ಕರಾವಳಿ

ಅದಿಕ ರಕ್ತಸ್ರಾವವನ್ನು ಈ ವಿಧಾನದಿಂದ ನಿಲ್ಲಿಸಿ ಗಂಭೀರ ಸಮಸ್ಯೆಯಿಂದ ಪಾರಾಗಿ….

Pinterest LinkedIn Tumblr

ಅಡುಗೆ ಮಾಡುತ್ತಿರುವಾಗ ಚಾಕು ತಾಗಿ ಅಥವಾ ಅಕಸ್ಮತ್ತಾಗಿ ಬಿದ್ದಾಗ ಕೆಲವೊಮ್ಮೆ ಗಾಯವಾಗಿ ರಕ್ತ ಬರುವುದುಂಟು. ಇದು ಅಷ್ಟು ಗಂಭೀರ ಸಮಸ್ಯೆ ಏನಲ್ಲವೆಂದುಕೊಂಡರೂ ಕೆಲವೊಮ್ಮೆ ರಕ್ತಸ್ರಾವ ನಿಲ್ಲದೆ ಇರಬಹುದು. ತಕ್ಷಣ ಆ ರಕ್ತವನ್ನು ನಿಲ್ಲಿಸಲು ನಮ್ಮ ಮನೆಯಲ್ಲಿಯೇ ಇರುವ ಕೆಲವು ವಸ್ತುಗಳು ಸಹಾಯ ಮಾಡುತ್ತವೆ. ಅವ್ಯಾವು ಎಂದು ತಿಳಿದುಕೊಳ್ಳೋಣ ಬನ್ನಿ.

ಮಂಜುಗಡ್ಡೆ:
ಗಾಯವಾದಾಗ, ನೋವಾದಾಗ ಐಸ್ ಇಡುವುದು ಸಾಮಾನ್ಯ. ಯಾಕೆಂದರೆ ಐಸ್ ಹೆಪ್ಪುಗಟ್ಟುವಿಕೆಯ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ನೋವು ನಿವಾರಣೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ತೆರೆದ ಗಾಯದ ಮೇಲೆ ನೇರವಾಗಿ ಐಸ್ ಇಡಲೇಬಾರದು, ಬದಲಾಗಿ ಅದನ್ನು ಟವಲ್ ಅಲ್ಲಿ ಕಟ್ಟಿಕೊಂಡು ನಂತರ ಗಾಯದ ಮೇಲಿಡಬೇಕು.

ಪೆಟ್ರೋಲಿಯಮ್ ಜೆಲ್ಲಿ:
ಪೆಟ್ರೋಲಿಯಂ ಜೆಲ್ಲಿ ಇರುವ ಉತ್ಪನ್ನಗಳು ಮತ್ತು ಚರ್ಮವನ್ನು ರಕ್ಷಿಸಲು ಬಳಸಬಹುದಾದ ತೈಲಗಳು ಮೇಣಗಳ ಮಿಶ್ರಣವನ್ನು ಹೊಂದಿರುತ್ತವೆ. ಅದಕ್ಕೆ ವ್ಯಾಸಲೀನ್ ಗಾಯದ ಮೇಲೆ ರಕ್ಷಣಾತ್ಮಕ ಪದರವನ್ನು ರೂಪಿಸುತ್ತದೆ ಮತ್ತು ರಕ್ತಸ್ರಾವವನ್ನು ನಿಲ್ಲಿಸುತ್ತದೆ. ಗಾಯವಾದಾಗ ಅದನ್ನು ಸ್ವಚ್ಛಗೊಳಿಸಿ ಅದರ ಮೇಲೆ ಮೇಲೆ ಪೆಟ್ರೋಲಿಯಂ ಜೆಲ್ಲಿ ಹಚ್ಚಿ, ರಕ್ತಸ್ರಾವ ನಿಂತ ಮೇಲೆ ಉಳಿದ ಜೆಲ್ಲಿಯನ್ನು ಒರೆಸಿ ತೆಗೆಯಿರಿ.

ಉಪ್ಪಿನ ನೀರು:
ಉಪ್ಪಿನ ನೀರು ಒಂದು ನೈಸರ್ಗಿಕ ಔಷಧ ವಿಧಾನ. ಗಾಯದ ಮೇಲೆ ಅಥವಾ ರಕ್ತಸ್ರಾವ ಉಂಟಾದಾಗ ಅದರ ಮೇಲೆ ಉಪ್ಪಿನ ನೀರನ್ನು ಸಿಂಪಡಿಸಿದರೆ ರಕ್ತಸ್ರಾವ ತಹಬದಿಗೆ ಬರುತ್ತದೆ. ಇದು ಬಾಯಿಯಲ್ಲಿ ಉಂಟಾಗುವ ಗಾಯಗಳ ಮೇಲೂ ಪರಿಣಾಮ ಬೀರುತ್ತದೆ. ಗಾಯ ಉಂಟಾದಾಗ ಅದರ ಮೇಲೆ ನೇರವಾಗಿ ಉಪ್ಪನ್ನು ಸುರಿದರೂ ಅದು ಶೀಘ್ರವಾಗಿ ನಿಯಂತ್ರಣಕ್ಕೆ ಬರುತ್ತದೆ.

