ರಾಷ್ಟ್ರೀಯ

ಮದ್ರಾಸ್‌ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶೆಯಾಗಿ ವಿ ಕೆ ತಾಹಿಲ್‌ರಮಣಿ ನೇಮಕ

Pinterest LinkedIn Tumblr

ಹೊಸದಿಲ್ಲಿ : ಮದ್ರಾಸ್‌ ಹೈಕೋರ್ಟ್‌ ನ ಹೊಸ ಚೀಫ್ ಜಸ್ಟಿಸ್‌ ಆಗಿ ಶೀಘ್ರವೇ ಜಸ್ಟಿಸ್‌ ವಿ ಕೆ ತಾಹಿಲ್‌ರಮಣಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.

ಈಗ ಮದ್ರಾಸ್‌ ಹೈಕೋರ್ಟಿನ ಚೀಫ್ ಜಸ್ಟಿಸ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಜಸ್ಟಿಸ್‌ ಇಂದಿರಾ ಬ್ಯಾನರ್ಜಿ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಭಡ್ತಿ ನೀಡಲಾಗಿದೆ.

ಸುಪ್ರೀಂ ಕೋರ್ಟ್‌ ಚೀಫ್ ಜಸ್ಟಿಸ್‌ ದೀಪಕ್‌ ಮಿಶ್ರಾ ನೇತೃತ್ವದ ವರಿಷ್ಠ ನ್ಯಾಯ ಮಂಡಳಿ ಬಿಡುಗಡೆ ಮಾಡಿರುವ ಟಿಪ್ಪಣಿ ಪ್ರಕಾರ ಜಸ್ಟಿಸ್‌ ಇಂದಿರಾ ಬ್ಯಾನರ್ಜಿ ಅವರನ್ನು ಸುಪ್ರೀಂ ಕೋರ್ಟಿಗೆ ಶಿಫಾರಸು ಮಾಡಲಾಗಿದೆ. ಹೀಗಾಗಿ ಮದ್ರಾಸ್‌ ಹೈಕೋರ್ಟ್‌ ಚೀಫ್ ಜಸ್ಟಿಸ್‌ ಸ್ಥಾನ ತೆರವಾಗಲಿರುವುದರಿಂದ “ಎಲ್ಲ ದೃಷ್ಟಿಯಿಂದಲೂ ಸೂಕ್ತ’ ಎನಿಸಿರುವ ಜಸ್ಟಿಸ್‌ ತಾಹಿಲ್‌ರಮಣಿ ಅವರನ್ನು ಆ ಹುದ್ದೆಗೆ ನೇಮಿಸಿದೆ.

ಇದೇ ವೇಳೆ ಪಟ್ನಾ ಚೀಫ್ ಜಸ್ಟಿಸ್‌ ರಾಜೇಂದ್ರ ಮೆನನ್‌ ಅವರು ದಿಲ್ಲಿ ಹೈಕೋರ್ಟ್‌ ಚೀಫ್ ಜಸ್ಟಿಸ್‌ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅಲ್ಲೀಗ ಪ್ರಭಾರ ಚೀಫ್ ಜಸ್ಟಿಸ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಜಸ್ಟಿಸ್‌ ಗೀತಾ ಮಿತ್ತಲ್‌ ಅವರನ್ನು ಜಮ್ಮು ಕಾಶ್ಮೀರ ಹೈಕೋರ್ಟ್‌ ಚೀಫ್ ಜಸ್ಟಿಸ್‌ ಆಗಿ ನೇಮಿಸಲಾಗಿದೆ. ಇಲ್ಲಿ ಚೀಫ್ ಜಸ್ಟಿಸ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬಿ ಡಿ ಅಹ್ಮದ್‌ ಅವರು ಈ ವರ್ಷ ಮಾರ್ಚ್‌ 15ರಂದು ನಿವೃತ್ತರಾಗಿದ್ದರು.

Comments are closed.