ಕರಾವಳಿ

ಸಮ್ಮಿಶ್ರ ಸರಕಾರದ‌ ಅಪವಿತ್ರ ಮೈತ್ರಿಯ’ಸಾಂದರ್ಭಿಕ ಶಿಶು’ ಈ ಬಜೆಟ್ : ಕ್ಯಾ| ಗಣೇಶ್‌ ಕಾರ್ಣಿಕ್

Pinterest LinkedIn Tumblr

ಮಂಗಳೂರು : ಅನೇಕ ಗೊಂದಲಗಳ ನಡುವೆ ಧರ್ಮಸ್ಥಳ ಶಾಂತಿವನದ ಪ್ರಕೃತಿ ಚಿಕಿತ್ಸೆಯ‌ ಒತ್ತಡಕ್ಕೆ ಮಣಿದು ಪೆಬ್ರವರಿ ೨೦೧೮ರ ಸಿದ್ದರಾಮಯ್ಯನವರ ಮತ್ತು ಜುಲೈ ೨೦೧೮ರ ಕುಮಾರ ಸ್ವಾಮಿಯವರ ಬಜೆಟ್‌ಗಳ ಸಾಂದರ್ಭಿಕ ಅನುಕೂಲಗಳ ಹೂರಣ ಹಾಗೂ ಅಪವಿತ್ರ ಮೈತ್ರಿಯ’ಸಾಂಧರ್ಬಿಕ ಶಿಶು’ವೇ ಈ ಬಜೆಟ್ ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್ ತಿಳಿಸಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳು ಈ ಹಿಂದೆ ತಿಳಿಸಿದಂತೆ ‘ಸಾಂಧರ್ಬಿಕ ಶಿಶು’ವಿನ ಭವಿಷ್ಯವೇ‌ಒಂದು ವರ್ಷ. ಇಂತಹ ‘ಶಿಶು’ ತೀವ್ರ ಸುಶ್ರೂಷಾ ಘಟಕ ದಲ್ಲಿರುವ‌ಈ ಸಂದರ್ಭದಲ್ಲಿ‌ಈ ಬಜೆಟ್ ಎಷ್ಟು ಪ್ರಸ್ತುತ‌ಎನ್ನುವುದುಯಕ್ಷಪ್ರಶ್ನೆ.

ಅಧಿಕಾರ ಸ್ವೀಕರಿಸಿದ 24 ಗಂಟೆಗಳ ಒಳಗಾಗಿ ವಾಣಿಜ್ಯ ಬ್ಯಾಂಕುಗಳು ಸೇರಿದಂತೆರೈತರ‌ಎಲ್ಲಾ ಸಾಲಮನ್ನಾ‌ಎನ್ನುವ’ಕುಮಾರ’ನ ಘೋಷಣೆ’ಉತ್ತರಕುಮಾರ’ನ ಪೌರುಷವಾಗಿರುವುದು ವಾಸ್ತವ. ಸರಕಾರದ‌ಅಯುಷ್ಯವೇ‌ಒಂದುವರ್ಷವೆಂದು ಹೇಳಿದ ಮುಖ್ಯಮಂತ್ರಿ ಗಳು, ರೂ.34ಸಾವಿರಕೋಟಿ ಸಾಲವನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಹಂತಹಂತವಾಗಿ ಮನ್ನಾಗೊಳಿಸುವ ಭರವಸೆ ನೀಡಿರುವುದೇಹಾಸ್ಯಾಸ್ಪದ.

ಈ ಬಜೆಟ್‌ಕರಾವಳಿ ಮತ್ತು ಮಲೆನಾಡನ್ನು ಸಂಪೂರ್ಣವಾಗಿ ಕಡೆಗಣಿಸಿರಾಜಕೀಯವಾಗಿತನ್ನಸಂಕುಚಿತ ಮನೋಭಾವವನ್ನು ಪ್ರತಿಬಿಂಭಿಸಿರುತ್ತದೆ.ಮಾನ್ಯ ಮುಖ್ಯಮಂತ್ರಿಗಳು ಕೇವಲ ಹಳೆಮೈಸೂರಿಗೆ ಸೀಮಿತವಾಗಿರುವುದು‌ಈ ಬಜೆಟಿನಿಂದ ಸ್ಪಷ್ಟವಾಗಿದೆ. ಶಿಕ್ಷಣಕ್ಷೇತ್ರಕ್ಕೆ‌ಆದ್ಯತೆ ನೀಡದಿರುವುದು‌ಆಶ್ಚರ್ಯ ಹಾಗೂ ಇದುಭವಿಷ್ಯದದೃಷ್ಟಿಯಲ್ಲಿ ಮಾರಕ.

2000ದವರೆಗೆ ಪ್ರಾರಂಭವಾದಕನ್ನಡ ಮಾಧ್ಯಮಶಾಲಾಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಬಹುದೆಂಬ ನಿರೀಕ್ಷೆ ಹುಸಿಯಾಗಿದ್ದು, ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ಭವಿಷ್ಯ‌ಅಸ್ಪಷ್ಟವಾಗಿದೆ.ಬಹುನಿರೀಕ್ಷಿತಕಾಲ್ಪನಿಕ ಸಮಸ್ಯೆ ಪರಿಹಾರ, ಶಿಕ್ಷಕರ ವೇತನತಾರತಮ್ಯದಗೊಂದಲ ನಿವಾರಣೆ, ಅತಿಥಿ‌ಉಪನ್ಯಾಸಕರ ಸಮಸ್ಯೆಗಳಿಗೆ ಪರಿಹಾರ, ಕನ್ನಡಮಾದ್ಯಮ ಶಾಲೆಗಾಳ ಸ್ಥಿತಿಗತಿಗಳ ಸುಧಾರಣೆಗೆತೀವ್ರ‌ಅಗತ್ಯ ಕ್ರಮಗಳು, ವರ್ಗಾವಣೆ ಸಮಸ್ಯೆಗೆ ಪರಿಹಾರ ಮರೀಚಿಕೆಯಾಗಿಯೇ ಉಳಿದಿರುವುದು ದುರಂತ.

ಯಾವುದೇದೂರದೃಷ್ಟಿಯಿಲ್ಲದ, ಯಾರನ್ನೂ ಖುಷಿಪಡಿಸದ, ಅಪವಿತ್ರ ಮೈತ್ರಿಯ ಸಮ್ಮಿಶ್ರ ಸರಕಾರದ ಹೊಂದಾಣಿಕೆಯ ಬಜೆಟನ್ನುರಾಜ್ಯದಜನತೆ ಸಂಪೂರ್ಣವಾಗಿತಿರಸ್ಕರಿಸಲಿದ್ದಾರೆ ಕ್ಯಾ| ಗಣೇಶ್‌ ಕಾರ್ಣಿಕ್ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.