ಸಕ್ಕರೆ:
ಸಕ್ಕರೆ ರಕ್ತವನ್ನು ಹೆಪ್ಪುಗಟ್ಟುವಂತೆ ಮಾಡುವ ಮತ್ತು ನಂಜುನಿರೋಧಕ ಗುಣವನ್ನು ಹೊಂದಿದೆ. ಅದರ ಸ್ಫಟಿಕ ಸ್ವರೂಪದ ಕಾರಣ ಅದು ರಕ್ತ ಹೆಪ್ಪುಗಟ್ಟುವಂತೆ ಕಾರ್ಯನಿರ್ವಹಿಸುತ್ತದೆ ಮತ್ತು ರಕ್ತವನ್ನು ಒಣಗಿಸುತ್ತದೆ.

ಹಿಟ್ಟು:
ಗಾಯದ ಮೇಲೆ ಅಥವಾ ರಕ್ತಸ್ರಾವ ಉಂಟಾಗುತ್ತಿರುವ ಸ್ಥಳಗಳ ಮೇಲೆ ಯಾವುದಾದರೂ ಹಿಟ್ಟನ್ನು ಹಾಕಿದರೆ ಬಹುಬೇಗ ರಕ್ತಸ್ರಾವವನ್ನು ನಿಯಂತ್ರಿಸಬಹುದು. ರಕ್ತಸ್ರಾವವನ್ನು ನಿಲ್ಲಿಸುವ ಮೂಲಕ ಉರಿಯುವ ಪ್ರಕ್ರಿಯೆಯನ್ನು ಹಿಟ್ಟುನಿಯಂತ್ರಿಸುತ್ತದೆ . ತೇವಾಂಶವನ್ನು ಹೀರಿಕೊಳ್ಳುವ ಗುಣವನ್ನು ಹಿಟ್ಟು ಒಳಗೊಂಡಿದೆ. ಗಾಯದ ಮೇಲೆ 20 ನಿಮಿಷಗಳ ಕಾಲ ಹಿಟ್ಟನ್ನು ಸಿಂಪಡಿಸಿ. ಆಗ ರಕ್ತಸ್ರಾವವು ನಿಯಂತ್ರಣಕ್ಕೆ ಬರುವುದು.

ಕರಿಮೆಣಸು:
ಗಾಯದ ಮೇಲೆ ಕರಿಮೆಣಸು ಪುಡಿಯನ್ನು ಹಚ್ಚಿದರೆ ಸ್ವಲ್ಪ ಉರಿ ಉಂಟಾಗಬಹುದು. ಆದರೆ ಬಹುಬೇಗ ರಕ್ತಸ್ರಾವ ನಿಯಂತ್ರಣಕ್ಕೆ ಬರುತ್ತದೆ.

ಅರಶಿಣ:
ಇದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಒಂದು ಮನೆಮದ್ದು. ಗಾಯದ ಮೇಲೆ ಅಥವಾ ರಕ್ತಸ್ರಾವ ಉಂಟಾಗುತ್ತಿರುವ ಸ್ಥಳಗಳ ಮೇಲೆ ಅರಿಶಿಣ ಹಚ್ಚುವುದರಿಂದ ಬಹುಬೇಗ ರಕ್ತಸ್ರಾವವನ್ನು ನಿಯಂತ್ರಿಸಬಹುದು. ಜೊತೆಗೆ ಸೋಂಕನ್ನು ತಡೆಗಟ್ಟುವ ಗುಣವನ್ನು ಇದು ಹೊಂದಿದೆ.

ಕಾಫಿ ಪುಡಿ:
ಕಾಫಿ ಪುಡಿ ರಕ್ತಸ್ರಾವವನ್ನು ಹೆಪ್ಪುಗಟ್ಟಿಸುವ ಪ್ರಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ತ್ವಚೆಯ ಮೇಲೆ ಉಂಟಾದ ಗಾಯ ಅಥವಾ ಸೀಳಿಕೊಂಡ ಗಾಯದಿಂದ ಉಂಟಾಗುವ ರಕ್ತ ಸ್ರಾವವನ್ನು ನಿಲ್ಲಿಸಲು ಇದು ಅತ್ಯಂತ ಹಳೆಯ ಮತ್ತು ಸಾಂಪ್ರದಾಯಿಕ ನೈಸರ್ಗಿಕ ಚಿಕಿತ್ಸೆ. ಗಾಯದ ಮೇಲೆ ಕಾಫಿ ಪೌಡರ್ ನೀರನ್ನು ಹಾಕಿ, ನಂತರ 10 ನಿಮಿಷಗಳ ಬಳಿಕ ಸ್ವಚ್ಛಗೊಳಿಸಿದರೆ ರಕ್ತಸ್ರಾವ ನಿಲ್ಲುತ್ತದೆ.

ಚಹಾ ಪುಡಿ:
ಚಹಾ ಪುಡಿ ರಕ್ತಸ್ರಾವವನ್ನು ನಿಯಂತ್ರಿಸುವಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತದೆ. ಇದು ಬಹುಬೇಗ ರಕ್ತ ಹೆಪ್ಪುಗಟ್ಟುವಿಕೆಯನ್ನು ಪ್ರಚೋದಿಸುತ್ತದೆ. ಪುಟ್ಟ ಚಹಾದ ಚೀಲವನ್ನು ನೀರಿನಲ್ಲಿ ಅದ್ದಿ ತೇವಗೊಳಿಸಿ. ನಂತರ ಗಾಯಗೊಂಡ ಅಥವಾ ರಕ್ತಸ್ರಾವ ಆಗುತ್ತಿರುವ ಜಾಗದಲ್ಲಿ ಇಡಿ. ಬಹುಬೇಗ ರಕ್ತ ಸ್ರಾವ ನಿಯಂತ್ರಣಕ್ಕೆ ಬರುವುದು.

Comments are closed.