ರಾಷ್ಟ್ರೀಯ

ರಾಹುಲ್​ ಗಾಂಧಿ ಸಂಸತ್​ ಕಲಾಪದಲ್ಲಿ ಯಾರಿಗೆ ಕಣ್ಣೊಡೆದದ್ದು?

Pinterest LinkedIn Tumblr


ನವದೆಹಲಿ: ತೆಲುಗು ದೇಶಂ ಪಕ್ಷ ಎನ್​ಡಿಎ ಸರ್ಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ಗೊತ್ತುವಳಿಯ ಮೇಲಿನ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಕಲಾಪದೊಳಗೆ ಕಣ್ಣೊಡೆದು ಸುದ್ದಿಯಾಗಿದ್ದಾರೆ.

ಹೌದು, ರಾಹುಲ್​ ಗಾಂಧಿ ಕಲಾಪದೊಳಗೆ ಕಣ್ಣೊಡೆದದ್ದು ಯಾರಿಗೆ, ಏಕೆ ಕಣ್ಣೊಡೆದರು ಎಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಯಾಗುತ್ತಿದೆ. ಜತೆಗೆ ಕಣ್ಸನ್ನೆಯ ಹುಡುಗಿ ಪ್ರಿಯಾ ವಾರಿಯರ್​ ಜತೆಗೆ ರಾಹುಲ್​ನನ್ನು ಹೋಲಿಸಿ ಟ್ರೋಲ್​ ಮಾಡಲಾಗುತ್ತಿದೆ.

ಅವಿಶ್ವಾಸ ಗೊತ್ತುವಳಿಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಎನ್​ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್​ ಗಾಂಧಿ ತಮ್ಮ ಭಾಷಣದ ಕೊನೆಯಲ್ಲಿ ತಮ್ಮ ವಿರುದ್ಧ ಬಿಜೆಪಿ ನಾಯಕರು ನಡೆಸುವ “ಪಪ್ಪು” ಎಂಬ ಅಪಪ್ರಚಾರವನ್ನೂ ಮೋದಿ ಅವರ ವಿರುದ್ಧದ ಟೀಕೆಗೆ ಬಳಿಸಿಕೊಂಡ ರಾಹುಲ್​ ” ನೀವು ನನ್ನನ್ನು ಗೇಲಿ ಮಾಡಬಹುದು.

ನನ್ನ ಮೇಲೆ ನಿಮಗೆ ದ್ವೇಷವಿರಬಹುದು. ಅದಕ್ಕಾಗಿಯೇ ನೀವು ನನಗೆ “ಪಪ್ಪು” ಎಂದು ಕುಹಕವಾಡುತ್ತೀರಿ. ಆದರೆ, ನನಗೆ ನಿಮ್ಮ ಮೇಲೆ ಆ ರೀತಿಯ ದ್ವೇಷವಿಲ್ಲ,” ಎಂದು ಹೇಳಿ ಅವರು ಪ್ರಧಾನಿ ಬಳಿಗೆ ತೆರಳಿ ಅಪ್ಪಿಕೊಂಡರು. ಮೋದಿ ಅವರೂ ರಾಹುಲ್​ ಅವರನ್ನು ಮತ್ತೊಮ್ಮೆ ಕರೆದು ಅಪ್ಪಿಕೊಂಡರು.

Comments are closed.