ಜೈಪುರ: ರಾಜಸ್ಥಾನದ ಭರತಪುರ ನಗರದ ಹುಡುಗಿಯೊಬ್ಬಳು ತನ್ನನ್ನು ಚೇಡಿಸಿದ ಯುವಕನಿಕನಿಗೆ ನಡುರಸ್ತೆಯಲ್ಲಿ ದೊಣ್ಣೆಯಿಂದ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದು ಕಳೆದ ಒಂದು ವಾರದ ಹಿಂದೆ ನಡೆದ ಘಟನೆ ಎನ್ನಲಾಗಿದೆ. ಯುವಕನಿಗೆ ಥಳಿಸುತ್ತಿರುವ ಹುಡುಗಿಯು “ನಿಮ್ಮನ್ನು ನೀವು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂದು ಭಾವಿಸುತ್ತೀ ಎಂದಾದರೆ ಅದು ನಿಮ್ಮ ತಪ್ಪು ಕಲ್ಪನೆ. ಯಾವೊಬ್ಬ ಹುಡುಗಿಯೂ ದುರ್ಬಲಳಲ್ಲ. ತಪ್ಪು ನಡೆಯುತ್ತಿದ್ದರೆ ಅದರ ವಿರುದ್ಧ ಧ್ವನಿ ಎತ್ತುವ ತಾಕತ್ತು ಅವರಲ್ಲಿದೆ” ಎಂದಿದ್ದಾರೆ.
ಭರತ್ಪುರ್ ನಿವಾಸಿಯಾಗಿರುವ ಈ ಯುವತಿಯು ಈ ಕುರಿತಾಗಿ ಪ್ರತಿಕ್ರಿಯಿಸಿದ್ದು, ಆ ಯುವಕ ಕಳೆದ ಹಲವಾರು ದಿನಗಳಿಂದ ತನ್ನನ್ನು ಹಿಂಬಾಲಿಸುತ್ತಿದ್ದ ಹಾಗೂ ಹೆಸರು ಹಾಳು ಮಾಡಲು ಇಲ್ಲ ಸಲ್ಲದ ವದಂತಿಗಳನ್ನು ಹಬ್ಬಿಸುತ್ತಿದ್ದ ಎಂದಿದ್ದಾಳೆ. ಇನ್ನು ಯುವತಿ ಆತನಿಗೆ ಹೊಡೆದ ದಿನವೇ ಸಾರ್ವಜನಿಕರು ವಿಡಿಯೋ ಮಾಡಿ ಇದನ್ನು ಸೋಷಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ.
Comments are closed.