ಕರ್ನಾಟಕ

ಲಂಚ ಪಡೆದ ಗುತ್ತಿಗೆ ನೌಕರನಿಗೆ ಚಳಿ ಬಿಡಿಸಿದ ಶಾಸಕ ಕುಮಾರ ಬಂಗಾರಪ್ಪ

Pinterest LinkedIn Tumblr


ಶಿವಮೊಗ್ಗ (ಜುಲೈ 21) : ರೈತ ಮಹಿಳೆಯೊಬ್ಬರಿಂದ ಲಂಚ ಪಡೆದ ಗುತ್ತಿಗೆ ನೌಕರ ವಿರುದ್ಧ ಸೊರಬ ಶಾಸಕ ಕುಮಾರ ಬಂಗಾರಪ್ಪ ಗರಂ ಆದ ಆಗಿದ್ದಾರೆ. ನೇರವಾಗಿ ಕಚೇರಿಗೆ ಆಗಮಿಸಿ ಚಳಿ ಬಿಡಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಾಲೂಕಿನ ಕುಪ್ಪಗಡ್ಡೆ ಗ್ರಾಮದ ನಾಗಮ್ಮ ಎನ್ನುವ ಮಹಿಳೆ ಆಶ್ರಯ ಮನೆಗೆ ಸಂಬಂಧಿಸಿದ ಕೆಲಸ ನಿಮ್ಮಿತ್ತ ಸಬ್ ರಿಜಿಸ್ಟರ್ ಕಚೇರಿಗೆ ಆಗಮಿಸಿದ್ದರು. ಸರ್ಕಾರ ನಿಗಧಿ ಪಡಿಸಿರುವ ಶುಲ್ಕು 280 ರೂಪಾಯಿ ಇದ್ದು, ಮಹಿಳೆಯಿಂದ 880 ರೂಪಾಯಿ ಹಣವನ್ನು ಪಡೆದಿದ್ದರು. ಈ ವೇಳೆ ಸೊರಬ ಪಟ್ಟಣದಲ್ಲೇ ಇದ್ದ ಶಾಸಕ ಕುಮಾರ್ ಬಂಗಾರಪ್ಪನಿಗೆ ಮಹಿಳೆ ವಿಷಯ ತಿಳಿಸಿದ್ದಾರೆ.

ತಕ್ಷಣ ಕಚೇರಿಗೆ ಆಗಮಿಸಿ ಕುಮಾರ್ ಬಂಗಾರಪ್ಪ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ಸರ್ಕಾರಿ ನಿಗದಿ ಪಡಿಸಿದ ಶುಲ್ಕುಕ್ಕಿಂತ ಹೆಚ್ಚಿನ ಹಣ ಪಡೆದಿದ್ದನ್ನು ವಾಪಾಸ್ ಮಹಿಳೆಗೆ ಕೊಡಿಸಿದ್ದಾರೆ. ಸಬ್ ರಿಜಿಸ್ಟರ್ ಕಚೇರಿಯಲ್ಲಿ ಏಜೆನ್ಸಿ ಮೂಲಕ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಮುಬಾರಕ್ ಎಂಬ ಸಿಬ್ಬಂದಿ ಹೆಚ್ಚಿನ ಹಣ ಪಡೆದಿದ್ದು, ಇದನ್ನು ಈಗ ವಾಪಾಸ್ ಕೊಡಿಸಲಾಗಿದೆ. ಜತೆಗೆ ಅಧಿಕಾರಿಗಳಿಗೆ ಈ ರೀತಿ ಮುಂದೆ ಆಗದಂತೆ ಎಚ್ಚರಿಯಿಂದ ಕೆಲಸ ಮಾಡುವಂತೆ ಶಾಸಕರು ಸೂಚನೆ ನೀಡಿದ್ದಾರೆ.

Comments are closed.