ಗಲ್ಫ್

‘ಅಮ್ಮ ಐ ಲವ್ ಯೂ’  ಕನ್ನಡ ಚಲನಚಿತ್ರ ಕುವೈತ್ ನಲ್ಲಿ ಬಿಡುಗಡೆ

Pinterest LinkedIn Tumblr

ಕುವೈತ್: ದ್ವಾರಕೀಶ್ ಪ್ರೊಡಕ್ಷನ್ ಸಂಸ್ಥೆಯ, ಎಲ್ಲಾ ತಾಯಂದಿರಿಗೆ ಗೌರವ, ಅರ್ಪಣೆ ಸಲ್ಲಿಸಿರುವ, ಮನೆ ಮಂದಿ ಯೆಲ್ಲಾ ಕೂತು ವೀಕ್ಷಿಸಬಹುದಾದ, ಕುಟುಂಬಕ್ಕೆ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡಿರುವ ಚಲನಚಿತ್ರ ನಟನೆ, ಹಾಡುಗಳು, ಕಥೆ-ಚಿತ್ರಕಥೆ, ಛಾಯಾಗ್ರಹಣ, ನಿರ್ದೇಶನದಲ್ಲೂ ಅತ್ಯಂತ ಉತ್ತಮವಾಗಿ ಮೂಡಿ ಬಂದಿರುವ ಚಿತ್ರ, ’ಅಮ್ಮ ಐ ಲವ್ ಯೂ’ ಕನ್ನಡ ಚಲನಚಿತ್ರವು ಕುವೈತ್ ನಲ್ಲಿ ಬಿಡುಗಡೆಗೊಂಡಿದೆ.

ಕುವೈತ್ ನ ಫಾಹಹೀಲ್ ನ ಅಜಿಯಲ್ ಮಾಲ್ ನಲ್ಲಿ, ಸಿನೆಸ್ಕೇಪ್ ಅಜಿಯಲ್ ಸಿನೆಮಾ ಮಂದಿರದಲ್ಲಿ ಜುಲೈ 19 ರಂದು ಬಿಡುಗಡೆಗೊಂಡು ದಿನಾಲೂ ಸಂಜಿ 6:45 ರ ದೇಖಾವೆಯಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಆನ್ ಲೈನ್ ನಲ್ಲಿ ಮುಂಗಡ ಬುಕ್ಕಿಂಗ್ ಲಭ್ಯವಿದ್ದು, ಕೆಳಕಂಡ ಲಿಂಕ್ ನ್ನು ಉಪಯೋಗಿಸಿ ಮುಂಗಡ ಬುಕ್ಕಿಂಗ್ ಮಾಡಿ ಸೀಟು ಕಾಯ್ದಿರಿಸಬಹುದು.

https://www.cinescape.com.kw/movie-details/HO00000745/Amma-I-Love-You—Kannada

ಪ್ರತಿ ಸೋಮವಾರದ ದೇಖಾವೆಗೆ ಟಿಕೇಟ್ ದರದಲ್ಲಿ ವಿಶೇಷ ರಿಯಾಯಿತಿ ಇರುತ್ತದೆ ಎಂದು ಕುವೈತ್ ಗೆ ಕನ್ನಡ ಮತ್ತು ತುಳು ಚಲನಚಿತ್ರ ವಿತರಕರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

ಗಲ್ಫ್ ರಾಷ್ಟ್ರ ಕುವೈತ್ ಗೆ ಅಪರೂಪವಾಗಿರುವ ಕನ್ನಡ ಚಲನಚಿತ್ರವನ್ನು ಕನ್ನಡಿಗರು, ಕನ್ನಡ ಪ್ರೇಮಿಗಳು, ಚಲನಚಿತ್ರ ವೀಕ್ಷಕರು, ಅಭಿಮಾನಿಗಳು ಸಿನೆಮಾಮಂದಿರಕ್ಕೆ ಬಂದು ವೀಕ್ಷಿಸುವುದರ ಮೂಲಕ ಕನ್ನಡ ಭಾಷೆ, ಸಂಸ್ಕೃತಿ, ಕನ್ನಡ ಚಲನಚಿತ್ರ ರಂಗವನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ವರದಿ: ಸುರೇಶ್ ಶ್ಯಾಮ್ ರಾವ್ ನೇರಂಬಳ್ಳಿ

Comments are closed.