ಅಂತರಾಷ್ಟ್ರೀಯ

ಕಾಲ್‌ ಸೆಂಟರ್‌ ವಂಚನೆ ಹಗರಣ: ಅಮೆರಿಕದಲ್ಲಿ 20ಕ್ಕೂ ಹೆಚ್ಚು ಭಾರತೀಯರಿಗೆ ಜೈಲು ಶಿಕ್ಷೆ

Pinterest LinkedIn Tumblr

ನ್ಯೂಯಾರ್ಕ್: ಅಮೆರಿಕದ ಇತಿಹಾಸದಲ್ಲೇ ಅತೀ ದೊಡ್ಡ ಕಾಲ್ ಸೆಂಟರ್ ವಂಚನೆ ಪ್ರಕರಣ ಎಂದು ಹೇಳಲಾಗುತ್ತಿದ್ದ ಇಂಡಿಯಾ ಕಾಲ್‌ ಸೆಂಟರ್‌ ಹಗರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಕೋರ್ಟ್ ತೀರ್ಪು ನೀಡಿದ್ದು, ಪ್ರಕರಣದ 20ಕ್ಕೂ ಹೆಚ್ಚು ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಿದೆ.

2016ರಲ್ಲಿ ಅಂತಿಮ ಹಂತ ತಲುಪಿದ್ದ ಕಾಲ್ ಸೆಂಟರ್ ಹಗರಣದ ತೀರ್ಪು ಇದೀಗ ಪ್ರಕಟವಾಗಿದ್ದು, 20ಕ್ಕೂ ಹೆಚ್ಚು ಅಪರಾಧಿಗಳಿಗೆ ನಾಲ್ಕರಿಂದ 20 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಲಾಗಿದೆ. ಅಲ್ಲದೆ ಜೈಲು ಶಿಕ್ಷೆ ಪೂರ್ಣಗೊಂಡ ಬಳಿಕ ಎಲ್ಲ ಅಪರಾಧಿಗಳನ್ನೂ ಅಮೆರಿಕದಿಂದ ಗಡಿಪಾರು ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಅಮೆರಿಕದ ಅಟಾರ್ನಿ ಜನರಲ್ ಜೆಫ್ ಅವರು ಮಾಹಿತಿ ನೀಡಿದ್ದು, ‘ಸಾವಿರಾರು ಅಮೆರಿಕನ್‌ ಪ್ರಜೆಗಳಿಗೆ ಲಕ್ಷಾಂತರ ಡಾಲರ್‌ ವಂಚಿಸಿರುವ ಭಾರತದಲ್ಲಿನ ಕಾಲ್‌ ಸೆಂಟರ್‌ಗಳ ಬಹುಕೋಟಿ ಡಾಲರ್‌ ಹಗರಣದಲ್ಲಿ ಶಾಮೀಲಾಗಿರುವ 20ಕ್ಕೂ ಹೆಚ್ಚು ಮಂದಿ ಭಾತೀಯ ಅಪರಾಧಿಗಳಿಗೆ ಅಮೆರಿಕದಲ್ಲಿ ನಾಲ್ಕರಿಂದ 20 ವರ್ಷಗಳ ಜೈಲು ಶಿಕ್ಷೆ ನೀಡಸಲಾಗಿದೆ. ಜೈಲು ಶಿಕ್ಷೆಯನ್ನು ಮುಗಿಸಿದ ಬಳಿಕ ಇವರನ್ನು ಭಾರತಕ್ಕೆ ಗಡಿಪಾರು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಅಂತೆಯೇ ಬಹು ವ್ಯಾಪ್ತಿ ಪ್ರದೇಶದ ಪ್ರಾಸಿಕ್ಯೂಶನ್‌ ಗೆ ಒಳಪಟ್ಟ ಪ್ರಪ್ರಥಮ ಹಾಗೂ ಭಾರೀ ದೊಡ್ಡ ಗಾತ್ರದ ಹಣ ವಂಚನೆ ಪ್ರಕರಣ ಇದಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ 20ಕ್ಕೂ ಅಧಿಕ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ. ಅಮೆರಿಕದ ಬೃಹತ್‌ ಸಂಖ್ಯೆಯ ಜನರನ್ನು ಈ ಹಗರಣದಲ್ಲಿ ಬಲಿಪಶು ಮಾಡಲಾಗಿದ್ದು, ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಪ್ರಾಸಿಕ್ಯೂಶನ್‌ ಯಶಸ್ಸು ಸಾಧಿಸಿದೆ. ಈ ಮೂಲಕ ಅಮೆರಿಕದ ಜನರಿಗೆ ನ್ಯಾಯ ದೊರಕಿದಂತಾಗಿದೆ ಎಂದು ಜೆಫ್ ಹೇಳಿದರು.

ಭಾರತೀಯ ಕಾಲ್‌ ಸೆಂಟರ್‌ಗಳು ಅನೇಕ ಬಗೆಯ ಟೆಲಿಫೋನ್‌ ವಂಚನೆ ಮಾದರಿಗಳನ್ನು ಬಳಸಿಕೊಂಡು ಹಿರಿಯ ಅಮೆರಿಕನ್‌ ಪ್ರಜೆಗಳು ಮತ್ತು ಸಕ್ರಮ ವಲಸಿಗರು ಸೇರಿದಂತೆ ಸಹಸ್ರಾರು ಮಂದಿ ಅಮಾಯಕರಿಗೆ ಲಕ್ಷಾಂತರ ಡಾಲರ್‌ ವಂಚಿಸಿವೆ ಎಂದು ಜೆಫ್ ಹೇಳಿದ್ದಾರೆ.

ಅಮೆರಿಕ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಕರೆ
ಅಮೆರಿಕದಲ್ಲಿರುವ ದಕ್ಷಿಣ ಏಷ್ಯಾದ ಸಂತ್ರಸ್ತರಿಗೆ ಅಮೆರಿಕದ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ್ದ ಕಾಲ್ ಸೆಂಟರ್ ನ ಸಿಬ್ಬಂದಿಗಳು, ಸರ್ಕಾರಕ್ಕೆ ಹಣ ಪಾವತಿ ಮಾಡದೆ ಇದ್ದರೆ, ಬಂಧಿಸುವುದಾಗಿ ಬೆದರಿಕೆ ಹಾಕಿದ್ದರು. ನಂತರ ಅಮೆರಿಕದ ಕಾಲ್ ಸೆಂಟರ್ ಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಡೆಬಿಟ್ ಕಾರ್ಡ್ ಹಾಗೂ ವೈರ್ ಟ್ರಾನ್ಸ್ಫರ್ ಮೂಲಕ ಹಣ ಪಾವತಿ ಮಾಡುವಂತೆ ಸೂಚಿಸಲಾಗಿತ್ತು. ಹಣ ಪಾವತಿ ಮಾಡುತ್ತಿದ್ದಂತೆಯೇ ಅದನ್ನು ಬೇರೆ ದೇಶಕ್ಕೆ ವರ್ಗಾಯಿಸಲಾಗಿದೆ ಎಂದು ಅಮೆರಿಕ ನ್ಯಾಯಾಂಗದ ಅಧಿಕಾರಿಗಳು ಹೇಳಿದ್ದಾರೆ.

Comments are closed.