ಕರಾವಳಿ

ಜನಪ್ರತಿನಿಧಿಗಳನ್ನು ಬಿಡದ ವಂಚಕರು : ಮೊಬೈಲ್ ಕರೆಗೆ ಮರುಳಾಗಿ ಹಣ ಕಳೆದುಕೊಂಡ ಮಾಜಿ ಶಾಸಕ ಜೆ.ಆರ್.ಲೋಬೋ

Pinterest LinkedIn Tumblr

ಮಂಗಳೂರು, ಜುಲೈ 07: ಅಪರಿಚಿತ ಮೊಬೈಲ್ ಕರೆಗಳ ಮಾತಿಗೆ ಮರುಳಾಗಿ ಸಾಮಾನ್ಯ ಜನರು ತಮ್ಮ ಬ್ಯಾಂಕಿನಲ್ಲಿದ್ದ ಹಣವನ್ನು ಕಳೆದುಕೊಳ್ಳುವುದು ಸಾಮಾನ್ಯ.. ಆದರೆ ಇಲ್ಲಿ ವಂಚಕರ ಚಾಲಕಿತನಕ್ಕೆ ಮಂಗಳೂರಿನ ಮಾಜಿ ಶಾಸಕರೊಬ್ಬರು ಹಣ ಕಳೆದುಕೊಂಡಿರುವ ಘಟನೆ ನಡೆದಿರುವುದು ಎಂತ ವಿಪರ್‍ಯಾಸ ನೋಡಿ.

ಮಂಗಳೂರಿನ ಮಾಜಿ ಶಾಸಕ ಜೆ ಆರ್ ಲೋಬೊ ಅವರು ಚಾಲಾಕಿ ಖದೀಮರ ಮೊಬೈಲ್ ಕರೆಗಳ ಮಾತಿಗೆ ಮರುಳಾಗಿ ಹಣ ಕಳೆದುಕೊಂಡಿದ್ದಾರೆ. ಮಂಗಳೂರಿನ ಮಾಜಿ ಶಾಸಕ ಜೆ ಆರ್ ಲೋಬೋ ಅವರ ಮೊಬೈಲ್ ಕರೆ ಮಾಡಿದ ಚಾಲಾಕಿ ಖದೀಮರು ಲೋಬೊ ಅವರಿಂದ ಎ ಟಿ ಎಂ ಕಾರ್ಡ್ ನ ವಿವರ ಪಡೆದು ಹಣ ಲಪಡಾಯಿಸಿದ್ದಾರೆ. ಸ್ಟೆಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಕರೆಮಾಡಿರುವುದಾಗಿ ಪರಿಚಯಿಸಿಕೊಂಡ ಖದೀಮರು , ನೀವು ಎ ಟಿ ಎಂ ಕಾರ್ಡ್ ನ ಕೀ ವಿವರ ನೀಡಿಲ್ಲ ಈ ಕಾರಣ ನಿಮ್ಮ ಎ ಟಿ ಎಂ ಕಾರ್ಡ್ ನ್ನು ಬ್ಲಾಕ್ ಮಾಡುವುದಾಗಿ ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ದೂರವಾಣಿ ಕರೆಯನ್ನು ನಂಬಿದ ಮಾಜಿ ಶಾಸಕ ಜೆ ಆರ್ ಲೋಬೊ ತಮ್ಮ ಉಳಿತಾಯ ಖಾತೆಯ ಎ ಟಿ ಎಂ ಕಾರ್ಡ್ ನ , ಓ ಟಿ ಪಿ ನಂಬರ್ ಅನ್ನು ಕರೆಮಾಡಿದ ಖದೀಮರಿಗೆ ನೀಡಿದ್ದಾರೆ. ಈ ಪರಿಣಾಮ ಕ್ಷಣ ಮಾತ್ರದಲ್ಲಿ ಲೋಬೊ ಅವರ ಖಾತೆಯಿಂದ 50 ಸಾವಿರ ರೂಪಾಯಿ ಯನ್ನು ಖದೀಮರು ಎಗರಿಸಿದ್ದಾರೆ. ಮೂದಲು 25 ಸಾವಿರ ರೂಪಾಯಿ ನಂತರ 19,999 ಹಾಗು 5 ಸಾವಿರ ದಂತೆ ಲೋಬೊ ಅವರ ಖಾತೆಯಿಂದ ಹಣ ತೆಗೆಯಲಾಗಿದೆ.

ವಂಚನೆ ಗೊಳಗಾಗಿರುವುದನ್ನು ಅರಿತ ಮಾಜಿ ಶಾಸಕ ಜೆ ಆರ್ ಲೋಬೊ ಮಂಗಳೂರಿನ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಐ ಟಿ ಆಕ್ಟ್ ನಡಿ ಪ್ರಕರಣ ದಾಖಲಿಸಿಕೊಂಡ ಕದ್ರಿ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಚಾಲಾಕಿ ಖದೀಮರು ಯಾಮಾರಿಸಿ ಹಣ ಲಪಡಾಯಿಸಿದ ಮಂಗಳೂರಿನ ಅತ್ಯಂತ ಕುತೂಹಲ ಪ್ರಸಂಗ ಇದಾಗಿದ್ದು, ಬುದ್ಧಿವಂತ ,ಸುಶಿಕ್ಷಿತ ರಾಜಕೀಯ ಮುತ್ಸದಿ ಜೆ.ಆರ್.ಲೋಬೋರವರಂತವರೇ ವಂಚಕರಿಂದ ವಂಚನೆಗೊಳಗಾಗುವಾಗ ಇನ್ನು ಸಾಮಾನ್ಯ ಜನರ ಪಡೇನು ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಬ್ಯಾಂಕ್ ನ ಹೆಸರು ಹೇಳಿ ದೂರವಾಣಿ ಕರೆ ಮಾಡಿ ವಂಚಿಸುವ ನೂರಾರು ಪ್ರಕರಣಗಳು ದಿನ ನಿತ್ಯ ವರದಿಯಾಗುತ್ತಿರುವ ಸಂದರ್ಭದಲ್ಲೇ ನಿವೃತ್ತ ಕೆ.ಎ.ಎಸ್ ಅಧಿಕಾರಿ ಕೂಡಾ ಆಗಿರುವ ಮಾಜಿ ಶಾಸಕ ಜೆ.ಆರ್.ಲೋಬೊ ಅವರನ್ನೇ ಖದೀಮರು ಯಾಮಾರಿಸಿರುವ ರೀತಿ ಬಗ್ಗೆ ಚರ್ಚೆ ಆರಂಭವಾಗಿದೆ.

Comments are closed.