ಬೆಳಗ್ಗಿನ ಸಮಯದಲ್ಲಿ ಎದ್ದ ತಕ್ಷಣ ನಿಮ್ಮ ನಿತ್ಯಕರ್ಮಗಳನ್ನು ಮುಗಿಸಿದ ನಂತರ ಬೆಳಗಿನ ಜಾವ ನಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ! ನಿಂಬೆ ರಸ ಕುಡಿಯೋದ್ರಿಂದ ಸಿಗುವಂತ ಲಾಭಗಳೇನು? ಇಲ್ಲಿದೆ ನೋಡಿ.
* ನಿಂಬೆಯಲ್ಲಿ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಹಾಗೂ ಇನ್ನಿತರ ಕೆಲವೊಂದು ಪೋಷಕಾಂಶಗಳು ಜೀರ್ಣಾಂಗ ವ್ಯವಸ್ಥೆ, ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.
* ಬಾಯಿಯ ದುರ್ವಾಸನೆ ನಿವಾರಿಸುತ್ತದೆ ಹಲ್ಲು ಮತ್ತು ಒಸಡುಗಳು ಸಹಾ ಸುಸ್ಥಿತಿಯಲ್ಲಿರುತ್ತವೆ. ಹಲ್ಲುನೋವು ಮೊದಲಾದ ತೊಂದರೆಗಳಿಂದ ಮುಕ್ತರಾಗಲು ನೆರವಾಗುತ್ತದೆ.
* ನಿಂಬೆಯ ಅತ್ಯುತ್ತಮ ಗುಣವೆಂದರೆ ರಕ್ತಶುದ್ಧಿ, ರಕ್ತದಲ್ಲಿದ್ದ ವಿಷಕಾರಿ ವಸ್ತುಗಳನ್ನು ವಿಸರ್ಜಸುವ ಮೂಲಕ ರಕ್ತನಾಳ ಮತ್ತು ರಕ್ತಪರಿಚಲನಾ ವ್ಯವಸ್ಥೆ ಸುಸ್ಥಿತಿಯಲ್ಲಿರುವಂತೆ ನೆರವಾಗುತ್ತದೆ.
* ನಿಂಬೆರಸದ ಸೇವೆನೆಯಿಂದ ಬಾಯಿಯಲ್ಲಿ ದುರ್ವಾಸನೆಯಾಗುವುದು ಕಡಿಮೆಯಾಗುತ್ತದೆ ಹಾಗೂ ಉರಿಯೂತವನ್ನು ತಡೆಯುತ್ತದೆ. ಇದರಿಂದ ಊತ ಕಡಿಮೆಯಾಗುವುದು.
* ಸಂಧಿವಾತದಂತಹ ಉರಿಯೂತದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವವರು ನಿಂಬೆಯ ನೀರನ್ನು ಬಳಸಿಕೊಳ್ಳಬಹುದು. ಜೀರ್ಣಕ್ರಿಯೆ ಹೆಚ್ಚಿಸುವುದು ಹೊಟ್ಟೆಯಲ್ಲಿ ಕಂಡುಬರುವಂತಹ ಜೀರ್ಣರಸವು ನಿಂಬೆರಸಕ್ಕೆ ಸಮಾನವಾಗಿದೆ.
Comments are closed.