ರಾಷ್ಟ್ರೀಯ

1ರಿಂದ 8ನೆ ತರಗತಿಯವರೆಗೆ ಒಂದೇ ಕೊಠಡಿ, ಒಬ್ಬರೇ ಟೀಚರ್!

Pinterest LinkedIn Tumblr

ನವದೆಹಲಿ: ಈ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿಯವರೆಗೆ ಪಾಠಗಳು ನಡೆಯುತ್ತವೆ; ಆದರೆ, ಯೋಗ್ಯ ಇರೋದು ಒಂದೇ ರೂಮು, ಒಬ್ಬರೇ ಟೀಚರು; ಫ್ಯಾನಿಲ್ಲ, ಕುಡಿಯಲು ನೀರಿಲ್ಲ; ದೇಹ ಬಾಧೆ ತೀರಿಸಲು ಶೌಚಾಲಯವೂ ಇಲ್ಲ. ಇದೆಲ್ಲಕ್ಕೂ ಮಿಗಿಲಾಗಿ ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದೆ ಈ ಶಾಲೆ. ದನಕರು, ಮೇಕೆ ಕುರಿಗಳೂ ಶಾಲೆಯ ಕೊಠಡಿಯೊಳಗೆ ನುಸುಳುವುದುಂಟು. ಇಂಥದ್ದೊಂದು ಶಾಲೆ ಇರೋದು ಉತ್ತರ ಪ್ರದೇಶದ ಫೈಜಾಬಾದ್​ನ ರೀದ್ ಗಂಜ್​ನಲ್ಲಿ. ಇಂಥ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಧೈರ್ಯ ತೋರುವ ಸಾಹಿಸಿ ಶಿಕ್ಷಕ ಮುಕೇಶ್ ಕುಮಾರ್ ಯಾದವ್ ಅವರಿ ಹ್ಯಾಟ್ಸ್ ಆಫ್ ಹೇಳಬೇಕು.

ಈ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿವರೆಗೆ 55 ವಿದ್ಯಾರ್ಥಿಗಳು ಬರುತ್ತಾರೆ. ಶಾಲೆಯಲ್ಲಿ ಹಲವು ಕೊಠಡಿಗಳು ಇದ್ದಾವಾದರೂ ಒಂದು ರೂಮು ಬಿಟ್ಟರೆ ಉಳಿದವು ಕೂರಲು ಯೋಗ್ಯವಿಲ್ಲ. ಶಿಕ್ಷಕ ಮುಕೇಶ್ ಯಾದವ್ ಅವರು ಫೈಜಾಬಾದ್​ನಲ ಹಲವು ಬಾರಿ ಸರಕಾರಿ ಅಧಿಕಾರಿಗಳನ್ನ ಭೇಟಿ ಮಾಡಿ ಶಾಲೆಯನ್ನು ರಿಪೇರಿ ಮಾಡಿಸುವಂತೆ ಮಾಡಿಕೊಂಡ ಮನವಿ ನೀರಿನಲ್ಲಿ ಹೋಮ ಮಾಡಿದಂತಾಯಿತು. ಬಡಪಾಯಿ ಶಿಕ್ಷಕನ ಮಾತಿಗೆ ಯಾರೂ ಕಿವಿಗೊಡಲಿಲ್ಲ. ದಯನೀಯ ಸ್ಥಿತಿಯಲ್ಲಿರುವ ಶಾಲೆಗೆ ಯಾರು ತಾನೆ ಮಕ್ಕಳನ್ನು ಕಲಿಸುತ್ತಾರೆ. ಶಾಲೆಯನ್ನು ಬಿಟ್ಟು ಹೋಗುವ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದೇ ಇದೆ. ಇಷ್ಟಾದರೂ ಮುಕೇಶ್ ಕುಮಾರ್ ಯಾದವ್ ಅವರಲ್ಲಿರುವ ಶಿಕ್ಷಕ ಪ್ರಜ್ಞೆ ಮಾತ್ರ ಕಳೆಗುಂದಿಲ್ಲ. ಏನೇ ಸ್ಥಿತಿ ಇದ್ದರೂ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡುವುದು ತನ್ನ ಕರ್ತವ್ಯ ಎಂದು ಹೇಳುವ ಮುಕೇಶ್ ಅವರಂಥ ಶಿಕ್ಷಕರು ನಮ್ಮ ಸರಕಾರಿ ಶಾಲೆಯ ಬೆನ್ನೆಲುಬು ಎಂದರೆ ಅತಿಶಯೋಕ್ತಿಯಲ್ಲ.

Comments are closed.