ಕರಾವಳಿ

ಹೃದಯದ ಸಮಸ್ಯೆ ಇರುವವರಿಗೆ ಇದನ್ನು ಯಾಕೆ ಮಾಡುತ್ತಾರೆ…ಗೋತ್ತೆ.?

Pinterest LinkedIn Tumblr

ಎಲೆಕ್ಟ್ರೋಕಾರ್ಡಿಯೋಗ್ರಾಮ್ ಅಥವಾ ಇಸಿಜಿ ಎಂಬುದು ಹೃದಯದ ಪರೀಕ್ಷೆಯ ಅತ್ಯಂತ ಸಾಮಾನ್ಯ ವಿಧಾನ. ಹೃದಯದ ವಿವಿಧ ಸಮಸ್ಯೆಗಳ ಪತ್ತೆಗೆ ಇಸಿಜಿಯು ಒಂದು ಉಪಯುಕ್ತ ಪರೀಕ್ಷಣಾ ಉಪಕರಣವಾಗಿದೆ. ಇಸಿಜಿ ಪರೀಕ್ಷೆಯು ಅಪಾಯರಹಿತ, ಕಡಿಮೆ ಬೆಲೆಯ ಮತ್ತು ಸುಲಭವಾಗಿ ನಡೆಸಬಹುದಾದ ಪರೀಕ್ಷೆಯಾಗಿದ್ದು, ಈ ಯಂತ್ರವು ಹೆಚ್ಚಿನ ವೈದ್ಯಕೀಯ ಸೌಲಭ್ಯಗಳಲ್ಲಿ ಸಿದ್ಧವಾಗಿ ದೊರಕುತ್ತದೆ.

ಇಸಿಜಿಗೆ ಸಿದ್ಧತೆ
ಯಾವುದೇ ಔಷಧಿ ತೆಗೆದುಕೊಳ್ಳುತ್ತಿದ್ದರೂ ಎಲ್ಲಾ ಮಾಹಿತಿ ವೈದ್ಯರಿಗೆ ನೀಡಬೇಕು.
ವ್ಯಾಯಾಮ ಮಾಡಿದ ಮತ್ತು ತಣ್ಣೀರು ಕುಡಿದ ತಕ್ಷಣ ಇಸಿಜಿ ಪರೀಕ್ಷೆ ಮಾಡಬಾರದು. ಇದರಿಂದ ತಪ್ಪು ಫಲಿತಾಂಶ ಹೊರಬರಬಹುದು.

ಇಸಿಜಿ ಹೇಗೆ ಮಾಡುತ್ತಾರೆ?
ರೋಗಿಯನ್ನು ಪರೀಕ್ಷಾ ಮಂಚದ ಮೇಲೆ ಮಲಗಿಸಿ, ತೋಳು, ಎದೆ ಮತ್ತು ಕಾಲಿಗಳನ್ನು ಸ್ವಚ್ಛಗೊಳಿಸಿ 10 ಎಲೆಕ್ಟ್ರೋಡುಗಳನ್ನು (ಅಥವಾ ಲೆಡ್) ಆ ಭಾಗಗಳಿಗೆ ಹೊಂದಿಸುತ್ತಾರೆ. ಈ ಸಂದರ್ಭದಲ್ಲಿ ಆ ಭಾಗಗಳಲ್ಲಿರುವ ಕೂದಲುಗಳನ್ನು ತೆಗೆಯಬೇಕಾಗುತ್ತದೆ. ಈ ಎಲೆಕ್ಟ್ರೋಡುಗಳು ಹೃದಯದಿಂದ ಉತ್ಪತ್ತಿಯಾಗುವ ವಿದ್ಯುತ್ತಿನ ಒತ್ತಡವನ್ನು ಪತ್ತೆ ಮಾಡುತ್ತವೆ. ಈ ಹೃದಯದ ವಿದ್ಯುತ್ ಒತ್ತಡಗಳ ರೇಖಾಚಿತ್ರವನ್ನು ಇಸಿಜಿ ಯಂತ್ರವು ಚಿತ್ರಿಸುತ್ತದೆ.ನಮಗೆ ನಂತರ ಅದನ್ನು ಪೇಪರ್ ನಲ್ಲಿ ಮುದ್ರಿಸಿ ಕೊಡುತ್ತಾರೆ. ನಂತರ ಈ ಎಲೆಕ್ಟ್ರೋಡುಗಳನ್ನು ತೆಗೆದುಹಾಕಲಾಗುತ್ತದೆ. ಐದು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಈ ಪರೀಕ್ಷೆಯು ಮುಗಿದು ಹೋಗುತ್ತದೆ.

ಈ ಪ್ರಕ್ರಿಯೆ ನಡೆಯುವಾಗ ಕೆಲವು ಬಾರಿ ಕೆಲವು ಕ್ಷಣಗಳ ನಮ್ಮನ್ನು ಉಸಿರು ಬಿಗಿ ಹಿಡಿಯುವಂತೆಯೂ ಕೇಳಬಹುದು. ಪರೀಕ್ಷೆ ನಡೆಯುವ ಸಮಯದಲ್ಲಿ ನಾವು ಆದಷ್ಟು ಶಾಂತಚಿತ್ತರಾಗಿರಬೇಕು, ಭಯಪಟ್ಟರೆ ಅಥವಾ ಬೇರೆ ಯಾವುದೇ ಭಾವನೆಗಳು ಇಸಿಜಿ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು.

