ಕರಾವಳಿ

ಅನೇಕ ರೋಗಗಳನ್ನು ನಿವಾರಿಸುವ ಶಕ್ತಿ ಈ ಸೊಪ್ಪಿನಲ್ಲಿದೆ

Pinterest LinkedIn Tumblr

ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಮೆಹಂದಿ ಹಾಕಿಕೊಳ್ಳಬೇಕೆಂದರೆ.. ಹಿತ್ತಲಿಗೆ ಹೋಗಿ ಗೋರಂಟಿ ಸೊಪ್ಪಿನ ಗಿಡದಲ್ಲಿ ಒಂದಷ್ಟು ಸೊಪ್ಪನ್ನು ಬಿಡಿಸಿಕೊಂಡು ಬಂದು ಅದನ್ನು ಚೆನ್ನಾಗಿ ಅರೆದು ಇನ್ನೊಬ್ಬರ ಕೈನಲ್ಲಿ ಹಾಕಿಸಿಕೊಳ್ಳುತ್ತಿದ್ದರು. ಆದರೆ ಇದೀಗ ತರ ತರಹದ ಕೋನಾ ಅದು ಇದು ಅಂತ ಬಂದಿವೆ ಬಿಡಿ.. ಯಾರೂ ಮೆಹಂದಿಯ ಕಡೆ ತಿರುಗಿ ಕೂಡ ನೋಡುವುದಿಲ್ಲ. ಆದರೆ ಬಹುತೇಕರಿಗೆ ತಿಳಿದಿಲ್ಲ ಗೋರಂಟಿ ಸೊಪ್ಪಿನಲ್ಲಿ ಅನೇಕ ರೋಗಗಳನ್ನು ನಿರ್ಮೂಲ ಮಾಡುವ ಔಷಧೀಯ ಗುಣ ಇದೆ ಎಂದು..

ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ..
ಗೋರಂಟಿ ಸೊಪ್ಪು ದೇಹದ ಉಷ್ಣಾಂಶವನ್ನು ಕಡಿಮೆ ಮಾಡುವುದರಲ್ಲಿ ಅತಿ ಹೆಚ್ಚು ಪರಿಣಾಮಕಾರಿಯಾಗಿದೆ.. ಹೌದು ದೇಹದ ಉಷ್ಣಾಂಶ ಹೆಚ್ಚಿದೆ ಎನ್ನುವವರು ರಜೆ ದಿನಗಳಲ್ಲಿ ತಮ್ಮ ತಮ್ಮ ಅಂಗೈ ಹಾಗೂ ಅಂಗಾಲುಗಳಿಗೆ ಮೆಹಂದಿಯನ್ನು ಬಳಸಿ..

ಅನೇಕ ಚರ್ಮ ರೋಗಗಳಿಗೆ ರಾಮಬಾಣ..
ಅಷ್ಟಲ್ಲದೇ ನಮ್ಮ ಹಿರಿಯರು ಬಳಸುತ್ತಾರೆಯೇ?? ಹೌದು ಈ ಮೆಹಂದಿ ಸೊಪ್ಪು ಏನಿದೆ ಇದು ಅನೇಕ ಚರ್ಮ ರೋಗಗಳಿಗೆ ರಾಮಬಾಣ.. ತುರಿಕೆ ಆಗಲಿ ಬೆವರು ಸಲೆಯಾಗಲಿ ಬೆನ್ನಿನ ಮೇಲೆ ಏಳುವ ಸಣ್ಣ ಸಣ್ಣ ಗುಳ್ಳೆಗಳಿಗಾಗಲಿ ತಕ್ಷಣ ಗುಣಪಡಿಸಿಕೊಳ್ಳಲು ಮೆಹಂದಿಯನ್ನು ಬಳಸಿ..

ಬಿಳಿ ಕೂದಲು ಹೋಗಿಸುವುದಕ್ಕೆ ನೈಸರ್ಗಿಕ ಮನೆಮದ್ದು..
ಇದು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ.. ಕೂದಲಿನ ಬಿಳಿ ಬಣ್ಣವನ್ನು ಮುಚ್ಚುವುದಕ್ಕಾಗಿ ಮೆಹಂದಿಯನ್ನು ಬಳಸುವುದು ಉಂಟು.. ಆದರೆ ಎಲ್ಲರೂ ರೆಡಿಮೇಡ್ ಕೆಮಿಕಲ್ ಮಿಶ್ರಿತವಾದದನ್ನು ಬಳಸುತ್ತಾರೆ.. ಅದರ ಬದಲಾಗಿ ನೈಸರ್ಗಿಕ ವಾಗಿ ಸಿಗುವ ಸೊಪ್ಪನ್ನು ಬಳಸಿ..

Comments are closed.