ಕರಾವಳಿ

ಊಟದ ನಂತರ ಈ ಹಣ್ಣಿನ ಹೋಳು ಸೇವಿಸಿದರೆ ಯಾವ ಸಮಸ್ಯೆ ನಿವಾರಣೆ ಸಾಧ್ಯ…ಗೊತ್ತೆ.?

Pinterest LinkedIn Tumblr

ಅನಾನಸ್, ಇದು ಹೆಚ್ಚಿನ ಜನರು ಇಷ್ಟಪಟ್ಟು ತಿನ್ನುವ ಹಲವು ಹಣ್ಣುಗಳಲ್ಲಿ ಒಂದು. ಇದು ನಮ್ಮ ದೇಹದ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳನ್ನ ಒದಗಿಸುವುದರ ಜೊತೆಗೆ, ಹಲವು ಅರೋಗ್ಯ ಸಮಸ್ಯೆಗಳನ್ನ ದೂರಮಾಡುತ್ತದೆ. ಬನ್ನಿ ಹಾಗಾದರೆ ಅನಾನಸ್ ಹಣ್ಣಿನ ಸೇವನೆಯಿಂದ ಯಾವೆಲ್ಲ ಖಾಯಿಲೆಗಳನ್ನ ಗುಣಪಡಿಸಬಹುದು ಎಂದು ತಿಳಿಯೋಣ.

* ಊಟದ ನಂತರ ಈ ಹಣ್ಣನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ದಿನವೂ ಊಟದ ನಂತರ ಅನಾನಸ್ ಹಣ್ಣಿನ ಹೋಳುಗಳಿಗೆ ಸ್ವಲ್ಪ ಉಪ್ಪು ಮತ್ತು ಸ್ವಲ್ಪ ಕರಿಮೆಣಸಿನ ಪುಡಿಯನ್ನು ಹಚ್ಚಿ ಸೇವಿಸುವುದರಿಂದ ಅಜೀರ್ಣ ರೋಗ ದೂರವಾಗುತ್ತದೆ. ಹಾಗು ಕೆಮ್ಮು ಕಫ ಕಡಿಮೆಯಾಗುತ್ತದೆ.
* ಗರ್ಭಿಣಿ ಸ್ತ್ರೀಯರು ಅನಾನಸ್ನ್ನು ಎಂದಿಗೂ ತಿನ್ನಬಾರದು. ಇದು ಗರ್ಭವನ್ನು ಬೆಳೆಯಲು ಬಿಡುವುದಿಲ್ಲ ಅದನ್ನು ಸಂಕುಚಿತಗೊಲಿಸುತ್ತದೆ. ಅದರಿಂದಾಗಿ ಗರ್ಭಸ್ರಾವ ಆಗುವ ಸಂಭವವಿರುತ್ತದೆ.
* ಅನನಾಸಿನಲ್ಲಿ ಹೇರಳವಾಗಿ ನೈಸರ್ಗಿಕ ಪೊಟ್ಯಾಸಿಯಂ ಇರುವುದರಿಂದ ಮೂತ್ರ ಕಟ್ಟುವಿಕೆ, ಉರಿ ಮೂತ್ರ ಮುಂತಾದ ರೋಗಗಳಲ್ಲಿ ಗುಣಕಾರಿ.
* ಅನಾನಸ್ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಧೂಮಪಾನದಿಂದ ಉಂಟಾಗುವ ಅನೇಕ ದುಷ್ಪರಿಣಾಮಗಳು ದೂರವಾಗುತ್ತವೆ.
* ಚಿಕ್ಕ ಮಕ್ಕಳು ಅನಾನಸ್ ಹಣ್ಣನ್ನು ಸೇವಿಸುವುದರಿಂದ ಗಂಟಲಿನ ರೋಗವು ಬರುವುದಿಲ್ಲ.
* ಆನೆಕಾಲು ರೋಗ, ಕುಸ್ಟ, ಕಜ್ಜಿ, ಎಕ್ಸಿಮ ರೋಗಗಳಿಗೆ ಅನಾನಸು ಹಣ್ಣಿನ ರಸವನ್ನು ಲೇಪಿಸಿದರೆ ಹಿತಕರ.
* ಕಾಮಾಲೆ, ಯಕೃತ್ ವಿಕಾರ, ಗನೋರಿಯ,ಮೂತ್ರಕೋಶ ವ್ಯಾಧಿ, ಮೂತ್ರಾಷ್ಮರಿ,ಹೃದಯದ ಅನಿಯಮಿತ ಬಡಿತ, ಇತ್ಯಾದಿಗಳಲ್ಲಿ ಅನಾನಸಿನಿಂದ ಮಹತ್ತರವಾದ ಗುಣ ಕಂಡು ಬಂದಿದೆ.

Comments are closed.