ್ಟದ ಕನ್ನಡ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ. ಕಥೆಗಳಿಗೆ ಪ್ರಥಮ ರೂ. 10,000/-, ದ್ವಿತೀಯ ರೂ. 5,000/ ಹಾಗೂ ತೃತೀಯ ರೂ.3,000/ ನಗದು ಬಹುಮಾನವನ್ನು ಅರ್ಹ ಕಥೆಗಳಿಗೆ ನೀಡಲಾಗುತ್ತದೆ. ತೀರ್ಪುಗಾರರ ಮೆಚ್ಚುಗೆ ಪಡೆದ ಎರಡು ಕಥೆಗಳಿಗೆ ತಲಾ ರೂ. 1,000/- ನಗದು ಬಹುಮಾನ ಕೊಡಲಾಗುವುದು.

ಸ್ಪರ್ಧೆಯ ನಿಯಮಗಳು ಹೀಗಿವೆ:

* ಕಥೆ ಸ್ವರಚಿತವಾಗಿರಬೇಕು. ಅನುವಾದ, ರೂಪಾಂತರ, ಅನುಕರಣೆಗಳಿಗೆ ಆಸ್ಪದವಿಲ್ಲ. ಓರ್ವ ಲೇಖಕರು ಒಂದೇ ಕಥೆ ಕಳುಹಿಸತಕ್ಕದ್ದು.
* ಕಥೆ 2000 ಶಬ್ದಗಳ ಮಿತಿಯಲ್ಲಿರಬೇಕು.
* ಕಾಗದದ ಒಂದೇ ಮಗ್ಗುಲಲ್ಲಿ ಕೈಬರಹ ಅಥವಾ ಕಂಪ್ಯೂಟರೀಕೃತ ರೂಪದಲ್ಲಿರುವ ಕಥೆಗಳನ್ನು ಸ್ಪೀಡ್ ಪೋಸ್ಟ್ ಅಥವಾ ಈಮೇಲ್ ಮುಖಾಂತರ ಕೆಳಗೆ ನೀಡಿದ ವಿಳಾಸಕ್ಕೆ ಕಳಿಸಬಹುದು.
* ಪ್ರವೇಶ ಶುಲ್ಕವಿಲ್ಲ.
* ಲೇಖಕರ ಹೆಸರನ್ನು ಪ್ರತ್ಯೇಕ ಹಾಳೆಯೊಂದರಲ್ಲಿ ಲಗತ್ತೀಕರಿಸಬೇಕು. ಇದರಲ್ಲಿ ಕಥೆಯ ಹೆಸರು, ಲೇಖಕರ ಹೆಸರು, ವಿಳಾಸ, ಮೊಬೈಲ್ ನಂಬರ್, ಈಮೇಲ್ ನಮೂದಿಸಬೇಕು. ಕಥೆಯ ಯಾವುದೇ ಪುಟದಲ್ಲಿ ಲೇಖಕರ ಹೆಸರು ಇದ್ದಲ್ಲಿ ಕಥೆ ಅಸ್ವೀಕೃತವಾಗುತ್ತದೆ.
* ಸ್ಪರ್ಧೆಗೆ ಬಂದ ಕಥೆಗಳನ್ನು ಹಿಂತಿರುಗಿಸಲಾಗುವುದಿಲ್ಲ.
* ತೀರ್ಪುಗಾರರ ತೀರ್ಮಾನವೇ ಅಂತಿಮ. ಯಾವುದೇ ಪತ್ರ ವ್ಯವಹಾರ, ದೂರವಾಣಿ ಕರೆ ನಿಷಿದ್ಧ.
* ಕಥೆಗಳನ್ನು ಸ್ವೀಕರಿಸುವ ಅಂತಿಮ ದಿನಾಂಕ 25.9.2018.
* ಸ್ಪರ್ಧೆಯ ಫಲಿತಾಂಶವನ್ನು ಗೋಕುಲವಾಣಿ ವಿಶೇಷಾಂಕ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.

ಕಥೆಗಳನ್ನು ಇಲ್ಲಿಗೆ ಕಳುಹಿಸಿ: Editor, Gokulavani, Kannada Monthly, BSKB Association, Plot No. 273, Gokul Marg, Sion (E), Mumbai 400 022. Email: gokulavani@bskba.com

Comments are closed.