ಬೆಂಗಳೂರು: ನಗರದ ರಾಜರಾಜೇಶ್ವರಿ ನಗರದಲ್ಲಿ ಫ್ಲ್ಯಾಟ್ನ ಬಾತ್ರೂಂನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಮತ್ತು ಅವರ ಪತ್ನಿಯ ಶವ ಪತ್ತೆಯಾಗಿದೆ.
ಟೆಕ್ಕಿ ಮಹೇಶ್ (35) ಮತ್ತು ಅವರ ಪತ್ನಿ ಶೀಲಾ (30) ಮೃತ ದುರ್ದೈವಿಗಳು. ಬಾತ್ರೂಂನಲ್ಲಿದ್ದ ಗ್ಯಾಸ್ ಗೀಸರ್ನಿಂದ ಕಾರ್ಬನ್ ಮೋನಾಕ್ಸೈಡ್ ವಿಷಾನಿಲ ಸೋರಿಕೆಯಾಗಿ ದಂಪತಿ ಮೃತಪಟ್ಟಿರುವ ಶಂಕೆ ಇದೆ ಪೊಲೀಸರು ತಿಳಿಸಿದ್ದಾರೆ. ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಶಿವಗಂಗಾ ಅಪಾರ್ಟ್ಮೆಂಟ್ನಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಮಂಗಳವಾರ ಮಧ್ಯಾಹ್ನ ದಂಪತಿಯ ಮಗಳು ಶಾಲೆಯಿಂದ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮಂಗಳವಾರ ಬೆಳಗ್ಗೆ ಮಕ್ಕಳು ಶಾಲೆಗೆ ತೆರಳಿದ ನಂತರ ದಂಪತಿ ಸ್ನಾನಕ್ಕೆ ತೆರಳಿದ್ದಾಗ ವಿಷಾನಿಲ ಸೇವಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತ ಮಹೇಶ್ ಮೂಲತಃ ಬೆಳಗಾವಿಯ ಅಥಣಿ ತಾಲೂಕಿನ ನಿವಾಸಿ. 7 ವರ್ಷಗಳ ಹಿಂದೆ ಶೀಲಾ ಜತೆ ಅವರಿಗೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಹೇಶ್ ವೈಟ್ಫೀಲ್ಟ್ ಹತ್ತಿರ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಪತ್ನಿ ಮತ್ತು ಮಕ್ಕಳ ಜತೆ ಶಿವಗಂಗಾ ಅಪಾರ್ಟ್ಮೆಂಟ್ನ ಮೊದಲ ಮಹಡಿಯ ಫ್ಲ್ಯಾಟ್ನಲ್ಲಿ ನೆಲೆಸಿದ್ದರು.
Comments are closed.