ಕರಾವಳಿ

ಈ ಅದ್ಭುತ ನೀರನ್ನು ಪ್ರತಿದಿನ ಯಾಕೆ ಕುಡಿಯಬೇಕು …..!

Pinterest LinkedIn Tumblr

ಎಳನೀರಿನಲ್ಲಿ ಪೋಷಕಾಂಶಗಳ ಖಜಾನೆಯೇ ಇದೆ. ಸಿಹಿಮಿಶ್ರಿತ ಈ ನೀರು ಕುಡಿಯಲು ಎಷ್ಟು ರುಚಿಯೋ ಆರೋಗ್ಯಕ್ಕೂ ಅಷ್ಟೇ ಉತ್ತಮ. ಮಧುಮೇಹ, ರಕ್ತದೊತ್ತಡ, ಬೊಜ್ಜು, ಮೈಗ್ರೇನ್‌ ಇವುಗಳ ಪರಿಹಾರಕ್ಕೆ ಆಸ್ಪತ್ರೆಗೆ ಅಲೆದಾಡುತ್ತೇವೆ. ಆದರೆ ನಮ್ಮ ಜೀವನಶೈಲಿ ಸ್ವಲ್ಪ ಬದಲಾಯಿಸಿದರೆ ಈ ರೋಗಗಳಿಂದಲೂ ದೂರವಿರಬಹುದು. ದಿನಾ ಒಂದು ಎಳನೀರು ಈ ರೋಗಗಳು ಬರದಂತೆ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಹಾಗಾದರೆ ಬನ್ನಿ  ದಿನಾ ಒಂದು ಎಳನೀರು ಕುಡಿಯುವುದರಿಂದ ಏನೇನು ಪ್ರಯೋಜನಗಳಿವೆ ತಿಳಿದುಕೊಳ್ಳೋಣ;

ಹೃದಯದ ಆರೋಗ್ಯಕ್ಕೆ:
ಇದು ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟಾಲ್ ಜಾಸ್ತಿ ಮಾಡುತ್ತದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ನಿಯಂತ್ರಿಸಬಹುದು.

ಸಕ್ಕರೆ ಮಟ್ಟವನ್ನು ನಿಯಂತ್ರಿಸಲು:
ಎಳನೀರಿನಲ್ಲಿ ಅಮೈನೋ ಆ್ಯಸಿಡ್‌ ಇದ್ದು, ಇದು ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

ಬಿಪಿ ನಿಯಂತ್ರಣ:
ವೆಸ್ಟ್‌ ಇಂಡಿಯಾ ಮೆಡಿಕಲ್ ಜರ್ನಲ್‌ ಮಾಡಿರುವ ಅಧ್ಯಯನದಲ್ಲಿ ಎಳನೀರಿನಲ್ಲಿರುವ ಪೊಟಾಷ್ಯಿಯಂ ರಕ್ತದೊತ್ತಡ ನಿಯಂತ್ರಣ ಮಾಡುತ್ತದೆ ಎಂದು ಸಾಬೀತಾಗಿದೆ.

ಮೈಗ್ರೇನ್‌:
ದೇಹದಲ್ಲಿ ಮೆಗ್ನಿಷಿಯಂ ಅಂಶ ಕಡಿಮೆಯಾದರೆ ಮೈಗ್ರೇನ್‌ ಕಾಣಿಸುವುದು. ಮೈಗ್ರೇನ್‌ಗೆ ಎಳನೀರಿನಲ್ಲಿರುವ ಮೆಗ್ನಿಷಿಯಂ ಒಳ್ಳೆಯದೆಂದು ಆರೋಗ್ಯ ತಜ್ಞರು ಕೂಡ ಸಲಹೆ ನೀಡುತ್ತಾರೆ.

ಹ್ಯಾಂಗೋವರ್‌:
ವೀಕೆಂಡ್‌ ಪಾರ್ಟಿ ಮುಗಿಸಿ ಬೆಳಗ್ಗೆ ಏಳುವಾಗ ಹ್ಯಾಂಗೋವರ್‌ ಕಾಡುತ್ತಿದೆಯೇ? ಖಾಲಿ ಹೊಟ್ಟೆಯಲ್ಲಿ ಒಂದು ಎಳನೀರು ಕುಡಿದರೆ ಸಾಕು, ರಿಫ್ರೆಶ್‌ ಆಗುವಿರಿ.

ಬೊಜ್ಜು ಕರಗಲು:
ಬೊಜ್ಜು ಕರಗಲು ದಿನಾ ಅರ್ಧ ಗಂಟೆ ವ್ಯಾಯಾಮ ಹಾಗೂ ಒಂದು ಎಳನೀರು ಕುಡಿಯಿರಿ, ಬೊಜ್ಜು ಕರಗುವುದು, ಮುಖದ ಕಾಂತಿ ಕೂಡ ಹೆಚ್ಚುವುದು.

ಯೌವನ ಕಾಪಾಡಲು:
ವಯಸ್ಸಾದಂತೆ ಸುಕ್ಕಾಗುವುದು ನೈಸರ್ಗಿಕ ನಿಯಮವಾದರೂ ಯೌವನ ಕಳೆ ಬೇಗನೆ ಮಾಸದಿರಲು ಎಳನೀರು ಸಹಾಯ ಮಾಡುತ್ತದೆ.

ನ್ಯಾಚುರಲ್‌ ಎನರ್ಜಿ ಡ್ರಿಂಕ್ಸ್‌:
ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ತುಂಬಾ ಸುಸ್ತು ಅನಿಸುವುದು. ಒಂದು ಎಳನೀರು ದಿನಪೂರ್ತಿ ಚಟುವಟಿಕೆಯಿಂದ ಇರಲು ಚೈತನ್ಯ ನೋಡುವುದು

Comments are closed.