ರಾಷ್ಟ್ರೀಯ

ಶಿಕ್ಷಕಿಯರಿಂದ 5 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ದೋಷಿಗಳು ಎಂದ ಪಟನಾ ಕೋರ್ಟ್​

Pinterest LinkedIn Tumblr


ಪಟನಾ: ಐದು ವರ್ಷದ ಬಾಲಕಿ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ನಡೆಸಿದ್ದ ಇಬ್ಬರು ಶಿಕ್ಷಕಿಯರು ದೋಷಿಗಳೆಂದು ಪಟನಾ ನ್ಯಾಯಾಲಯ ತೀರ್ಪು ನೀಡಿದೆ.

ವಿಶೇಷ ಪೊಕ್ಸೊ ನ್ಯಾಯಾಲಯದ ನ್ಯಾಯಮೂರ್ತಿ ರವೀಂದ್ರ ನಾಥ್​ ತ್ರಿಪಾಠಿ ಗುರುವಾರ ಈ ತೀರ್ಪು ನೀಡಿದ್ದಾರೆ. ಪ್ರತಿಷ್ಠಿತ ಇಂಗ್ಲಿಷ್​ ಮಾಧ್ಯಮ ಶಾಲೆಯ ಶಿಕ್ಷಕಿಯರು ವಿದ್ಯಾರ್ಥಿನಿ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿಯೂ ಸಾಬೀತಾಗಿದೆ. ಇವರಿಗೆ ಜು.20ರಂದು ಶಿಕ್ಷೆಯ ಪ್ರಮಾಣ ಘೋಷಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

ನೂತನ್​ ಜೋಸೆಫ್​ ಹಾಗೂ ಇಂದು ಆನಂದ್​ ಎಂಬ ಇಬ್ಬರು ಶಿಕ್ಷಕಿಯರು ಅಪರಾಧಿಗಳಾಗಿದ್ದು, ಇವರಿಬ್ಬರ ವಿರುದ್ಧ ಭಾರತೀಯ ದಂಡಸಂಹಿತೆ ಹಾಗೂ ಪೊಕ್ಸೊ ಕಾಯಿದೆಯಲ್ಲಿ ದೋಷಿಗಳು ಎಂಬುದು ಸಾಬೀತಾಗಿದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕರಾದ ಸುರೇಶ್​ ಚಂದ್ರ ಪ್ರಸಾದ್​ ತಿಳಿಸಿದ್ದಾರೆ.

ಬಾಲಕಿಯ ಪಾಲಕರು ಪಟನಾದ ಮಹಿಳಾ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ ನಂತರ ನವೆಂಬರ್​ 2016ರಂದು ಜೋಸೆಫ್​ ಹಾಗೂ ಆನಂದ್​ರನ್ನು ಬಂಧಿಸಲಾಗಿತ್ತು. ನನ್ನ ಮಗಳನ್ನು ತರಗತಿಗೆ ಕರೆದು ಶಾಲೆಯಲ್ಲಿಯೇ ಈ ಇಬ್ಬರು ಶಿಕ್ಷಕಿಯರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪಾಲಕರು ದೂರಿನಲ್ಲಿ ತಿಳಿಸಿದ್ದರು.

Comments are closed.