ಕರಾವಳಿ

ಮನಪಾ ವ್ಯಾಪ್ತಿಯ ಒಳಚರಂಡಿ ಮತ್ತು ಕುಡಿಯುವ ನೀರಿನ ಸಮಸೈ ನಿವಾರಿಸಲು ಶಾಸಕ ವೇದವ್ಯಾಸ ಕಾಮತ್ ಸೂಚನೆ

Pinterest LinkedIn Tumblr

ಮಂಗಳೂರು : ಎಡಿಬಿ ಸಾಲ ಯೋಜನೆ 2 ಮತ್ತು ಕೇಂದ್ರ ಸರಕಾರದ ಅಮೃತ ಯೋಜನೆಯಡಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯಲಿರುವ ಒಳಚರಂಡಿ ಮತ್ತು ಕುಡಿಯುವ ನೀರಿನ ಯೋಜನೆಯ ಬಗ್ಗೆ ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಮತ್ತು ಮಂಗಳೂರು ಉತ್ತರ ಶಾಸಕ ಡಾ| ಭರತ್ ಶೆಟ್ಟಿಯವರು ಅಧಿಕಾರಿಗಳ ಸಭೆ ನಡೆಸಿದರು.

ಹಿಂದಿನ ಒಳಚರಂಡಿ ಯೋಜನೆಯು ವಿಫಲವಾಗಿರುವುದರಿಂದ ನಗರದ ಹೆಚ್ಚಿನ ಬಾವಿಗಳಿಗೆ ಒಳಚರಂಡಿ ನೀರು ಸೇರಿ ಬಾವಿಯ ನೀರು ಹಾಳಾಗುತ್ತಿದೆ ಮತ್ತು ಹೆಚ್ಚಿನ ಪ್ರದೇಶಗಳಲ್ಲಿ ಒಳಚರಂಡಿ ತ್ಯಾಜ್ಯ ತೆರೆದ ಚರಂಡಿಯಲ್ಲಿ ಹರಿಯುತ್ತಿದೆ. ಇದನ್ನು ಈ ಬಾರಿಯ ಹೊಸ ಯೋಜನೆಯಲ್ಲಿ ತಡೆಗಟ್ಟಬೇಕು ಎಂದು ವೇದವ್ಯಾಸ ಕಾಮತ್ ಸೂಚಿಸಿದರು.

ಒಳಚರಂಡಿ ಸಮಸ್ಯೆಗೆ ಎಬಿಡಿ 2ನೇ ಯೋಜನೆಯಲ್ಲಿ ನಡೆಯಲಿರುವ ಕಾಮಗಾರಿಯಿಂದ ಸಂಪೂರ್ಣ ಸಮಸ್ಯೆ ಪರಿಹಾರ ಕಾಣಬೇಕಾದರೆ ಏನು ಮಾಡಬೇಕು ಎಂದು ಅವರು ಅಧಿಕಾರಿಯಿಂದ ಮಾಹಿತಿ ಪಡೆದುಕೊಂಡರು. ಎಬಿಡಿ 2 ನೇ ಯೋಜನೆಯಲ್ಲಿ 2026 ವರೆಗೆ 24*7 ನೀರು ನೀಡುವ ಯೋಜನೆಯಾಗಿದ್ದು ಒಂದೇ ಒಂದು ಪ್ರದೇಶದಲ್ಲಿ 24*7 ನೀರು ಬರುವುದಿಲ್ಲ. 2 ನೇ ಯೋಜನೆಯಲ್ಲಿ 2046ರವರೆಗೆ 24*7 ನೀರು ನೀಡುತ್ತೇವೆ ಎಂದು ಹೇಳುತ್ತೀರಿ. ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿರಿ ಎಂದು ಮಾಹಿತಿ ಪಡೆದುಕೊಂಡರು.

ಈ ಎಲ್ಲಾ ಕಾಮಗಾರಿಗಳಿಗೆ ಅಗತ್ಯ ಬೇಕಾದ ಭೂ ಸ್ವಾಧೀನ ಬಗ್ಗೆ ಮಾಹಿತಿ ಪಡೆದುಕೊಂಡು, ಭೂ ಸ್ವಾಧೀನ ಪ್ರಕ್ರಿಯೆ ಅತೀ ಶೀಘ್ರದಲ್ಲಿ ಮಾಡಿ ಎರಡು ಯೋಜನೆಗಳನ್ನು ಯಶಸ್ವಿಯಾಗಿ ಮುಗಿಸಿ ಸಾರ್ವಜನಿಕರಿಗೆ ಇನ್ನು ಮುಂದೆ ಯಾವುದೇ ಸಮಸ್ಯೆಗಳು ಎದುರಾಗದಂತೆ ಮಾಡಿಕೊಡುವಂತೆ ತಿಳಿಸಿದರು.

ಶಾಸಕರುಗಳೊಂದಿಗೆ ಪಾಲಿಕೆ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸದಸ್ಯರಾದ ವಿಜಯ ಕುಮಾರ್ ಶೆಟ್ಟಿ, ಸುಧೀರ್ ಶೆಟ್ಟಿ ಹಾಗೂ ರಮೀಜಾ ಭಾನು ಭಾಗವಹಿಸಿದರು.

Comments are closed.