ಕರ್ನಾಟಕ

ಪರೀಕ್ಷಾರ್ಥಿಗಳಿಗೆ ತಾಳಿ, ಕಾಲುಂಗುರ ತೆಗೆಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ!

Pinterest LinkedIn Tumblr


ಬೆಂಗಳೂರು: ನೆಟ್‌ (ರಾಷ್ಟ್ರೀಯ ಅರ್ಹತಾ ಪರೀಕ್ಷೆ ) ಪರೀಕ್ಷಾರ್ಥಿಗಳಿಗೆ ತಾಳಿ,ಕಾಲುಂಗುರ ತೆಗೆದ ಬಳಿಕವಷ್ಟೇ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಿದ ಘಟನೆ ಜೆ.ಪಿ.ನಗರದ ಬ್ರಿಗೇಡ್‌ ಸ್ಕೂಲ್‌ ಪರೀಕ್ಷಾ ಕೇಂದ್ರದಲ್ಲಿ ಭಾನುವಾರ ನಡೆದಿದೆ.

ಕಠಿಣ ನಿಬಂಧನೆಗಳಿರುವ ಪರೀಕ್ಷಾ ಕೇಂದ್ರಕ್ಕೆ ತೆರಳಿದ ಮಹಿಳೆಯರು ಪರಿವೀಕ್ಷಕರ ನಿಬಂಧನೆಯಿಂದ ತೀವ್ರ ನೊಂದುಕೊಂಡಿದ್ದಾರೆ. ಕರಿಮಣಿ,ಕಾಲುಂಗುರ,ಬುರ್ಖಾ ತೆಗೆದರೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಹೇಳಿದ್ದಾರೆ.

ಕೆಲವರು ತಾಳಿ,ಕಾಲುಂಗರಗಳನ್ನು ತೆಗೆದು ಪತಿಯರ ಕೈಗಿಟ್ಟು ಪರೀಕ್ಷೆ ಬರೆದಿದ್ದಾರೆ.

ತಾಳಿ ,ಕಾಲುಂಗುರ ತೆಗೆಯುವಂತೆ ಪರೀಕ್ಷಾ ನಿಯಮವಿಲ್ಲ ಎಂದು ಹಲವರು ಕ್ರಮದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬುರ್ಖಾ ತೆಗೆಸಿದ ಬಗ್ಗೆಯೂ ಕೆಲವರು ಆಕ್ರೋಶ ಹೊರ ಹಾಕಿದ್ದು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂದು ಹೇಳಿದ್ದಾರೆ.

Comments are closed.