ರಾಷ್ಟ್ರೀಯ

ಭಾರಿ ವಿವಾದದ ಬಳಿಕ ಅಂತರ್‌ಧರ್ಮೀಯ ದಂಪತಿ ಪಾಸ್‌ಪೋರ್ಟ್‌ಗೆ ಅನುಮೋದನೆ!

Pinterest LinkedIn Tumblr


ಹೊಸದಿಲ್ಲಿ: ಭಾರಿ ವಿವಾದದ ಬಳಿಕ ಲಖನೌನ ಅಂತರ್‌ಧರ್ಮೀಯ ದಂಪತಿಗೆ ನೀಡಲಾಗಿದ್ದ ಪಾಸ್‌ಪೋರ್ಟ್‌ಗಳನ್ನು ಇಲ್ಲಿನ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿ ಅನುಮೋದಿಸಿದೆ.

ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿ ಪಿಯೂಶ್‌ ವರ್ಮಾ ಬುಧವಾರ ಈ ವಿಷಯ ಖಚಿತಪಡಿಸಿದ್ದಾರೆ. ಆದರೆ, ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ದಂಪತಿಗೆ ಅಧಿಕಾರಿಗಳು ದಾಖಲೆ ಪರಿಶೀಲನೆ ವೇಳೆ ಅನಗತ್ಯ ಪ್ರಶ್ನೆಗಳನ್ನು ಕೇಳಿ ಕಿರಕುಳ ನೀಡಿದ ವಿಷಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಡೆಸಿದ ಆಂತರಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ. ಅಂತರ್‌ಧರ್ಮೀಯ ವಿವಾದವಾಗಿದ್ದರಿಂದಲೇ ತಮ್ಮನ್ನು ಟಾರ್ಗೆಟ್‌ ಮಾಡಲಾಗಿತ್ತು ಎಂದು ದಂಪತಿ ಈ ಆರೋಪಿಸಿದ್ದರು.

”ಪಾಸ್‌ಪೋರ್ಟ್‌ ವಿತರಿಸಲು ಅರ್ಜಿದಾರರ ಧರ್ಮದ ಬಗ್ಗೆ ಯಾವುದೇ ವಿವರ ಅನಗತ್ಯ. ಆದರೆ ಸಂಬಂಧಪಟ್ಟ ಅಧಿಕಾರಿ ವಿಕಾಸ್‌ ಮಿಶ್ರಾ ಅರ್ಜಿದಾರರ ಧರ್ಮದ ಬಗ್ಗೆ ಅನಗತ್ಯ ಪ್ರಶ್ನೆಗಳನ್ನು ಕೇಳಿದ್ದಾರೆ. ಕರ್ತವ್ಯದ ನಿಯಮಗಳನ್ನು ಮೀರಿದ್ದಾರೆ,” ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಅಧಿಕಾರಿ ಕಿರುಕುಳ ನೀಡಿದ ಬಗ್ಗೆ ದಂಪತಿ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಆ ಅಧಿಕಾರಿಯನ್ನು ಲಖನೌನಿಂದ ಗೋರಖಪುರಕ್ಕೆ ವರ್ಗಾವಣೆ ಮಾಡಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಆದೇಶಿಸಿದ್ದರು. ಆನಂತರ ದಂಪತಿಗೆ ಪಾಸ್‌ಪೋರ್ಟ್‌ ನೀಡಲಾಗಿತ್ತು. ಸುಷ್ಮಾ ಅವರ ಈ ಕ್ರಮವನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಟ್ರೋಲಿಂಗ್‌ ನಡೆದಿತ್ತು.

Comments are closed.