ಇಸಿಜಿ ಯಾಕೆ ಮಾಡುತ್ತಾರೆ?
ಹೃದಯದಲ್ಲಿ ಹಾನಿಯಾಗಿದ್ದರೆ ಪತ್ತೆಹಚ್ಚಲು
ಹೃದಯದ ಬಡಿತದ ವೇಗ ಪತ್ತೆಹಚ್ಚಲು
ವರ್ತನೆಯ ಅತಿರೇಕತೆ ಇದೆಯೇ?
ಹೃದಯಾಘಾತದ ವಿವರ
ರಕ್ತನಾಳಗಳಿಗೆ ಸಂಬಂಧಪಟ್ಟ ಕಾಯಿಲೆ
ಹೃದಯದ ಸ್ನಾಯುಗಳು ಊದಿರುವ ಬಗ್ಗೆ ಫಲಿತಾಂಶ ಸಹಜವಾಗಿದ್ದರೆ…
ಹೃದಯ ಬಡಿತ: ನಿಮಿಷಕ್ಕೆ 60ರಿಂದ 100 ಸಲ ಬಡಿಯುತ್ತದೆ.
ಹೃದಯ ಮಿಡಿತ: ಸ್ಥಿರ ಮತ್ತು ಸಹಜವಾಗಿರುತ್ತದೆ.
ಫಲಿತಾಂಶ ಅಸಹಜವಾಗಿದ್ದರೆ…ಹೃದಯದ ಮಾಂಸಖಂಡಗಳಲ್ಲಿ ಹಾನಿ ಅಥವಾ ಬದಲಾವಣೆಯಾಗಿರುತ್ತದೆ.
ರಕ್ತದಲ್ಲಿರುವ ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಪ್ರಮಾಣಗಳಲ್ಲಿ ಏರಿಳಿತ
ವಂಶವಾಹಿನಿಯಾಗಿ ಹೃದಯದ ತೊಂದರೆ ಬಂದಿರಬಹುದು
ಹೃದಯ ಹಿಗ್ಗುವಿಕೆ
ಹೃದಯದ ನಾಳಗಳಲ್ಲಿ ಸ್ರವಿಸುವಿಕೆ ಅಥವಾ ಬಾತುಕೊಳ್ಳುವಿಕೆ
ಹಿಂದೆ ಆಗಿರುವ ಹೃದಯಾಘಾತ
ಹೃದಯದ ನಾಡಿಗಳಿಗೆ ರಕ್ತ ಪೂರೈಕೆಯ ಕೊರೆತ
ಹೃದಯದ ಮಿಡಿತದಲ್ಲಿ ಅಸಹಜತೆ

ಒಂದು ವೇಳೆ ಇಸಿಜಿಯು ಹೃದಯಾಘಾತ ಅಥವಾ ರಕ್ತನಾಳಕ್ಕೆ ಸಂಬಂಧಿಸಿದ ಕಾಯಿಲೆಯ ಸಾಧ್ಯತೆಯನ್ನು ಸೂಚಿಸಿದರೆ, ಸಮಸ್ಯೆಯ ಪೂರ್ಣ ಲಕ್ಷಣಗಳನ್ನು ತಿಳಿದುಕೊಳ್ಳಲು ಮತ್ತು ಅತ್ಯುತ್ತಮ ಥೆರಪಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಂಪೂರ್ಣವಾಗಿ ಮರು ಪರೀಕ್ಷೆಯನ್ನು ನಡೆಸಬೇಕಾಗುತ್ತದೆ. (ಈ ಮರು ಪರೀಕ್ಷೆಯು ಹೆಚ್ಚಾಗಿ ಒತ್ತಡ ಪರೀಕ್ಷೆ ಮತ್ತು ಹೃದಯದ ಕ್ಯಾಥರೈಸೇಶನ್ ಒಳಗೊಂಡಿರಬಹುದು). ಒಂದು ವೇಳೆ ಹೃದಯದ ಸ್ನಾಯುಗಳು ದಪ್ಪವಾಗಿದ್ದರೆ, ವಾಲ್ವುಲಾರ್ ಹೃದಯ ಖಾಯಿಲೆ ಅಥವಾ ಇತರ ಅಸಾಧಾರಣ ವಿನ್ಯಾಸಗಳ ಸಾಧ್ಯತೆಯನ್ನು ಕಂಡುಹಿಡಿಯಲು ಇಕೋ ಕಾರ್ಡಿಯೋಗ್ರಾಮ್ ನಡೆಸಬೇಕಾಗಬಹುದು. ಹೃದಯದ ವರ್ತನೆಯಲ್ಲಿನ ಏರುಪೇರು ತಲೆತಿರುಗುವಿಕೆ ಅಥವಾ ಇತರ ಹೃದ್ರೋಗದ ಸೂಚನೆಗಳಾಗಿರಬಹುದು.

ಇತಿ-ಮಿತಿಗಳೇನು?
ಇಸಿಜಿ ಪರೀಕ್ಷೆಯ ಸಮಯದಲ್ಲಿ ಮಾತ್ರವೇ ಇಸಿಜಿಯು ಹೃದಯದ ಬಡಿತದ ವೇಗ ಮತ್ತು ಪ್ರಮಾಣವನ್ನು ತಿಳಿಸುತ್ತದೆ. ಪದೇ ಪದೇ ಹೃದಯ ಬಡಿತದ ಏರುಪೇರು ನಡೆದರೆ, ಅದನ್ನು ಇಸಿಜಿಯು ಪತ್ತೆ ಹಚ್ಚಲಾರದು. ಅಸ್ಥಿರ ಅರಿತ್ಮಿಯಾಸ್ ದಾಖಲು ಮಾಡಲು ಆಂಬ್ಯುಲೇಟರಿ ಮಾನಿಟರ್ ಉಪಯೋಗಿಸಬೇಕಾಗುತ್ತದೆ.

Comments are closed.