ಕರ್ನಾಟಕ

ಕನ್ನಡ ಅಳಿವಿಗೆ ಇಂಗ್ಲಿಷ್‌ ಮಾಧ್ಯಮ ಆರಂಭ ನಾಂದಿ: ಎಸ್‌.ಜಿ.ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ಸರಕಾರಿ ಶಾಲೆಗಳನ್ನು ವಿಲೀನಗೊಳಿಸುವ ಹಾಗೂ ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತೆರೆದು ಇಂಗ್ಲೀಷ್‌ ಶಾಲೆ ಆರಂಭಿಸುವ ಸರಕಾರದ ಕ್ರಮ ಸರಿಯಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌. ಜಿ. ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಒಂದು ಕಿ.ಮೀ. ವ್ಯಾಪ್ತಿಯಲ್ಲಿರುವ ಮತ್ತು ಕಡಿಮೆ ದಾಖಲಾತಿ ಇರುವ ಸರಕಾರಿ ಶಾಲೆಗಳನ್ನು ವಿಲೀನಗೊಳಿಸುವುದು, ಇಂಗ್ಲಿಷ್‌ ಮಾಧ್ಯಮದ ತರಗತಿ ಆರಂಭಿಸುವ ಕ್ರಮ ಕನ್ನಡದ ಅಳಿವಿಗೆ ನಾಂದಿ ಹಾಡಿದಂತೆ. ಶಿಕ್ಷ ಣದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸದೇ ಹೋದರೆ ಕನ್ನಡ ನಮ್ಮ ಬದುಕಿನ ಅಸ್ಮಿತೆಯ ಭಾಷೆಯಾಗಿ ಉಳಿಯುವುದಿಲ್ಲ. ಪ್ರಾಥಮಿಕ ಶಿಕ್ಷ ಣದಲ್ಲಿ ಕನ್ನಡ ಕಲಿಸುವುದು ವೈಜ್ಞಾನಿಕ ಮತ್ತು ನೈಸರ್ಗಿಕ ವಿಧಾನ. ಅದು ಅವರನ್ನು ಉತ್ತಮ ಮನುಜರನ್ನಾಗಿ ರೂಪಿಸಲಿದೆ. ಅಂತಹ ಪ್ರಾಥಮಿಕ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಸರಕಾರ ಕಟಿಬದ್ಧವಾಗಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಾಥಮಿಕ ಶಾಲೆಗಳ ದಾಖಲಾತಿಯ ನೆಪವೊಡ್ಡಿ ವಿಲೀನಗೊಳಿಸುವ ಮತ್ತು ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಕೆಗೆ ಉತ್ತೇಜನ ನೀಡಲು ಮುಂದಾಗಿರುವ ಸರಕಾರದ ಈ ಕ್ರಮ ಕಳವಳಕಾರಿಯಾಗಿದೆ. ಕೂಡಲೇ ಈ ನಿರ್ಣಯವನ್ನು ಹಿಂಪಡೆಯಬೇಕು. 2015ರ ಕನ್ನಡ ಭಾಷಾ ಕಲಿಕಾ ಅಧಿಧಿನಿಯಮದ ಪ್ರಕಾರ ರಾಜ್ಯದ ಎಲ್ಲಾ ಖಾಸಗಿ/ಅನುದಾನಿತ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಪ್ರಥಮ/ದ್ವಿತೀಯ ಭಾಷೆಯಾಗಿ ಕಲಿಸಲು, ಎಲ್ಲಾ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆಯಾಗಿ ಸಮರ್ಥವಾಗಿ ಕಲಿಸಲು ಆದೇಶಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Comments are closed.