ರಾಷ್ಟ್ರೀಯ

ಹಣಕಾಸು ಸಚಿವ ಯಾರೆಂದು ಜೇಟ್ಲಿ FB post ಬರೆಯಲಿ: ಕಾಂಗ್ರೆಸ್‌ ಲೇವಡಿ

Pinterest LinkedIn Tumblr


ಹೊಸದಿಲ್ಲಿ : ಕಾಂಗ್ರೆಸ್‌ ಪಕ್ಷ ದೇಶದ ಬಡಜನರಿಗೆ ಕೇವಲ ಘೋಷಣೆಗಳನ್ನು ನೀಡಿದೆ; ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಬಡಜನರಿಗೆ ಸಂಪನ್ಮೂಲ ನೀಡಿದ್ದು ಅದರಿಂದ ಬಡತನ ನಿರ್ಮೂಲನ ಮತ್ತು ವೇಗದ ಅಭಿವೃದ್ಧಿ ಸಾಧ್ಯವಾಗಿದೆ ಎಂದು ತನ್ನ ಫೇಸ್‌ ಬುಕ್‌ ಬ್ಲಾಗ್‌ ನಲ್ಲಿ ಬರೆದಿದ್ದ ಕೇಂದ್ರ ಸಚಿವ ಅರುಣ್‌ ಜೇಟ್ಲಿ ಅವರಿಗೆ ಕಾಂಗ್ರೆಸ್‌ ತಿರುಗೇಟು ನೀಡಿದೆ.

‘ಜೇಟ್ಲಿ ಯವರೇ, ಎಲ್ಲಕ್ಕಿಂತ ಮೊದಲು ನೀವು ದೇಶದ ಹಣಕಾಸು ಸಚಿವರು ಯಾರೆಂಬುದನ್ನು ಮತ್ತು ದೇಶದ ಆರ್ಥಿಕ ಸಮಸ್ಯೆಗಳು ಏನೆಂಬುದನ್ನು ಫೇಸ್‌ ಬುಕ್‌ ಪೋಸ್ಟ್‌ ನಲ್ಲಿ ಬರೆಯಬೇಕು; ದೇಶದಲ್ಲೀಗ ಒನ್‌ ಮ್ಯಾನ್‌ – ನೋ ಗವರ್ನ್ಮೆಂಟ್‌ ಸ್ಥಿತಿ ಇದೆ; ನರೇಂದ್ರ ಮೋದಿ ಸರಕಾರದಡಿ ದೇಶವು ಈಗ ಬನಾನಾ ರಿಪಬ್ಲಿಕ್‌ ಆಗಿದಯೇ ಎಂಬುದನ್ನು ನಾವು ತಿಳಿಯಬಯಸುತ್ತೇವೆ’ ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ.

‘ದೇಶದ ಹಣಕಾಸು ಮಂತ್ರಿ ಜೇಟ್ಲಿ ಯೋ ಪಿಯುಷ್‌ ಗೋಯಲ್‌ ಅವರೋ ಎಂಬುದನ್ನು ಜೇಟ್ಲಿ ಸ್ಪಷ್ಟೀಕರಿಸಬೇಕು; ದೇಶದ ಆರ್ಥಿಕತೆಯನ್ನು ಪ್ರಪಾತದಂಚಿಗೆ ತಂದು ನಿಲ್ಲಿಸಿದವರು ಯಾರೆಂಬುದನ್ನು ಜೇಟ್ಲಿ ತಿಳಿಸಬೇಕು’ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸಿಂಗ್‌ ಸುರ್‌ಜೇವಾಲಾ ಹೇಳಿದರು.

Comments are closed.