ಕ್ರೀಡೆ

ಧೋನಿಗೆ ರಾತ್ರೋರಾತ್ರಿ ‘ಓಂ ಫಿನಿಶಾಯ ನಮಃ’ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದು ಏಕೆ…? ಮುಂದೆ ಓದಿ…

Pinterest LinkedIn Tumblr

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕುರಿತಂತೆ ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್ ಅರ್ಧರಾತ್ರಿಯಲ್ಲಿ ಓಂ ಫಿನಿಶಾಯ ನಮಃ ಎಂದು ಧೋನಿಗೆ ಟ್ವೀಟ್ ಮಾಡಿದ್ದಾರೆ.

ಅದು ಯಾಕೆ ಅಂತೀರಾ? ಎಂಎಸ್ ಧೋನಿ ಅವರು ಇಂದು 37ನೇ ವಸಂತಕ್ಕೆ ಕಾಲಿಡುತ್ತಿದ್ದು ಈ ಹಿನ್ನೆಲೆಯಲ್ಲಿ ರಾತ್ರಿಯೇ ಸೆಹ್ವಾಗ್ ತಮ್ಮ ಟ್ವೀಟ್ ಖಾತೆಯಲ್ಲಿ ನೆಚ್ಚಿನ ಸ್ನೇಹಿತ ಧೋನಿಯ ಅಪರೂಪದ ಚಿತ್ರವೊಂದನ್ನು ಹಾಕಿ ಅದಕ್ಕೆ ಅಡಿ ಬರಹ ಹಾಕಿ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ.

ಕ್ರಿಕೆಟ್ ನಲ್ಲಿ ಅತೀ ವೇಗದ ಸ್ಟಂಪಿಂಗ್ ಗೆ ಹೆಸರಾದ ಧೋನಿ ನಿಮ್ಮ ಸ್ಟಂಪಿಂಗ್ ಗಿಂತಲೂ ವೇಗವಾಗಿ ಎಲ್ಲಾ ವಿಷಯದಲ್ಲೂ ಸಂತೋಷ ಹುಡುಕಿಕೊಂಡು ಬರಲಿ ಹಾಗೂ ಚಿತ್ರದಲ್ಲಿ ಧೋನಿ ಕ್ರೀಸ್ ಆಕ್ರಮಿಸಿಕೊಂಡಿರುವ ಪರಿಯನ್ನು ಹೋಲಿಸಿಕೊಂಡು ನಿಮ್ಮ ಜೀವನವನ್ನೂ ಸಹ ಇದರಂತೆ ಇನ್ನೂ ಹೆಚ್ಚಿನ ಕಾಲ ಆಕ್ರಮಿಸಿಕೊಂಡಿರಿ ಎಂದು ವಿಶೇಷವಾಗಿ ಟ್ವೀಟ್ ಮಾಡಿದ್ದಾರೆ.

ಕ್ರಿಕೆಟ್ ನಲ್ಲಿ ಗ್ರೇಟ್ ಫಿನಿಶರ್ ಖ್ಯಾತಿಗೆ ಭಾಜನರಾಗಿರುವ ಎಂಎಸ್ ಧೋನಿಯನ್ನು ತಮಾಷೆ ಮಾಡುವ ಸಲುವಾಗಿ ತಮ್ಮ ಟ್ವೀಟ್ ನಲ್ಲಿ ಓಂ ಫಿನಿಶಾಯ ನಮಃ ಎಂದು ಬರೆದಿದ್ದಾರೆ.

Comments are closed.