ರಾಷ್ಟ್ರೀಯ

ಚಿನ್ನ ದರದ ಗಣನೀಯ ಇಳಿಕೆಗೆ ಕಾರಣವೇನು?

Pinterest LinkedIn Tumblr


ನವದೆಹಲಿ: ಆಭರಣ ಖರೀದಿದಾರರಿಗೆ ಶುಭ ಸುದ್ದಿಯೊಂದಿದೆ. ಚಿನ್ನ ಮತ್ತು ಬೆಳ್ಳಿ ದರದಲ್ಲಿ ಕೊಂಚ ಇಳಿಕೆಯಾಗಿದೆ. 270 ರೂ. ಇಳಿಕೆ ಕಂಡಿರುವ ಚಿನ್ನ 10 ಗ್ರಾಂ ಗೆ 31,380 ರೂ. ಆಗಿದೆ.
ಬೇಡಿಕೆ ಕಡಿಮೆಯಾಗಿರುವುದು ಇಳಿಕೆಗೆ ಪ್ರಮುಖ ಕಾರಣವಾಗಿದೆ.

ಬೆಳ್ಳಿ ಸಹ 100 ರೂ. ಇಳಿಕೆ ಕಂಡಿದ್ದು ಕೆಜಿಗೆ 40,750 ರೂ. ನಲ್ಲಿ ವಹಿವಾಟು ನಡೆಸುತ್ತಿದೆ. ಕೈಗಾರಿಕಾ ಕ್ಷೇತ್ರದ ಬದಲಾವಣೆ ಮತ್ತು ನಾಣ್ಯ ವರ್ತಕರಿಂದ ಬೇಡಿಕೆ ಕಡಿಮೆಯಾದದ್ದು ಬೆಳ್ಳಿ ದರ ಇಳಿಕೆಗೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 0.09ಶೇ ಕಡಿಮೆಯಾಗಿದ್ದು ಶೇ,99.5 ಪರಿಶುದ್ಧ ಚಿನ್ನ 270 ರೂ. ಇಳಿಕೆ ಕಂಡಿದೆ. 31,230 ರಿಂದ 31,380ರ ನಡುವೆ ವಹಿವಾಟು ನಡೆಸುತ್ತಿದೆ. ಭಾರತದ ದೃಷ್ಟಿಕೋನದಲ್ಲಿ ಹೇಳುವುದಾದರೆ ಹಬ್ಬದ ಸೀಸನ್ ಮುಗಿದಿದ್ದು ಸಹ ಚಿನ್ನದ ದರ ಇಳಿಕೆಗೆ ಕಾರಣ ಎಂದು ವಿಶ್ಲೇಷಣೆ ಮಾಡಲಾಗಿದೆ. ಇನ್ನು ಕಮಾಡಿಟಿ ಮಾರುಕಟ್ಟೆಯಲ್ಲಿಯೂ ಸಹ ಚಿನ್ನ ಇಳಿಕೆ ಕಂಡಿದ್ದು ಹೂಡಿಕೆದಾರರು ಹಿಂದೆ ಸರಿಯುತ್ತಿದ್ದಾರೆ.

Comments are closed.