ಹೈದರಾಬಾದ್: ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಸಲಹೆ ನೀಡಿದ್ದಾರೆ.
ಇದೇ ವೇಳೆ, ಕ್ರೀಡೆಯಲ್ಲಿ ಬೆಟ್ಟಿಂಗ್ ಮತ್ತು ಜೂಜಿಗೂ ಕಾನೂನು ಮಾನ್ಯತೆ ನೀಡಬೇಕೆಂದು ಕಾನೂನು ಆಯೋಗದ ಶಿಫಾರಸನ್ನು ಅವರು ಬೆಂಬಲಿಸಿದ್ದಾರೆ.
‘ಅನೈತಿಕತೆಯನ್ನು ನಿರ್ಮೂಲನೆ ಮಾಡುತ್ತೇವೆ ಎಂಬುದು ಮೂರ್ಖತನ. ಜೂಜು ಮತ್ತು ಬೆಟ್ಟಿಂಗ್ ಅನ್ನು ಕಾನೂನು ಬದ್ಧಗೊಳಿಸಿ, ತೆರಿಗೆ ವ್ಯಾಪ್ತಿಗೆ ತರಬೇಕೆಂಬುದು ಉತ್ತಮ ಶಿಫಾರಸು. ಕೆಲವೊಂದು ಅನೈತಿಕ ಚಟುವಟಿಕೆಗಳನ್ನು ಕಾನೂನಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಅವುಗಳ ನಿಯಂತ್ರಣಕ್ಕೆ ಮಾಡಿದ ಪ್ರತಿಯೊಂದು ಪ್ರಯತ್ನವೂ ಅಕ್ರಮ ವ್ಯವಸ್ಥೆ ಅಥವ ಜಾಲದ ಅಭಿವೃದ್ಗೆ ದಾರಿ ಮಾಡುತ್ತದೆ. ಹಾಗೆಯೇ ವೇಶ್ಯಾವಾಟಿಕೆಯೂ ಎಲ್ಲೆಡೆ ಸರ್ವವ್ಯಾಪಿಯಾಗಿದೆ. ಅದನ್ನು ಒಂದು ಕಾನೂನು ಬಾಹಿರ ಚಟುವಟಿಕೆಯಾಗಿ ಉಳಿಸುವುದರಲ್ಲಿ ಅರ್ಥವಿಲ್ಲ,’ ಎಂದು ಹೆಗ್ಡೆ ಹೇಳಿದ್ದಾರೆ.
Comments are closed.